Advertisement

ಜೋ ಬೈಡೆನ್ ಪತ್ನಿ ಜಿಲ್ ಗೆ ಉಡುಪಿ ಮೂಲದ ಮಾಲಾ ಅಡಿಗ “ನೀತಿ ನಿರ್ದೇಶಕಿ”

05:31 PM Nov 21, 2020 | Nagendra Trasi |

ವಾಷಿಂಗ್ಟನ್:ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರು ಉಡುಪಿ ಮೂಲದ ಮಾಲಾ ಅಡಿಗ ಅವರನ್ನು ಬೈಡೆನ್ ಪತ್ನಿ, ದೇಶದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ “ನೀತಿ ನಿರ್ದೇಶಕ”ರನ್ನಾಗಿ ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಮಾಲಾ ಅಡಿಗ ಅವರು ಜಿಲ್ ಅವರ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಅಲ್ಲದೇ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಅವರ ಚುನಾವಣಾ ಪ್ರಚಾರದ ಅಭಿಯಾನದ ಹಿರಿಯ ನೀತಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಈ ಮೊದಲು ಮಾಲಾ ಅಡಿಗ ಬೈಡೆನ್ ಫೌಂಡೇಶನ್ ನ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಫ್ಯಾಮಿಲೀಸ್ ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತಾವಧಿಯಲ್ಲಿ ಮಾಲಾ ಅಡಿಗ ಅವರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋದ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ಹಾಗೂ ಜಾಗತಿಕ ಮಹಿಳಾ ಸಮಸ್ಯೆಗಳ ಕಾರ್ಯದರ್ಶಿ, ಮಾನವ ಹಕ್ಕುಗಳ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳ ನಿರ್ದೇಶಕಿಯಾಗಿ ಮಾಲಾ ಅವರು ಕಾರ್ಯನಿರ್ವಹಿಸಿದ್ದರು.

ಉಡುಪಿ  ಮೂಲದ ಮಾಲಾ ಅಡಿಗ ಅಮೆರಿಕದ ಇಲಿನಾಯ್ಸ್ ನಿವಾಸಿಯಾಗಿದ್ದು, ಗ್ರಿನ್ನೆಲ್ಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಚಿಕಾಗೋ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದರು. ಮಾಲಾ ಅಡಿಗ ಅವರು 2008ರ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಚುನಾವಣಾ ಪ್ರಚಾರದಲ್ಲಿ ಕೈಜೋಡಿಸುವ ಮುನ್ನ ಚಿಕಾಗೋ ಕಾನೂನು ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next