Advertisement

ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನ

12:30 PM May 04, 2023 | Team Udayavani |

ಕಿಶ್ತ್ವಾರ್: ಭಾರತೀಯ ಸೇನೆಯ ಹೆಲಿಕಾಪ್ಟರ್ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಪತನವಾದ ಘಟನೆ ಗುರುವಾರ ನಡೆದಿದೆ.

Advertisement

ಅಧಿಕಾರಿಗಳ ಪ್ರಕಾರ ಸೇನೆಯ ಎಎಲ್ ಎಚ್ ಧ್ರುವ್ ಹೆಲಿಕಾಪ್ಟರ್ ಕಿಶ್ತ್ವಾರ್ ನ ಮಾರ್ವಾಹ್ ಎಂಬ ಪ್ರದೇಶದಲ್ಲಿ ಪತನವಾಗಿದೆ.

ಅಪಘಾತದಲ್ಲಿ ಪೈಲಟ್ ಗಳು ಗಾಯಗೊಂಡಿದ್ದಾರೆ, ಆದರೆ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಅಭ್ಯರ್ಥಿ ವಿಜುಗೌಡ ಮಗನಿಂದ ಗಾಳಿಯಲ್ಲಿ ಗುಂಡು

ಕಳೆದ ಮಾರ್ಚ್ ನಲ್ಲಿ ಅರುಣಾಚಲ ಪ್ರದೇಶದ ಮಂಡಲಾ ಹಿಲ್ಸ್ ನಲ್ಲಿ ಸೇನೆಯ ಚೀತಾ ಹೆಲಿಕಾಪ್ಟರ್ ಪತನವಾಗಿತ್ತು. ಈ ಘಟನೆಯಲ್ಲಿ ಎರಡು ಪೈಲಟ್ ಗಳು ಅಸುನೀಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next