Advertisement

ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ ಮೂಲದ ಗಾಯಕಿ ಫಲ್ಗುಣಿ ಶಾ

02:10 PM Apr 04, 2022 | Team Udayavani |

ಲಾಸ್ ವೇಗಾಸ್: ಭಾರತೀಯ ಮೂಲದ ಅಮೆರಿಕನ್ ಗಾಯಕಿ ಫಲ್ಗುಣಿ ಶಾ ಅವರು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಜಯಿಸಿದ್ದಾರೆ. ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಮ್ ವಿಭಾಗದಲ್ಲಿ ಫಲ್ಗುಣಿ ಶಾ ಗ್ರ್ಯಾಮಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ‘ಎ ಕಲರ್ ಫುಲ್ ವರ್ಲ್ಡ್’ ಆಲ್ಬಮ್ ಗಾಗಿ ಫಲ್ಗುಣಿ ಈ ಪ್ರಶಸ್ತಿ ಜಯಿಸಿದ್ದಾರೆ.

Advertisement

“ಇಂದಿನ ಮ್ಯಾಜಿಕ್ ಅನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಗ್ರ್ಯಾಮಿ ಪ್ರೀಮಿಯರ್ ಸಮಾರಂಭದಲ್ಲಿ ಪ್ರದರ್ಶನ ನೀಡುವುದು ಮತ್ತು ನಂತರ ‘ಎ ಕಲರ್‌ಫುಲ್ ವರ್ಲ್ಡ್‌’ನಲ್ಲಿ ಕೆಲಸ ಮಾಡಿದ ಎಲ್ಲಾ ಜನರ ಪರವಾಗಿ ಈ ಪ್ರತಿಮೆಯನ್ನು ಮನೆಗೆ ಕೊಂಡೊಯ್ಯುವುದು ಎಂತಹ ಗೌರವವಿದು” ಎಂದು ಫಲ್ಗುಣಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

“ನಾವು ಅತ್ಯಂತ ವಿನಮ್ರರಾಗಿದ್ದೇವೆ. ಈ ಪ್ರಶಸ್ತಿಗೆ ಗುರುತಿಸಿದ್ದಕ್ಕೆ ರೆಕಾರ್ಡಿಂಗ್ ಅಕಾಡೆಮಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ಫಲು ಎಂದೇ ಹೆಸರಾದ ಫಲ್ಗುಣಿ ಶಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಎರಡನೇ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕಿ ಕೇಜ್

ಗಾಯಕಿ ಫಲ್ಗುಣಿ ಶಾ ಅವರು ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದಾರೆ. ಅವರು ಈ ಹಿಂದೆ ಎಆರ್ ರೆಹಮಾನ್ ಅವರೊಂದಿಗೆ ಸಹ ಕೆಲಸ ಮಾಡಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next