Advertisement

ಭಾರತೀಯ ಅಮೆರಿಕನ್‌ ರಾಜಾ ಕೃಷ್ಣಮೂರ್ತಿಗೆ ನಾಯಕತ್ವ ಹುದ್ದೆ

11:18 AM Sep 14, 2017 | Team Udayavani |

ವಾಷಿಂಗ್ಟನ್‌ : ಭಾರತೀಯ ಅಮೆರಿಕನ್‌ ರಾಜಾ ಕೃಷ್ಣಮೂರ್ತಿ ಅವರನ್ನು ಡೆಮೊಕ್ರಾಟಿಕ್‌ ಪಕ್ಷದ ನೂತನ ಆರ್ಥಿಕ ಕಾರ್ಯಪಡೆಯ ನಾಯಕತ್ವ ಹುದ್ದೆಗೆ ನೇಮಿಸಲಾಗಿದೆ. 

Advertisement

44ರ ಹರೆಯದ ಕೃಷ್ಣಮೂರ್ತಿ ಅವರು ಶಿಕಾಗೋ ಕಾಂಗ್ರೆಸ್‌ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಡೆಮೊಕ್ರಾಟಿಕ್‌ ಪಕ್ಷದ ನೂತನ ಆರ್ಥಿಕ ಪಡೆ ಸಹ ಅಧ್ಯಕ್ಷ ಸ್ಥಾನವನ್ನು ಇವರು ತಮ್ಮ ಕಾಂಗ್ರೆಸ್‌ ಸಹೋದ್ಯೋಗಿಗಳಾಗಿರುವ ಸುಸಾನ್‌ ಡೆಲ್‌ ಬೆನ್‌, ಡೆಬೀ ಡಿಂಗೆಲ್‌ ಮತ್ತು ಡ್ಯಾರನ್‌ ಸೋಟೋ ಅವರೊಂದಿಗೆ ವಹಿಸಿಕೊಳ್ಳಲಿದ್ದಾರೆ. 

ಡೆಮೊಕ್ರಾಟಿಕ್‌ ಪಕ್ಷದ ಸದನ ಕಾಕಸ್‌ ಕೈಗೊಂಡಿರುವ ಈ ಸಂಘಟಿತ ಪ್ರಯತ್ನದಿಂದಾಗಿ ಕಠಿನ ಪರಿಶ್ರಮಿ ಅಮೆರಿಕನ್ನರಿಗೆ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಲಾಭವಾಗುವುದೆಂದು ಹೇಳಿಕೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next