ಬಾಲಾಸೋರ್: ಸ್ವದೇಶಿ ನಿರ್ಮಿತ ಎಟಿಎಜಿಎಸ್ ಹೋವಿಟ್ಜರ್ ಫಿರಂಗಿ ವ್ಯವಸ್ಥೆಯು ಭಾರತೀಯ ಸೇನೆಯ ಪೂರ್ಣ ಅಗತ್ಯಗಳನ್ನು ಪೂರೈಸುವಷ್ಟು ಸಕ್ಷಮವಾಗಿದ್ದು, ಈ ಕ್ಷೇತ್ರದಲ್ಲಿ ವಿದೇಶದಿಂದ ಪರಿಕರಗಳನ್ನು ಆಮದು ಮಾಡಿ ಕೊಳ್ಳುವ ಅಗತ್ಯವಿಲ್ಲ ಎಂದು ಡಿಆರ್ ಡಿಒ ಪ್ರಮುಖ ವಿಜ್ಞಾನಿ ಹಾಗೂ ಎಟಿಜಿಎಸ್ ಯೋಜನೆಯ ನಿರ್ದೇಶಕ ಶೈಲೇಂದ್ರ ಗಾಬ್ಡೆ ಹೇಳಿದ್ದಾರೆ.
ಶನಿವಾರ ಎಟಿಜಿಎಸ್ ಹೋವಿಟ್ಜರ್ ಫಿರಂಗಿಯನ್ನು ಒಡಿಶಾದ ಬಾಲಾಸೋರ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೈಲೇಂದ್ರ ಗಾಬ್ಡೆ, ಎಟಿಜಿಎಸ್ ಹೋವಿಟ್ಜರ್ ಫಿರಂಗಿಯು ಪ್ರಖ್ಯಾತ ಬೋಫೋರ್ಸ್‌ಗಿಂತಲೂ ಎಷ್ಟೋ ಪಟ್ಟು ಅತ್ಯುತ್ತಮವಾಗಿದೆ ಎಂದರು.
ಇದನ್ನೂ ಓದಿ:ಪಕ್ಷ ಬಯಸಿದ ಜವಾಬ್ದಾರಿ ಹೊರಲು ರಾಹುಲ್ ಗಾಂಧಿ ರೆಡಿ: ಕಾಂಗ್ರೆಸ್
“”ಭಾರತೀಯ ಸೇನೆಗೆ 1589 ಟೋವ್ಡ್ ಫಿರಂಗಿಗಳು, 150 ಎಟಿಎಜಿಸ್‌ಗಳು ಹಾಗೂ 114 ಧನುಶ್ ಫಿರಂಗಿಗಳ ಅಗತ್ಯವಿದೆ. ಅಂದರೆ 1,800 ಫಿರಂಗಿಗಳು ಅದಕ್ಕೆ ಬೇಕಿವೆ. ಆದರೆ, ಈಗ ಎಟಿಜಿಎಸ್ ನೀಡುತ್ತಿರುವ ಪ್ರದರ್ಶನವನ್ನು ನೋಡಿದರೆ, ಎಲ್ಲ ಫಿರಂಗಿಗಳ ಅಗತ್ಯವನ್ನು ಇದೊಂದೇ ಪೂರೈಸಬಲ್ಲದು ಎಂದು ನನಗೆ ಖಾತ್ರಿಯಿದೆ” ಎಂದಿದ್ದಾರೆ.
“”ಇದು ಜಗತ್ತಿನಲ್ಲಿಯೇ ಅತ್ಯುತ್ತಮ ಗನ್ ವ್ಯವಸ್ಥೆ. ಇಂಥ ಅತ್ಯಾಧುನಿಕ ಗನ್ ವ್ಯವಸ್ಥೆ ಬೇರೆಲ್ಲೂ ಸಾಧ್ಯವಾಗಿಲ್ಲ” ಎಂದಿದ್ದಾರೆ ಗಾಬ್ಡೆ