Advertisement
ಭಾರತೀಯ ಒಲಿಂಪಿಕ್ಸ್ ಸಮಿತಿ ಪ್ರಕಟಿಸಿರುವ ಕಾಮನ್ವೆಲ್ತ್ ಗೇಮ್ಸ್‌ಗೆ ತೆರಳಲಿರುವ ಆ್ಯತ್ಲೀಟ್‌ಗಳು, ಅಧಿ ಕಾರಿಗಳ ಪಟ್ಟಿಯ ಪ್ರಕಾರ ಇನ್ನೂ ಸುಮಾರು 109 ಮಂದಿ ವೀಸಾ ಅರ್ಜಿಯ ಅನುಮೋದನೆಗಾಗಿ ಕಾಯುತ್ತಿದ್ದಾರೆ. ಈ ಸಾಲಿನಲ್ಲಿ ಎರಡು ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್, ವನಿತಾ ಕುಸ್ತಿಪಟುಗಳಾದ ಬಬಿತಾ ಕುಮಾರಿ, ವಿನೇಶ್ ಪೊಗಟ್, ಪೂಜಾ ಧಂಡಾ, ಹಾಕಿ ಆಟಗಾರರಾದ ಲಲಿತ್ ಉಪಾಧ್ಯಾಯ, ಸವಿತಾ, ಬ್ಯಾಡ್ಮಿಂಟನ್ ಆಟಗಾರ್ತಿ ಋತ್ವಿಕಾ ಶಿವಾನಿ ಮೊದಲಾದವರು ಸೇರಿರುವುದು ಅಚ್ಚರಿ ಮೂಡಿಸಿದೆ.
ಶೂಟಿಂಗ್ ವಿಭಾಗದ ಬಹು ತೇಕ ಸ್ಪರ್ಧಿಗಳು ವೀಸಾಕ್ಕಾಗಿ ಕಾಯುತ್ತಿರುವುದು ವಿಪರ್ಯಾಸ. ಚೈನ್ ಸಿಂಗ್, ಜಿತು ರೈ, ಸಂಜೀವ್ ರಜಪೂತ್, ಗಗನ್ ನಾರಂಗ್, ದೀಪಕ್ ಕುಮಾರ್, ಅನಿಶ್ ಭನ್ವಾಲ, ನೀರಜ್ ಕುಮಾರ್, ಮೊಹ್ಮದ್ ಅಶಬ್, ವನಿತಾ ವಿಭಾಗದ ಅಂಜುಮ್ ಮೌಡ್ಗಿಲ್, ತೇಜಸ್ವಿನಿ ಸಾವಂತ್, ಹೀನಾ ಸಿಧು, ಸೀಮಾ ತೋಮರ್, ಮೆಹುಲಿ ಘೋಷ್, ಮನು ಭಾಕೆರ, ಶ್ರೇಯಸಿ ಸಿಂಗ್ ಅವರಿಗೂ ವಿಸಾ ಅನುಮೋದನೆಯಾಗಿಲ್ಲ. ಇವರೊಂದಿಗೆ ಹಾಕಿ ತಂಡದ ವಿಶ್ಲೇಷಣಾ ತರಬೇತುದಾರ ಕ್ರಿಸ್ಟೋಫರ್ ನಿಕೋಲಸ್, ವನಿತಾ ಕೋಚ್ ಡೇವಿಡ್ ಲಾನ್ ಜಾನ್, ಪುರುಷ ಬಾಕ್ಸಿಂಗ್‌ನ ವಿದೇಶಿ ಕೋಚ್ ಸಾಂಟಿಯಾಗೊ ಡೇನಿಯೆಲ್, ಬಾಸ್ಕೆಟ್‌ಬಾಲ್ ಮುಖ್ಯ ಕೋಚ್ ಜೋರನ್ ವಿಸಿಕ್ ಮತ್ತು ವನಿತಾ ತಂಡದ ಕೋಚ್ ರಾಜೀಂದರ್ ಸಿಂಗ್ ಕೂಡ ವೀಸಾ ನಿರೀಕ್ಷೆಯಲ್ಲಿದ್ದಾರೆ.
Related Articles
Advertisement