ನವ ದೆಹಲಿ : ಪರಿವಾರ್ ಸ್ಕೂಲ್ ಸೊಸೈಟಿಯೊಂದಿಗೆ ಸೇನಾ ಗುಡ್‌ವಿಲ್ ಶಾಲೆಗಳ ಆರ್ಥಿಕ ಸುಸ್ಥಿರತೆಗಾಗಿ ಇಂದ್ರಾಣಿ ಬಾಲನ್ ಫೌಂಡೇಶನ್ ಮತ್ತು ಭಾರತೀಯ ಸೇನೆಯು ಒಪ್ಪಂದಕ್ಕೆ ಸಹಿ ಹಾಕಿದೆ.
ಇಂದ್ರಾಣಿ ಬಾಲನ್ ಫೌಂಡೇಶನ್ ಪ್ರಸಿದ್ಧ ಪ್ರತಿಷ್ಠಾನವಾಗಿದ್ದು, ಇದು ದೇಶಾದ್ಯಂತ ಹಲವಾರು ದತ್ತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಇದು ಪುಣೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಈಗ ಬಾರಾಮುಲ್ಲಾ ಮತ್ತು ಕುಪ್ವಾರಾ ಜಿಲ್ಲೆಗಳ ಉರಿ, ಟ್ರೆಹ್ಗಮ್, ವೇಯ್ನ್ ಮತ್ತು ಹಾಜಿನಾರ್ ನಂತಹ ನಾಲ್ಕು ವಿಭಿನ್ನ ಗುಡ್ ವಿಲ್ ಶಾಲೆಗಳಿಗೆ ಹಣಕಾಸು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿದೆ.
ಓದಿ : ಮಂಗಳನ ಅಂಗಳಕ್ಕೆ ರೋವರ್ ಇಳಿಸುವಲ್ಲಿ ಭಾರತ ಮೂಲದ ಸ್ವಾತಿ ಮೋಹನ್ ಯಶಸ್ವಿ..!
ಜಿಲ್ಲೆಯ ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ ಪರಿವಾರ್ ಸ್ಕೂಲ್ ಸೊಸೈಟಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರತಿಷ್ಠಾನವು ಯೋಜಿಸಿದೆ. ಶಿಕ್ಷಣ, ಕ್ರೀಡೆ, ಆರೋಗ್ಯ ರಕ್ಷಣೆ ಮತ್ತು ಪ್ರಾಚೀನ ಸಂಸ್ಕೃತಿಯ ಪುನಃಸ್ಥಾಪನೆ ಮುಂತಾದ ಡೊಮೇನ್ ಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾರಿ ಅನುಭವ ಹೊಂದಿರುವ ಪುನೀತ್ ಬಾಲನ್ ಅವರ ನಾಯಕತ್ವದಲ್ಲಿ ಈ ಗುಂಪು ಕಾರ್ಯನಿರ್ವಹಿಸುತ್ತಿದೆ. ಮುಂಬರುವ ಭವಿಷ್ಯದಲ್ಲಿ ಈ ಶಾಲೆಗಳ ಸುಸ್ಥಿರತೆಯ ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲಿದೆ. ಚಿನಾರ್ ಕಾರ್ಪ್ಸ್ ಪ್ರಸ್ತುತ ಕಾಶ್ಮೀರದಲ್ಲಿ 28 ಗುಡ್‌ವಿಲ್ ಶಾಲೆಗಳನ್ನು ನಡೆಸುತ್ತಿದೆ, ಇದು ಪ್ರತಿವರ್ಷ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದುವರೆಗೆ ಒಟ್ಟು 1 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಂದ್ರಾಣಿ ಬಾಲನ್ ಪ್ರತಿಷ್ಠಾನದ ಈ ನಿರ್ಧಾರವು ಇತರ ಕಾರ್ಪೊರೇಟ್ ಸಂಸ್ಥೆಗಳು ಸಮೃದ್ಧ ಕಾಶ್ಮೀರವನ್ನು ನಿರ್ಮಿಸುವಲ್ಲಿ ತಮ್ಮ ಪ್ರಯತ್ನಕ್ಕೆ ಮುಂದಾಗಲು ಉತ್ತಮ ಮಾದರಿಯಾಗಿದೆ.
ದೂರದೃಷ್ಟಿ ಮತ್ತು ಸಾಮಾಜಿಕ ಜವಾಬ್ದಾರಿಯಾಗಿ ರಾಷ್ಟ್ರ ನಿರ್ಮಾಣದಲ್ಲಿ ಹೂಡಿಕೆ ಮಾಡುವ ಉಪಕ್ರಮಕ್ಕಾಗಿ ಇಂದ್ರಾಣಿ ಬಾಲನ್ ಫೌಂಡೇಶನ್ ನ ಅಧ್ಯಕ್ಷ ಮತ್ತು ಪುನೀತ್ ಬಾಲನ್ ಗ್ರೂಪ್ ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಬಾಲನ್ ಅವರನ್ನು ಈ ಸಂದರ್ಭ ವಿಶೇಷವಾಗಿ ಅಭಿನಂದಿಸಲಾಯಿತು.
ಓದಿ : ಶೋಪಿಯಾನ್: ಭದ್ರತಾ ಪಡೆ ಎನ್ ಕೌಂಟರ್ ಗೆ ಮೂವರು ಉಗ್ರರ ಸಾವು