Advertisement

ಯೋಧರಿಗೆ 3ಡಿ ಪ್ರಿಂಟೆಡ್‌ ವಸತಿ ಗೃಹ

07:22 PM Dec 29, 2022 | Team Udayavani |

ಗುಜರಾತ್‌ನ ಅಹಮದಾಬಾದ್‌ನ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸೇನೆಯ ಮೊತ್ತ ಮೊದಲ 3ಡಿ-ಪ್ರಿಂಟೆಡ್‌ ವಸತಿ ಗೃಹಗಳು ಲೋಕಾರ್ಪಣೆಗೊಂಡಿವೆ. ಸಂಕೀರ್ಣ ಸಾಫ್ಟ್ವೇರ್‌ ಮತ್ತು ರೊಬೋಟಿಕ್‌ ಘಟಕವನ್ನು ಬಳಸಿಕೊಂಡು ಇವುಗಳನ್ನು ನಿರ್ಮಿಸಲಾಗಿದೆ.

Advertisement

ಎಲ್ಲಿ?:  ಅಹಮದಾಬಾದ್‌ ಕಂಟೋನ್ಮೆಂಟ್‌

ಯಾರಿಂದ ನಿರ್ಮಾಣ?:  ಮಿಲಿಟರಿ ಎಂಜಿನಿಯರಿಂಗ್‌ ಸರ್ವಿಸಸ್‌(ಎಂಇಎಸ್‌) ಮತ್ತು ಮೈಕಾಬ್‌ ಪ್ರೈ.ಲಿ.

ವಾಸದ ಘಟಕದ ವಿಸ್ತೀರ್ಣ:  71 ಚದರ ಮೀಟರ್‌

ಎಷ್ಟು ಮಹಡಿಯ ಮನೆ?: 2

Advertisement

ನಿರ್ಮಾಣಕ್ಕೆ ತಗುಲಿದ ಅವಧಿ : ಕೇವಲ 12 ವಾರಗಳು

ವೈಶಿಷ್ಟ?:

ಅತ್ಯಾಧುನಿಕ 3ಡಿ ಕ್ಷಿಪ್ರ ನಿರ್ಮಾಣ ತಂತ್ರಜ್ಞಾನ ಬಳಸಿಕೊಂಡು ಈ ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಇವುಗಳ ಅಡಿಪಾಯ, ಗೋಡೆ, ಸ್ಲ್ಯಾಬ್‌ಗಳೆಲ್ಲ 3ಡಿ ಪ್ರಿಂಟೆಡ್‌ ಆಗಿವೆ. ಭೂಕಂಪವನ್ನು ತಾಳಿಕೊಳ್ಳುವಂತೆ ಹಾಗೂ ಪರಿಸರಸ್ನೇಹಿಯಾಗಿ ಇವುಗಳನ್ನು ನಿರ್ಮಿಸಲಾಗಿದೆ.

ಎಲ್‌ಎಸಿಯಲ್ಲೂ ನಿರ್ಮಾಣ?:

ಭಾರತೀಯ ಸೇನೆಯ ಘಟಕಗಳು ಈಗಾಗಲೇ 3ಡಿ ಪ್ರಿಂಟಿಂಗ್‌ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣಗಳನ್ನು ಮಾಡುತ್ತಿದೆ. ಎಲ್ಲ ರೀತಿ ಭೂಪ್ರದೇಶಗಳಲ್ಲೂ ಇವುಗಳನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲೂ ಇವುಗಳು ತಲೆಎತ್ತಿವೆ ಎಂದು ಸೇನೆ ತಿಳಿಸಿದೆ. ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪ ಈ ತಂತ್ರಜ್ಞಾನ ಬಳಸಿಕೊಂಡು ಶಾಶ್ವತ ಕಟ್ಟಡಗಳನ್ನು ನಿರ್ಮಿಸುವ ಚಿಂತನೆ ಮಾಡಲಾಗಿದೆ. ಇದರಿಂದ ಸಮಯದ ಉಳಿತಾಯದ ಜೊತೆಗೆ, ರಕ್ಷಣಾ ಸನ್ನದ್ಧತೆಯೂ ಸುಧಾರಣೆ ಸಾಧ್ಯ ಎಂದೂ ರಕ್ಷಣಾ ಮೂಲಗಳು ತಿಳಿಸಿವೆ.

 

 

Advertisement

Udayavani is now on Telegram. Click here to join our channel and stay updated with the latest news.

Next