Advertisement

ಹೂತು ಹೋಗುವ ಹಿಮದಲ್ಲಿ ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ದಾಖಲಿಸಿದ ಯೋಧರು

07:22 PM Jan 08, 2021 | Team Udayavani |

ಕುಪ್ವಾರಾ: ಭಾರತೀಯ ಸೇನೆ ಕಷ್ಟದಲ್ಲಿರುವ ಜನತೆಯ ನೆರವಿಗೆ ಎಂದೆಂದಿಗೂ ಧಾವಿಸುತ್ತದೆ ಎಂಬ ಮಾತು ಮತ್ತೂಮ್ಮೆ ಸಾಬೀತಾಗಿದೆ. ಅಂತಹದ್ದೊಂದು ಹೃದಯ ದ್ರವಿಸುವಂತಹ ಘಟನೆ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕರಲ್ಪುರದಲ್ಲಿ ನಡೆದಿದೆ.

Advertisement

ಜ.5ರ ಮಧ್ಯರಾತ್ರಿ ಫ‌ರಿಕನ್‌ ಹಳ್ಳಿಯ ಮಂಜೂರ್‌ ಅಹ್ಮದ್‌ ಶೇಖ್‌, ಸೇನೆಗೆ ಕರೆ ಮಾಡಿ, ನನ್ನ ಪತ್ನಿಗೆ ವಿಪರೀತ ಹೆರಿಗೆ ನೋವು ಶುರುವಾಗಿದೆ. ವಿಪರೀತ ಹಿಮಪಾತವಿರುವುದರಿಂದ ಆಸ್ಪತ್ರೆಗೆ ಸಾಗಿಸಲು ಯಾವುದೇ ವಾಹನ ಸಿಗುತ್ತಿಲ್ಲ ಎಂದು ಗೋಳು ತೋಡಿಕೊಂಡಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಯೋಧರು ಕೂಡಲೇ ವೈದ್ಯಕೀಯ ಸಿಬ್ಬಂದಿ ಜೊತೆಗೆ ಹಳ್ಳಿಗೆ ತೆರಳಿದ್ದಾರೆ. ಜ.5ರಂದು ರಾತ್ರೋರಾತ್ರಿ ನಾಲ್ಕು ಯೋಧರು ಗರ್ಭಿಣಿಯನ್ನು ಭುಜದ ಮೇಲೆ ಹೊತ್ತು, 2 ಕಿ.ಮೀ. ನಡೆದು ಕರಲ್ಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಎರಡು ಕಿ.ಮೀ. ಉದ್ದಕ್ಕೂ ಮಂಡಿವರೆಗೆ ಕಾಲು ಹುಗಿದುಹೋಗುವಷ್ಟು ಹಿಮ ತುಂಬಿಕೊಂಡಿತ್ತು.

ಇದನ್ನೂ ಓದಿ:ಕೋವಿಡ್ ಲಸಿಕೆ ಹಂಚಿಕೆ ಚರ್ಚೆ: ಜನವರಿ 11ರಂದು ಎಲ್ಲಾ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

Advertisement

ಅಂತಹದ್ದರಲ್ಲಿ ಯೋಧರು ಹಿಂಜರಿಯದೇ ಹೆಜ್ಜೆ ಹಾಕಿದ್ದಾರೆ. ಆಸ್ಪತ್ರೆಯ ವೈದ್ಯರಿಗೆ ಮೊದಲೇ ಮಹಿಳೆಯರೊಬ್ಬರು ಆಗಮಿಸುವುದು ಗೊತ್ತಿದ್ದರಿಂದ ಹೆರಿಗೆಗೆ ತಕ್ಷಣ ವ್ಯವಸ್ಥೆ ಮಾಡಿದ್ದಾರೆ. ಸುರಕ್ಷಿತವಾಗಿ ಮಹಿಳೆ ಗಂಡುಮಗುವನ್ನು ಹೆತ್ತಿದ್ದಾರೆ. ಈ ಘಟನೆಯನ್ನು ಸೇನೆ ಟ್ವೀಟ್‌ ಮಾಡಿದೆ. ಯೋಧರ ಈ ಸೇವೆಯನ್ನು ಎಲ್ಲರೂ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next