Advertisement

ಭಾರತೀಯ ಸೇನಾ ಕಾರ್ಯ ಸದಾ ಸ್ಮರಣೀಯ: ರಮೇಶ್‌ ಕಳಸದ

04:12 PM Dec 10, 2021 | Shwetha M |

ವಿಜಯಪುರ: ಸಶಸ್ತ್ರ ಪಡೆಗಳು ಹಗಲಿರುಳೆನ್ನದೇ ದೇಶ ರಕ್ಷಣೆಯ ಕಾಯಕದಲ್ಲಿ ನಿರತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಹೇಳಿದರು.

Advertisement

ವಿಜಯಪುರ ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಸೇನೆ ಅನುಕ್ಷಣವೂ ದೇಶ ರಕ್ಷಣೆಗಾಗಿ ಗಡಿಯಲ್ಲಿ ಸೇವೆ ಸಲ್ಲಿಸುತ್ತದೆ. ಹೀಗಾಗಿ ನಾವು ಭಾರತೀಯ ಸಶಸ್ತ್ರ ಪಡೆಗಳ ಅಮೋಘ ಸೇವೆಯನ್ನು ಸದಾ ಸ್ಮರಿಸಬೇಕು. ರಕ್ಷಣಾ ಪಡೆಗಳ ಕಾರ್ಯ ಅತ್ಯಂತ ಅನನ್ಯ, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಬೇಕು ಎಂದು ಕರೆ ನೀಡಿದರು.

ಸಶಸ್ತ್ರ ಧ್ವಜ ದಿನಾಚರಣೆ ಮಹತ್ವದ ಕುರಿತು ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಜಯಪುರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಎಸ್‌.ಬಿ. ಪಾಟೀಲ ಅವರು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಮಹತ್ವದ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಹಾ.ಕ್ಯಾ. ಎನ್‌.ಡಿ. ಸೂರ್ಯವಂಶಿ, ವಿಜಯಕುಮಾರ್‌ ಅಮೀನಭಾವಿ, ಪಿ.ಕೆ.ರಾಠೊಡ, ಪ್ರವೀಣ ನಾಗಮೋತಿ, ಮೀರಾ ಐಗಳಿ, ಗುರುರಾಜ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next