Advertisement

ಭಾರತೀಯ ಸೇನೆಯ ಚೀತಾ ಪತನ : ಇಬ್ಬರು ಪೈಲಟ್ ಗಳ ದುರ್ಮರಣ

08:16 AM Sep 28, 2019 | Team Udayavani |

ನವದೆಹಲಿ: ಭಾರತೀಯ ಸೇನೆಯ ಚೀತಾ ಹೆಲಿಕಾಫ್ಟರ್ ಒಂದು ಭೂತಾನ್ ನಲ್ಲಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಗಳು ದುರ್ಮರಣಕ್ಕೀಡಾಗಿದ್ದಾರೆ. ಭಾರತೀಯ ಸೇನೆಯ ಲೆಫ್ಟಿನೆಂಟ್ ಶ್ರೇಣಿಯ ಪೈಲಟ್ ಮತ್ತು ತರಬೇತಿಯಲ್ಲಿದ್ದ ಭೂತಾನ್ ಸೇನೆಯ ಪೈಲಟ್ ಗಳು ಸಾವಿಗೀಡಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Advertisement

ಸಾವಿಗೀಡಾದವರನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ರಜನೀಶ್ ಪರ್ಮಾರ್ ಮತ್ತು ರಾಯಲ್ ಭೂತಾನ್ ಸೇನೆಯ ಕ್ಯಾಪ್ಟನ್ ಕಲ್ಝಾಂಗ್ ವಾಂಗ್ಡಿ ಎಂದು ಗುರುತಿಸಲಾಗಿದೆ.

ಮಂಜು ಕವಿದ ವಾತಾವರಣದ ಕಾರಣದಿಂದ ಈ ಅಪಘಾತ ಸಂಭವಿಸಿದೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಅವರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ 01 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಭೂತಾನ್ ನ ಖೆಂಟೋಂಗ್ಮನಿ ಸಮೀಪ ಈ ಅವಘಡ ಸಂಭವಿಸಿದೆ. ಇದೀಗ ಹೆಲಿಕಾಫ್ಟರ್ ಪತನಗೊಂಡಿರುವ ಜಾಗವನ್ನು ಪತ್ತೆ ಮಾಡಲಾಗಿದ್ದು ಪತನಗೊಂಡಿರುವ ಹೆಲಿಕಾಫ್ಟರ್ ನ ಅವಶೇಷಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next