Advertisement

ಟಿಬೆಟ್‌ ಮಾತುಕತೆ: ಉಜ್ರಾ ಝೇಯಾ ನೇಮಕ

07:14 PM Dec 21, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ವಿದೇಶಾಂಗ ಸಚಿವಾಲಯದಲ್ಲಿ ಉಪ ಸಚಿವೆಯಾಗಿರುವ ಭಾರತ ಮೂಲದ ಉಜ್ರಾ ಝೇಯಾ ಅವರನ್ನು ಟಿಬೆಟ್‌ ವಿಚಾರಗಳಿಗಾಗಿನ ಸಮನ್ವಯಾಧಿಕಾರಿಯನ್ನಾಗಿ ನೇಮಿಸಲಾಗಿದೆ.

Advertisement

ಈ ಮೂಲಕ ಅಧ್ಯಕ್ಷ ಜೋ ಬೈಡೆನ್‌ ಸರ್ಕಾರದಲ್ಲಿ ಮತ್ತೂಬ್ಬ ಭಾರತದ ಮೂಲದ ಮಹಿಳೆ ಉನ್ನತ ಸ್ಥಾನಪಡೆದಂತಾಗಿದೆ.

ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಅವರು ಝೇಯಾ ಹೆಸರನ್ನು ಸೂಚಿಸಿದ್ದಾರೆ.

ಝೇಯಾ ಅವರು ಟಿಬೆಟ್‌ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ನಡುವೆ ಪೂರ್ವ ಷರತ್ತುಗಳು ಇಲ್ಲದೆ, ಮಾತುಕತೆ ನಡೆಸುವ ವಾತಾವರಣ ಸೃಷ್ಟಿಸುವ ಅಧಿಕಾರವನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ರೌಡಿಸೀಟರ್‌ಗಳ ಮನಪರಿವರ್ತನೆಗಾಗಿ ಠಾಣೆಯಲ್ಲಿ ಪರೇಡ್ :ಎಸ್ಪಿ ಟಿ.ಶ್ರೀಧರ

Advertisement

ಝೇಯಾ ಅವರ ಹೆತ್ತವರು ಮೂಲತಃ ಬಿಹಾರದವರು.

Advertisement

Udayavani is now on Telegram. Click here to join our channel and stay updated with the latest news.

Next