Advertisement
ಮತ್ತೊಂದೆಡೆ ಚೀನಾ ಸೇನಾಪಡೆ ಫಿಂಗರ್ 4ರ ಪರ್ವತ ಶ್ರೇಣಿಯ ತುದಿಯಲ್ಲಿ ಕುಳಿತಿದ್ದು, ಭಾರತೀಯ ಸೇನಾ ಪಡೆ ಕೂಡಾ ಮತ್ತೊಂದು ಪರ್ವತಶ್ರೇಣಿಯ ಭಾಗದಲ್ಲಿ ಕುಳಿತು ಪಿಎಲ್ ಎ ಮೇಲೆ ಒತ್ತಡ ತಂತ್ರ ಹೇರುತ್ತಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
Related Articles
Advertisement
ಈಗಾಗಲೇ ಭಾರತೀಯ ಸೇನಾ ಪಡೆ ಫಿಂಗರ್ 4ರ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಪ್ಯಾಂಗಾಂಗ್ ತ್ಸೋನ ಉತ್ತರ ಸರೋವರ ಪ್ರದೇಶದಲ್ಲಿ ಚೀನಾ ಪಡೆ ಶಿಬಿರ ನಿರ್ಮಿಸುತ್ತಿದ್ದು, ಭಾರತದ ಸೇನಾಪಡೆ ಕುಳಿತಿರುವ ಪರ್ವತಶ್ರೇಣಿ ಪ್ರದೇಶದ ಸಮೀಪಕ್ಕೆ ಬರಲು ಯತ್ನಿಸುತ್ತಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಯುದ್ಧದ ಸದ್ದು! ಭಾರತ, ಚೀನಾ ಯೋಧರ ಜಮಾವಣೆ, ನರಾವಣೆ ಭೇಟಿ
ಅತ್ಯಂತ ಕಠಿಣವಾದ ಹಾಗೂ ಎತ್ತರದ ಪ್ರದೇಶವಾದ ರೆಚಿನ್ ಲಾ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆ ಅಲ್ಲಿ ಪಹರೆ ಕಾಯುತ್ತಿರುವುದಕ್ಕೆ ಚೀನಾ ಸೇನೆ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತಿರುವ ಭಾರತೀಯ ಸೇನಾಪಡೆ ಪ್ಯಾಂಗಾಂಗ್ ಸರೋವರದ ದಕ್ಷಿಣ ಪ್ರದೇಶದಲ್ಲಿ ಚೀನಾ ಮಿಲಿಟರಿ ಪಡೆ ಏನು ಮಾಡುತ್ತಿದೆ ಎಂಬ ಬಗ್ಗೆ ಕಣ್ಗಾವಲಿಟ್ಟಿದೆ. ಅಷ್ಟೇ ಅಲ್ಲ ಫಿಂಗರ್ 4ರ ಉತ್ತರ ಭಾಗದಲ್ಲಿಯೂ ಚಲನವಲನ ವೀಕ್ಷಿಸುತ್ತಿದೆ ಎಂದು ವರದಿ ಹೇಳಿದೆ.