Advertisement

ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ

12:45 PM Mar 02, 2021 | Team Udayavani |

ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲದ ವಿಚಾರವಾಗಿ ಭಾರತದ ಅಭಿವೃದ್ಧಿ ಪಥದ ಬಗ್ಗೆ ಮಿಶ್ರ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಇತ್ತೀಚೆಗೆ ಅಷ್ಟೇ ಬಿಡುಗಡೆಯಾದ ಒಂದು ಅಧ್ಯಯನದ ವರದಿ ಹೇಳಿದೆ.

Advertisement

ಸೆಪ್ಟೆಂಬರ್ 2020 ರಲ್ಲಿ ನಡೆಸಿದ ಇಂಡಿಯನ್ ಅಮೆರಿಕನ್ ಆಟಿಟ್ಯೂಡ್ಸ್ ಸಮೀಕ್ಷೆಯು 1,200 ಭಾರತೀಯ ಅಮೆರಿಕನ್ನರ ಪ್ರತಿಕ್ರಿಯೆಗಳನ್ನು ಅವರು ಭಾರತದೊಂದಿಗೆ ಎಷ್ಟು ಸಂಪರ್ಕ ಹೊಂದಿದ್ದಾರೆ ಮತ್ತು ಭಾರತೀಯ ರಾಜಕೀಯ ಬೆಳವಣಿಗೆಗಳನ್ನು ಹೇಗೆ ನೋಡುತ್ತಾರೆ ಎಂಬ ಪ್ರಶ್ನೆಗಳಿಗೆ ಮಿಶ್ರ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ವರದಿ ಹೇಳಿದೆ.

ಓದಿ : ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

ಬಹಳ ಪ್ರಮುಖವಾಗಿ ಪ್ರಧಾನಿ ಮೋದಿ ಹಾಗೂ ಅವರ ಕಾರ್ಯ ವೈಖರಿಯ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ  39% ಜನರು ಭಾರತವು ಪ್ರಸ್ತುತ ತಪ್ಪು ಹಾದಿಯಲ್ಲಿದೆ ಎಂದು ನಂಬಿದರೆ, 36% ಜನರು ಸರಿಯಾದ ಹಾದಿಯಲ್ಲಿದ್ದಾರೆ ಎಂದು ನಂಬುತ್ತಾರೆ.

4 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯೊಂದಿಗೆ, ಭಾರತೀಯ ಅಮೆರಿಕನ್ನರು ಈಗ ಅಮೆರಿಕದ ಎರಡನೇ ಅತಿದೊಡ್ಡ ಅನಿವಾಸಿಯರಾಗಿದ್ದಾರೆ. ಬಹಳ ಗಮನಾರ್ಹವಾದ ವಿಚಾರವೇನೆಂದರೇ, ಅಮೇರಿಕಾದ ಅನಿವಾಸಿ ಭಾರತೀಯರನ್ನು ಆಕರ್ಷಿಸುವುದು ಮೋದಿ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ.

Advertisement

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್, ಜಾನ್ಸ್ ಹಾಪ್ಕಿನ್ಸ್-ಎಸ್ ಎ ಐ ಎಸ್ ಮತ್ತು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ, ಪ್ರತಿಕ್ರಿಯಿಸಿದವರು ಸರ್ಕಾರದ ಭ್ರಷ್ಟಾಚಾರ ಮತ್ತು ಭಾರತದ ಆರ್ಥಿಕತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ವರದಿ ಹೇಳಿದೆ.

ಯುಎಸ್ ನ ವಾತಾವರಣಕ್ಕೆ ಹೊಂದಿಕೊಂಡಾಗ  ಅವರು ಧಾರ್ಮಿಕ ಸ್ವಾತಂತ್ರ್ಯ ಮತ್ತು ವಲಸೆಯಂತಹ ವಿಷಯಗಳ ಬಗ್ಗೆ ಹೆಚ್ಚು ಉದಾರವಾದ ನಿಲುವನ್ನು ತೆಗೆದುಕೊಳ್ಳುತ್ತಾರೆ ಆದರೆ ಭಾರತದಲ್ಲಿ ಇದೇ ರೀತಿಯ ವಿಷಯಗಳ ಬಗ್ಗೆ ಹೆಚ್ಚು ಸಂಪ್ರದಾಯವಾದಿ ನಿಲುವನ್ನು ಹೊಂದುತ್ತಾರೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಓದಿ : ಅವಕಾಶ ಸಿಕ್ಕರೆ ಖಂಡಿತ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತೇನೆ : ಎಚ್‌. ವಿಶ್ವನಾಥ್

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನ ದಕ್ಷಿಣ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಮತ್ತು ಹಿರಿಯ ಸಹವರ್ತಿ ಮತ್ತು ವರದಿಯ ಲೇಖಕರಲ್ಲಿ ಒಬ್ಬರಾದ ಮಿಲನ್ ವೈಷ್ಣವ್, ಸರ್ಕಾರದ ಭ್ರಷ್ಟಾಚಾರ ಮತ್ತು ಆರ್ಥಿಕತೆಯ ಕುರಿತಾದ ಕಳವಳಗಳು ವಲಸೆಗಾರರೊಂದಿಗೆ ಪ್ರತಿಧ್ವನಿಸಬಹುದು ಎಂದು ಹೇಳಿದರು.  “ಮೋದಿಯವರ ಮೊದಲ ಅವಧಿಯಲ್ಲಿ ಅತ್ಯಂತ ಸ್ಥಿರವಾದ ಆಡಳಿತ ನಡೆಸುವುದರ ಮೂಲಕ ಅವರು ಭಾರತವನ್ನು ವಿಶ್ವ ಭೂಪಟದಲ್ಲಿ ಎತ್ತರದ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ಕೆಲವರು ಅಭಿಪ್ರಾಯ ಹೊಂದಿದ್ದಾರೆ” ಎಂದು ಅವರು ಹೇಳಿದರು. ” ಹಾಗೂ ಮೋದಿಯವರ ಆಡಳಿತದ ಅಡಿಯಲ್ಲಿ ಭಾರತವು ದೊಡ್ಡ ಮತ್ತು ಮಹತ್ವದ್ದಾಗಿರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೆಲವರು ನಂಬುತ್ತಾರೆ.” ಅವರು ತಿಳಿಸಿದ್ದಾರೆ.

ಸಮೀಕ್ಷೆಯ ಪ್ರತಿಸ್ಪಂದಕರಲ್ಲಿ ಅಥವಾ ಸಮೀಕ್ಷೆಯಲ್ಲಿ ಪಾಲ್ಪಡೆದವರಲ್ಲಿ ರಾಜಕೀಯ ಅರಿವು ಮತ್ತು ಅಭಿಪ್ರಾಯಗಳ ವ್ಯಾಪ್ತಿಯು ವಲಸೆಗಾರರ ​​ವೈವಿಧ್ಯಮಯ ಜನಸಂಖ್ಯಾಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. “ಒಟ್ಟಾರೆಯಾಗಿ, ನಮ್ಮ ಮಾದರಿ ಅವರು ಮೋದಿಯನ್ನು ಸಂಪೂರ್ಣ ಪ್ರಮಾಣದಲ್ಲಿ  ಬೆಂಬಲಿಸುವುದಿಲ್ಲ” ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪಿ ಎಚ್ ‌ಡಿ ಅಭ್ಯರ್ಥಿ ಮತ್ತು ವರದಿಯ ಸಹ ಲೇಖಕಿ ಸುಮಿತ್ರಾ ಬದ್ರಿನಾಥನ್ ಹೇಳಿದ್ದಾರೆ.

“ಆದರೆ ನೀವು ಅದನ್ನು ಪ್ರತ್ಯೇಕಿಸುವಾಗ ಧರ್ಮ, ವಯಸ್ಸು, ಶಿಕ್ಷಣ ಇತ್ಯಾದಿಗಳ ಸಂಪೂರ್ಣ ವ್ಯತ್ಯಾಸಗಳನ್ನು ನಾವು ವರದಿಯಲ್ಲಿ ಗಮನಿಸಬಹುದು” ಸ್ವಯಂ ಗುರುತಿಸಲ್ಪಟ್ಟ ರಿಪಬ್ಲಿಕನ್ ಮತ್ತು ವಲಸೆಗಾರರ ​​ಹಿಂದೂ ಸದಸ್ಯರಲ್ಲಿ ಮೋದಿಯವರ ಬೆಂಬಲ ಅತ್ಯಧಿಕವಾಗಿದೆ.  10 ಹಿಂದೂಗಳಲ್ಲಿ ಏಳು ಮಂದಿ ಮೋದಿಯವರ ಕಾರ್ಯಕ್ಷಮತೆಯನ್ನು ಅಂಗೀಕರಿಸಿದರೆ, ಐವರು ಮುಸ್ಲಿಮರಲ್ಲಿ ಒಬ್ಬರು ಮಾತ್ರ ಅದನ್ನು ಅನುಮೋದಿಸುತ್ತಾರೆ. ಅವರ ಅನುಮೋದನೆ ರೇಟಿಂಗ್ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಅತ್ಯಧಿಕವಾಗಿದೆ, ಆದರೆ ಸಮೀಕ್ಷೆಯ ಕಿರಿಯ ಪ್ರತಿಸ್ಪಂದಕರಲ್ಲಿ ಅಥವಾ ಭಾಗಿಯಾದವರಲ್ಲಿ  43% (18 ಮತ್ತು 29 ವರ್ಷದೊಳಗಿನವರು) ಮೋದಿಯವರನ್ನು ನಿರಾಕರಿಸುತ್ತಾರೆ.  25 ವರ್ಷಗಳಿಂದ ಯುಎಸ್ ನಲ್ಲಿದ್ದವರೊಂದಿಗೆ ಹೋಲಿಸಿದರೆ, ಇತ್ತೀಚಿನ ವಲಸಿಗರಲ್ಲಿ ಮೋದಿ ಹೆಚ್ಚು ಜನಪ್ರಿಯರಾಗಿದ್ದಾರೆ.

ಕುತೂಹಲಕಾರಿಯಾಗಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಿರಾಕರಿಸಿದ ಪ್ರತಿಸ್ಪಂದಕರು ಅಥವಾ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಮೋದಿಯ ಬಗ್ಗೆ ನೀಡಿರುವ ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳಿವೆ.  41% ಜನರು ಮೋದಿಯವರನ್ನು  ಒಪ್ಪಿದರೆ, 38% ಜನರು ಮೋದಿಯವರ ಕಾರ್ಯವೈಖರಿಯ ಬಗ್ಗೆ ಭಿನ್ನಮತವನ್ನು ವ್ಯಕ್ತಪಡಿಸುತ್ತಾರೆ.

ಡಯಾಸ್ಪೊರಾದಲ್ಲಿ ಅನೇಕರು ಯುಎಸ್ ನಲ್ಲಿ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ವಿಷಯಗಳ ಬಗ್ಗೆ ಹೆಚ್ಚು ಉದಾರವಾದಿಗಳಾಗಿದ್ದಾರೆ ಆದರೆ ಭಾರತದಲ್ಲಿ ಆ ಸಮಸ್ಯೆಗಳು ಉದ್ಭವಿಸಿದಾಗ ಹೆಚ್ಚು ಸಂಪ್ರದಾಯವಾದಿ ನಿಲುವನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ, 90% ಅಮೇರಿಕಾದ ಅನಿವಾಸಿ ಭಾರತೀಯರು ಸಾಮಾನ್ಯ ಸನ್ನಿವೇಶದಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಜನರ ಬಗ್ಗೆ ಸಮಾನವಾದ ಭಾವವನ್ನು ಹೊಂದಿದ್ದಾರೆ. ಮತ್ತು ಕೇವಲ 49% ಜನರು ಮಾತ್ರ 2019 ರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಾರೆ. ಅಕ್ರಮ ವಲಸೆಯ ಪ್ರಶ್ನೆಯ ಮೇಲೆ, 69% ಭಾರತೀಯ ಅಮೆರಿಕನ್ನರು ಸಾಮಾನ್ಯವಾಗಿ ದಾಖಲೆ ರಹಿತ ವಲಸಿಗರ ಬಗ್ಗೆ ಉದಾರ ನೀತಿಗಳನ್ನು ಬೆಂಬಲಿಸುತ್ತಾರೆ. ಆದರೆ ಕೇವಲ 45% ರಷ್ಟು ಜನರು ಉದ್ದೇಶಿತ ಅಖಿಲ ಭಾರತ ನಾಗರಿಕರ ನೋಂದಣಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವರದಿ ತಿಳಿಸಿದೆ.

ಇನ್ನು ಮೋದಿಯವರ ಬಗ್ಗೆ ಭಾರತದಲ್ಲಿ ಒಂದು ದೃಷ್ಟಿಕೋನವಿದ್ದರೆ, ಯುಎಸ್ ನಲ್ಲಿನ ವಿಭಿನ್ನ ದೃಷ್ಟಿಕೋನವಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸುತ್ತದೆ.”ಎಂದು ಬದ್ರಿನಾಥನ್ ಹೇಳಿದ್ದಾರೆ.

ಓದಿ : ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ

ಲೇಖಕರು ಭಾರತದಲ್ಲಿ ಹಿಂದೂ ಬಹುಸಂಖ್ಯಾತತೆ ಮತ್ತು ಯು ಎಸ್ ನಲ್ಲಿ ಬಿಳಿ ಪ್ರಾಬಲ್ಯದ ಬಗ್ಗೆ ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಕೇಳಿದ್ದಾರೆ. “ಹಿಂದೂ ಬಹುಸಂಖ್ಯಾತತೆ ಭಾರತದಲ್ಲಿ ಒಂದು ಸಮಸ್ಯೆ ಎಂದು ಜನರು ಹೇಳುತ್ತಾರೆ, ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಪ್ರಾಬಲ್ಯವು ಯುಎಸ್ ನಲ್ಲಿ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ” ಎಂದು ಅವರು ಹೇಳಿದರು.

ಭಾರತೀಯ ಅಮೆರಿಕನ್ನರಲ್ಲಿ ಹಿಂದೂ ಧರ್ಮವು ಸಾಮಾನ್ಯ ನಂಬಿಕೆಯಾಗಿದೆ. ಹೆತ್ತವರ ಮೂಲ ದೇಶದೊಂದಿಗೆ ಕಡಿಮೆ ಸಂಪರ್ಕ ಹೊಂದಿದವರಾಗಿರುವುದರಿಂದ, ಎರಡನೇ ತಲೆಮಾರಿನ ವಲಸಿಗರು ಮತ್ತು ಕಿರಿಯ ವಲಸಿಗರು ತಮ್ಮ ಹೆತ್ತವರಿಗಿಂತ ಭಾರತದ ಬಗ್ಗೆ ಹೆಚ್ಚು ಉದಾರ ಮತ್ತು ಪ್ರಗತಿಪರರು ಎಂದು ವರದಿ ಸೂಚಿಸುತ್ತದೆ.

ವೈಷ್ಣವ್ ಅವರ ಪ್ರಕಾರ, “ಭಾರತದಲ್ಲಿ ನಾವು ನೋಡುವ ಪ್ರಜಾಪ್ರಭುತ್ವದ ಕೆಲವು ಒಳಮುಖದ ಬೆಳವಣಿಗೆಯಿಂದ ಕೆಲವರು ಹಿಂಜರಿಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು. “ಪ್ರತಿಭಟನಾಕಾರರ ಮೇಲಿನ ದಬ್ಬಾಳಿಕೆ ಮತ್ತು ವಾಕ್ ಸ್ವಾತಂತ್ರ್ಯದಂತಹ ಸಮಸ್ಯೆಗಳು ಯುವಜನರಲ್ಲಿ ಭಿನ್ನಮತ ಅನುರಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಾಜಕೀಯ ಜಾಗೃತಿ ಮೂಡಿಸುವಲ್ಲಿ ಮತ್ತು ಯುವಕರನ್ನು ಸಂಘಟಿಸಲು ಸಹಾಯ ಮಾಡುವಲ್ಲಿ ಸಾಮಾಜಿಕ ಮಾಧ್ಯಮವು ವಹಿಸುವ ಪಾತ್ರವನ್ನು ಬದ್ರಿನಾಥನ್ ಗಮನಸೆಳೆದರು. ಹೆಚ್ಚಿನ ಅಮೇರಿಕಾದ ಅನಿವಾಸಿ ಭಾರತೀಯರು,  ಭಾರತೀಯ ರಾಜಕೀಯದ ಬಗ್ಗೆ ತಮ್ಮ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಿಂದ ಪಡೆಯುತ್ತಾರೆ,

ಇನ್ನು, ಅಮೇರಿಕಾ ಹಾಗೂ ಭಾರತದ ನಡುವೆ ಸಂಬಂಧಗಳು ಉತ್ತಮವಾಗಿದೆ ಎಂದು ಹೆಚ್ಚಿನ ಪ್ರತಿಸ್ಪಂದಕರು ಅಥವಾ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಸಾಮಾನ್ಯವಾಗಿ ನಂಬುತ್ತಾರೆ ಎಂದು ವರದಿಯು ಬಹಿರಂಗಪಡಿಸಿದೆ.

ಅಮೇರಿಕಾದ ಅನಿವಾಸಿ ಭಾರತೀಯರೆಲ್ಲರೂ ಮೋದಿ ಬಗ್ಗೆ ಹಾಗೂ ಅವರ ಆಡಳಿತದ ಬಗ್ಗೆ  ಒಂದೇ ಅಭಿಪ್ರಾಯವಿಲ್ಲ ಎಂದು ಬದ್ರಿನಾಥನ್ ಹೇಳಿದ್ದಾರೆ.

ಮೂಲ : Scroll.in

ಕನ್ನಡಕ್ಕೆ : ಶ್ರೀರಾಜ್ ವಕ್ವಾಡಿ

ಓದಿ : ಬಜೆಟ್ ಅಧಿವೇಶನದಲ್ಲಿ 6ನೇ ವೇತನ ಆಯೋಗ ಅಂಗೀಕರಿಸಬೇಕು: ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next