Advertisement

ಪಾಕ್‌ ಉಗ್ರರಿಗೆ ಸಿಂಹಸ್ವಪ್ನ: ಸೇನೆಯಿಂದ Sniper Rifle ಬಳಕೆ ಆರಂಭ

06:10 AM Feb 09, 2019 | udayavani editorial |

ಉಧಾಂಪುರ : ಪಾಕ್‌ ನುಸುಳುಕೋರ ಉಗ್ರರನ್ನು ಮಟ್ಟಹಾಕಲು ಅನುಕೂಲಿಸುವ ಅತ್ಯಾಧುನಿಕ ಸ್ನೆ„ಪರ್‌ ರೈಫ‌ಲ್‌ಗ‌ಳ ಬಳಕೆಯನ್ನು ಭಾರತೀಯ ಸೇನೆ ಎಲ್‌ಓಸಿ ಉದ್ದಕ್ಕೂ ಆರಂಭಿಸಿದೆ ಎಂದು ಉನ್ನತ ಸೇನಾಧಿಕಾರಿಯೋರ್ವರು ತಿಳಿಸಿದ್ದಾರೆ. 

Advertisement

ಕಳೆದ ಜನವರಿ ತಿಂಗಳಲ್ಲಿ ನಾರ್ದರ್ನ್ ಕಮಾಂಡ್‌ನ‌ ಜನರಲ್‌ ಆಫೀಸರ್‌ ಕಮಾಂಡರ್‌ ಇನ್‌ ಚೀಫ್ ಅವರ ವಿಶೇಷ ಹಣಕಾಸು ಅಧಿಕಾರದಡಿ ಜಾಗತಿಕ ಪೂರೈಕೆದಾರರಿಂದ 5,719 ಸ್ನೆ„ಪರ್‌ ರೈಫ‌ಲ್‌ಗ‌ಳನ್ನು ಪಡೆಯುವುದಕ್ಕೆ ಸೇನೆಯು ಟೆಂಡರ್‌ ಕರೆದಿತ್ತು. 

ಅಂತೆಯೇ ಭಾರತೀಯ ಸೇನೆ ಇದೀಗ ಪಾಕಿಸ್ಥಾನದ ಜತೆಗಿನ ಎಲ್‌ಓಸಿಯಲ್ಲಿ ಹೊಸ ಸ್ನೆ„ಪರ್‌ ರೈಫ‌ಲ್‌ಗ‌ಳನ್ನು ಉಪಯೋಗಿಸಲು ಆರಂಭಿಸಿಸಿದ್ದು ಇದರಿಂದ ಪಾಕ್‌ ನುಸುಳುಕೋರ ಉಗ್ರರನ್ನು ಸದೆ ಬಡಿಯುವ ಕೆಲಸ ಸುಲಭವಾಗಲಿದೆ ಎಂದು ಜನರಲ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಲೆಫ್ಟಿನೆಂಟ್‌ ಜನರಲ ರಣಬೀರ್‌ ಸಿಂಗ್‌ ಮಾಧ್ಯಮಕ್ಕೆ ತಿಳಿಸಿದರು.

ಭಾರತೀಯ ಸೇನೆ ಪ್ರಕೃತ ರಶ್ಯದ ಡ್ರ್ಯಾಗೊನೋವ್‌ ಎಸ್‌ವಿಡಿ ರೈಫ‌ಲ್‌ಗ‌ಳನ್ನು ಬಳಸುತ್ತಿದೆ. ಇದೀಗ ಪೂರೈಕೆಗೆ ಆದೇಶಿಸಲಾಗಿರುವ 5,719 ಸ್ನೆ„ಪರ್‌ ರೈಫ‌ಲ್‌ಗ‌ಳ ಪೈಕಿ ಕೆಲವು ಈಗಾಗಲೇ ಬಂದಿವೆ; ಇನ್ನು ಹಲವು ಸದ್ಯದಲ್ಲೇ ಬರಲಿವೆ; ಈಗಾಗಲೇ ನಮ್ಮ ಕೈಸೇರಿರುವ ಸ್ನೆ„ಫ‌ರ್‌ ರೈಫ‌ಲ್‌ಗ‌ಳನ್ನು ಎಲ್‌ಓಸಿ ಉದ್ದಕ್ಕೂ ಬಳಸಲಾಗುತ್ತಿದೆ ಎಂದು ಲೆ| ಜ| ರಣಬೀರ್‌ ಸಿಂಗ್‌ ಹೇಳಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next