ನವದೆಹಲಿ : ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚು ವೃತ್ತಿಪರವಾಗಿದ್ದು, ವಿಶ್ವದ ಅತ್ಯುತ್ತಮ ಪಡೆಗಳಲ್ಲಿ ಒಂದಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಶನಿವಾರ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಹಿರಿಯರ ಯೋಧರ ದಿನಾಚರಣೆಯ ಸಂದರ್ಭದಲ್ಲಿ ಮಾಜಿ ಸೈನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಸಶಸ್ತ್ರ ಪಡೆಗಳ ಎಲ್ಲಾ ಮೂರು ಸೇವೆಗಳ ಅನುಭವಿಗಳ ಕೊಡುಗೆಯಿಂದ ರಾಷ್ಟ್ರ ಪ್ರೇರಿತವಾಗಿದೆ,ಎಂತಹ ಸವಾಲನ್ನು ಎದುರಿಸಲು ಸಿದ್ಧವಾಗಿದೆ ಎಂದರು.
“ಇಂದು, ನಮ್ಮ ಸಶಸ್ತ್ರ ಪಡೆಗಳನ್ನು ವಿಶ್ವದ ಅತ್ಯುತ್ತಮ ಮತ್ತು ಹೆಚ್ಚು ವೃತ್ತಿಪರ ಪಡೆಗಳಲ್ಲಿ ಎಣಿಸಲಾಗಿದೆ. ಈ ಗುರುತು ನಿಮ್ಮ ತ್ಯಾಗ, ಅದಮ್ಯ ಧೈರ್ಯ ಮತ್ತು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಅದರಿಂದ ಸ್ಫೂರ್ತಿ ಪಡೆದ ಸಶಸ್ತ್ರ ಪಡೆಗಳ ಎಲ್ಲಾ ಮೂರು ಸೇವೆಗಳು ಅಸಾಧಾರಣ ಸಾಧನವಾಗಿ ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿವೆ ಎಂದರು.
ಮಾಣೆಕ್ಷಾ ಕೇಂದ್ರದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಅವರು ಸೇನಾ ಮುಖ್ಯಸ್ಥರೊಂದಿಗೆ ವೇದಿಕೆ ಹಂಚಿಕೊಂಡರು. ಸಶಸ್ತ್ರ ಪಡೆಗಳ ಮೂರು ವಿಭಾಗಗಳಿಂದ ಹೆಚ್ಚಿನ ಸಂಖ್ಯೆಯ ಯೋಧರು ಕೂಡ ಭಾಗಿಯಾಗಿದ್ದರು.
Related Articles
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್, ತಮ್ಮ ಭಾಷಣದಲ್ಲಿ, ಇಂದಿನ ಸಶಸ್ತ್ರ ಪಡೆಗಳು ನಮ್ಮ ಪ್ರತಿಯೊಬ್ಬ ಪರಿಣತರ ಪ್ರಯತ್ನಗಳು, ದೂರದೃಷ್ಟಿಯ ನಾಯಕತ್ವ, ಆಕಾಂಕ್ಷೆಗಳು ಮತ್ತು ನಿಸ್ವಾರ್ಥ ಪ್ರಯತ್ನಗಳ ಉತ್ಪನ್ನವಾಗಿದೆ. ಇಲ್ಲಿ ಉಪಸ್ಥಿತರಿದ್ದು ನಿಮ್ಮೆಲ್ಲರೊಂದಿಗೆ ಸಂವಾದ ನಡೆಸುವುದು ನನಗೆ ಗೌರವವಾಗಿದೆ. ಇಂದು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಮ್ಮ ವೀರ ಯೋಧರನ್ನು ಸ್ಮರಿಸುವ ಮತ್ತು ಗೌರವ ಸಲ್ಲಿಸುವ ಸಂದರ್ಭವಾಗಿದೆ ಎಂದರು.
ವಾಯುಪಡೆ ಮುಖ್ಯಸ್ಥ ವಿ.ಆರ್.ಚೌಧರಿ “ಭಾರತೀಯ ವಾಯುಪಡೆಯು ನಿಮ್ಮ ಯೋಗಕ್ಷೇಮಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ನಾವು ನಮ್ಮ ವಾಯು ಯೋಧರಿಗೆ ಭರವಸೆ ನೀಡಲು ಬಯಸುತ್ತೇವೆ. ಸೇವೆ ಮಾಡುವವರಿಗೆ ಸೇವೆ ಸಲ್ಲಿಸುವುದು ಯಾವಾಗಲೂ ನಮ್ಮ ಪ್ರಯತ್ನಗಳಿಗೆ ಮೂಲಾಧಾರವಾಗಿರುತ್ತದೆ,ಸಶಸ್ತ್ರ ಪಡೆಗಳ ಯೋಧರು ರಾಷ್ಟ್ರದ ಪ್ರಗತಿಗೆ ವಿವಿಧ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ”ಎಂದರು.
ಸಶಸ್ತ್ರ ಪಡೆಗಳ ಹಿರಿಯರ ದಿನಾಚರಣೆಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ. 1953 ರಲ್ಲಿ ಇದೇ ದಿನದಂದು ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್ ಇನ್ ಚೀಫ್, ಕನ್ನಡಿಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ, 1947 ರ ಯುದ್ಧದಲ್ಲಿ ಭಾರತೀಯ ಪಡೆಗಳನ್ನು ವಿಜಯದತ್ತ ಮುನ್ನಡೆಸಿದ್ದರು. ಅವರು ಔಪಚಾರಿಕವಾಗಿ ನಿವೃತ್ತರಾಗಿದ್ದರು.
ಮೊದಲ ಸಶಸ್ತ್ರ ಪಡೆಗಳ ಹಿರಿಯರ ದಿನಾಚರಣೆಯನ್ನು ಮೊದಲು ಜನವರಿ 14, 2016 ರಂದು ಆಚರಿಸಲಾಯಿತು. ರಕ್ಷಣಾ ಸಚಿವಾಲಯದ ಪ್ರಕಾರ, ಯೋಧರು ಮತ್ತು ಅವರ ಕುಟುಂಬಗಳ ಗೌರವಾರ್ಥವಾಗಿ ಸಂವಾದಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿ ವರ್ಷ ಈ ದಿನವನ್ನು ಸ್ಮರಿಸಲು ನಿರ್ಧರಿಸಲಾಗಿತ್ತು. ಈ ವರ್ಷ, ಜುಹುಂಜುನು, ಜಲಂಧರ್, ಪನಾಗರ್, ನವದೆಹಲಿ, ಡೆಹ್ರಾಡೂನ್, ಚೆನ್ನೈ, ಚಂಡೀಗಢ, ಭುವನೇಶ್ವರ್ ಮತ್ತು ಮುಂಬೈ ನಲ್ಲಿ ಮೂರು ಸೇವಾ ಪ್ರಧಾನ ಕಚೇರಿಗಳಿಂದ ಒಂಬತ್ತು ಸ್ಥಳಗಳಲ್ಲಿ ಹಿರಿಯ ಸೈನಿಕರ ದಿನವನ್ನು ಆಚರಿಸಲಾಗುತ್ತಿದೆ.