Advertisement

ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

11:35 PM Oct 18, 2021 | Team Udayavani |

ಹೊಸದಿಲ್ಲಿ: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಇತ್ತೀಚೆಗೆ ನಡೆದ “ಕೇಂಬ್ರಿಯನ್‌ ಪ್ಯಾಟ್ರೋಲ್‌ ಎಕ್ಸರ್‌ಸೈಜ್‌’ ಎಂಬ ಸೇನಾ ಕವಾಯತು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭಾರತೀಯ ಭೂಸೇನೆಯ 4/5 ಗೋರ್ಖಾ ರೈಫ‌ಲ್ಸ್‌ ತುಕಡಿ, ಚಿನ್ನದ ಪದಕ ಗೆದ್ದು ಬೀಗಿದೆ.

Advertisement

ಯು.ಕೆ.ಯ ವೇಲ್ಸ್‌ನಲ್ಲಿ ಈ ಸ್ಪರ್ಧೆ ಅ. 13ರಿಂದ 15ರ ವರೆಗೆ ನಡೆದಿದ್ದು, ವಿಶ್ವದ ನಾನಾ ದೇಶಗಳ 96 ಸೇನಾ ತುಕಡಿಗಳು ಇದರಲ್ಲಿ ಭಾಗವಹಿಸಿದ್ದವು. ಪ್ರತಿಯೊಂದು ಸ್ಪರ್ಧಾಳು ತಂಡದಲ್ಲಿರುವ ಸ್ಫೂರ್ತಿಯ ಸೆಲೆ ಹಾಗೂ ಪರಿಶ್ರಮವನ್ನು ತಾಳೆ ಹಾಕುವಂಥ ಈ ಸ್ಪರ್ಧೆಯನ್ನು ಸೇನಾ ಕವಾಯತುಗಳ ಒಲಿಂಪಿಕ್ಸ್‌ ಎಂದೇ ಪರಿಗಣಿಸಲಾಗುತ್ತದೆ.

ವೇಲ್ಸ್‌ನಲ್ಲಿದ್ದ ಪ್ರತಿಕೂಲ ಹವಾಮಾನ ಹಾಗೂ ಕಡಿದಾದ ಬೆಟ್ಟಗುಡ್ಡಗಳ ಸವಾಲನ್ನು ಸಮರ್ಥವಾಗಿ ಮೆಟ್ಟಿನಿಂದ ಗೋರ್ಖಾ ರೈಫ‌ಲ್ಸ್‌ ತುಕಡಿ, ತನ್ನ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಬಂಗಾರದ ಪದಕದ ಗೌರವಕ್ಕೆ ಭಾಜನವಾಗಿದೆ.

ಇದನ್ನೂ ಓದಿ:ಭಾರತದ ಗೆಲುವಿನ “ಅಭ್ಯಾಸ”; ಬ್ಯಾಟಿಂಗ್‌ನಲ್ಲಿ ಮಿಂಚಿದ ಇಶಾನ್‌, ರಾಹುಲ್‌

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next