Advertisement
ಜನ್ಮ ಕುಂಡಲಿಯಲ್ಲಿ ಎರಡನೇ ಮನೆ ಮಾತಿನ ಮನೆ
Related Articles
Advertisement
ಭಾರತೀಯರಿಗೆ ಸ್ವಾತಂತ್ರÂ ನೀಡಿದರೆ ಅದು ಸ್ವಾರ್ಥ, ಲಂಪಟ, ರಕ್ತ ಹೀರುವ ರಾಕ್ಷಸರ ಕೈಗೆ ದೇಶ ಕೊಟ್ಟು, ನರಳುವಂತಾಗುತ್ತದೆ ಎಂದು ಚರ್ಚಿಲ್ ಗುಡುಗಿ ನುಡಿದು ತನ್ನ ದೇಶದ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರÂದ ವಿಚಾರದಲ್ಲಿ ತನ್ನ ಪ್ರತಿರೋಧ ಸೂಚಿಸಿ ಭಾಷಣ ಮಾಡಿದ ವ್ಯಕ್ತಿ. ಭಾರತೀಯರ ಕಿವಿಗಿದು ಕಾದ ಸೀಸದಂತಿದ್ದರೂ ಇಂದಿನ ಪರಿಸ್ಥಿತಿ ಗಮನಿಸಿದಾಗ ಚರ್ಚಿಲ್ ಮಾತು ಸತ್ಯವಾಯ್ತಲ್ಲ ಎಂದು ಅನಿಸದಿರದು. ಹಿಟ್ಲರ್ ದಾಳಿಯಿಂದಾಗಿ ಬ್ರಿಟನ್ ತತ್ತರಿಸಿ ಕಂಗಾಲಾದರೂ ಪ್ರಧಾನಿಯಾಗಿ ದೇಶದ ಜನರಲ್ಲಿ ಎಂದೂ ಸೋಲುತ್ತಿರುವ ದೇಶ ಬ್ರಿಟನ್ ಅಲ್ಲ ಎಂಬ ತುಂಬು ಧೈರ್ಯ ಹಾಗೂ ಆತ್ಮ ವಿಶ್ವಾಸವನ್ನು ತನ್ನ ವಾಕ್ ಶಕ್ತಿಯಿಂದ ಸದಾ ತುಂಬುತ್ತಲೇ ಇದ್ದ. ಭರವಸೆ ಕೂಡಾ ಕೊಡುತ್ತಿದ್ದ. ಚರ್ಚಿಲ್ ಬಗ್ಗೆ ಜನಕ್ಕೆ ವಿಶ್ವಾಸವಿತ್ತು. ಅವನ ಮಾತಿನ ಶಕ್ತಿ ಅದು. ನಿಜ ಚರ್ಚಿಲ್ ಮಾತು ಉಳಿಸಿಕೊಂಡಿದ್ದ. ಶುಭ ಗ್ರಹಗಳಾದ ಗುರು ಶುಕ್ರ ಹಾಗೂ ಬುಧರ ಶಕ್ತಿ ಮಾತಿನ ಮಂಟಪದಲ್ಲಿ ಚರ್ಚಿಲ್ ಅದ್ಭುತವೆನಿಸಲು ಅವಕಾಶ ನೀಡಿದವು. ಕೇತುದೋಷ ಕೆಲವೊಮ್ಮೆ ಮಾತಿನಲ್ಲಿ ಉಗ್ಗು ತರುತ್ತಿತ್ತು. ಬಾಲ್ಯದಲ್ಲಿನ ತಂದೆತಾಯಿಗಳ ಆರೈಕೆಯ ಕೊರತೆ ಕೇತುವಿನಿಂದ ಈ ಉಗ್ಗು ಆಗಾಗ ತೊಂದರೆ ಕೊಡುತ್ತಿತ್ತು.
ಆಡಿದ್ದು ಮಾಡಲಾಗದೇ ಸೋತ ಜುಲ್ಫಿಕರ್ ಭುಟ್ಟೋ
ಭುಟೋ ಕುಟುಂಬ ಯಾರಿಗೆ ತಿಳಿದಿಲ್ಲ? ಭಾರತೀಯರಿಗಂತೂ ಭುಟ್ಟೋ ಒಂದರ್ಥದಲ್ಲಿ ಆಪರಿಚಿತರ ಸಾಲಿಗೆ ಸೇರುವ ಹಾಗೆ ಕಂಡರೂ ಭಾರತದೊಂದಿಗಿನ ದ್ವೇಷವನ್ನು ಪ್ರತಿಪಾದಿಸುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಕುಟುಂಬವಾಗಿ ಕಾರಣವಲ್ಲದ ಕಾರಣಕ್ಕೆ ಹುತಾತ್ಮರಾಗುವ ಸ್ಥಿತಿ ಕಂಡು ಕನಿಕರ, ಸಿಟ್ಟು ಭಾರತೀಯರಿಂದ ಹೊಂದುವ ವಿಪರ್ಯಾಸ ಹೊಂದಿದ ಕುಟುಂಬ. ಭಾರತೀಯರನ್ನು ವಿಶ್ವಸಂಸ್ಥೆಯ ತನ್ನ ಭಾಷಣದಲ್ಲಿ ನಾಯಿಗಳು ಎಂದು ಕರೆದ ವ್ಯಕ್ತಿ ಜುಲ್ಫಿಕರ್ ಆಲಿ ಭುಟ್ಟೋ. ಸಾವಿರ ವರ್ಷಗಳ ಕಾಲ ಭಾರತೀಯರ ವಿರುದ್ಧ ಧರ್ಮಯುದ್ಧ ಸಾರಿದ, ಆದರೆ ಭಾರತದ ವಿರುದ್ಧ 1971ರಲ್ಲಿ ನಡೆದ ಯುದ್ಧದಲ್ಲಿ ಸೋತು ಸುಣ್ಣಾಗಿ ಲಕ್ಷಕ್ಕೂ ಮೀರಿ ಸೆರೆಸಿಕ್ಕ ತನ್ನ ದೇಶದ ಸೈನಿಕರನ್ನು ಬಿಡುಗಡೆ ಮಾಡಿ ಎಂದು ಅಂಗಲಾಚಿದ ವ್ಯಕ್ತಿ. ಭುಟ್ಟೋ ಜಾತಕದಲ್ಲಿ ಕರ್ಕಾಟಕ ರಾಶಿ ಇವರ ಮಾತಿನ ಮನೆ. ಇದರ ಅಧಿಪತಿಗೆ ರಾಹುದೋಷ ಬೇರೆ. ಯುಕ್ತವಲ್ಲದ ವ್ಯಯಸ್ಥಾನದಲ್ಲಿ ಚಂದ್ರ ದುರ್ಬಲ. ಮೇಲಿಂದ ಚಂದ್ರನಿಗೆ ದುರ್ದೈವದಿಂದ ಹತ್ತಿದ ಕೇಮದ್ರುಮದಂಥ ಕೆಟ್ಟ ಯೋಗ. ದುಷ್ಟರಾದ ಶನಿ ಕೇತು ಕುಜರ ದೃಷ್ಟಿಯ ಪ್ರಭಾವ ಕೂಡಾ ಚಂದ್ರನ ಮೇಲೆ. ಮನೋಹರತೆಯನ್ನು ಮಾತಿಗೆ ಕಲ್ಪಿಸಿಕೊಡಬೇಕಾದ ಚಂದ್ರ ನಷ್ಟದ ಮನೆಯಲ್ಲಿ ಸ್ಥಿತನಾಗಿ ದುಷ್ಟರ ಪ್ರಭಾವದಿಂದ ಮಾತಿಗೆ ನಡವಳಿಕೆಗೆ ಹೊಂದಾಣಿಕೆ ಇಲ್ಲದೆ ಜುಲ್ಫಿಕರ್ ಆಲಿ ಭುಟ್ಟೋ ಪರದಾಡಿದ್ದು ಅಂತಿಂಥ ರೀತಿಯಲ್ಲಲ್ಲ. ಮರಣಾಧಿಪತಿಯಾದ ಶನೈಶ್ಚರನ ಮುಖ್ಯ ದಶಾಕಾಲವೂ, ಚಂದ್ರನ ಭುಕ್ತಿಯೂ ಇದ್ದಾಗ, ಇದೇ ಚಂದ್ರನ ಸಕಾರಾತ್ಮಕವಲ್ಲದ ಸ್ಪಂದನಗಳು, ಶನೈಶ್ಚರನು ಸೂಚಿಸುವ ಸೆರೆಮನೆಯ ಗೋಳು ಇತ್ಯಾದಿ ಸೇರಿ, ಆ ಕಾಲದ ಪಾಕಿಸ್ತಾನದ ಸರ್ವಾಧಿಕಾರಿ ಜಿಯಾ ಉಲ್ ಹಕ್‌ರಿಂದ ನೇಣುಗಂಬ ಏರಿದ್ದು ಭುಟ್ಟೋ ಸ್ಥಿತಿಯಾಯ್ತು. ಭುಟ್ಟೋ ಆಡಿದ ಕೊನೆಯ ಮಾತು “ನಾನು ನಿಷ್ಪಾಪಿ, ಮುಗ್ಧ’ ಎಂದು. ಜಿಯಾ ವೈಯುಕ್ತಿಕವಾಗಿ ಆಡಿದ ಖಾಸಗಿ ಸ್ವರೂಪದ ಭುಟ್ಟೋ ಮಾತುಗಳಿಂದ ಅಪಮಾನಕ್ಕೊಳಗಾಗಿ ಭುಟ್ಟೋ ಎಂದರೆ ವ್ಯಗ್ರರಾಗುತ್ತಿದ್ದರು ಎಂಬ ವದಂತಿಯೂ ಇದೆ. ಇದು ಹೌದಾದರೆ ಮಾತು ಒಬ್ಬ ವ್ಯಕ್ತಿಯ ಜೀವನ್ಮರಣದ ಪರಿಸ್ಥಿತಿಯಲ್ಲಿ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ.
ಅನಂತಶಾಸ್ತ್ರೀ