Advertisement

ಕೋವಿಡ್ ಸೋಂಕಿತರ ಸಮಸ್ಯೆಗೆ ಔಷಧಿ ಸಂಶೋಧನೆ: ಭಾರತೀಯ ಮೂಲದ ವೈದ್ಯೆಯ ಸಾಧನೆ !

08:32 PM Nov 21, 2020 | Mithun PG |

ವಾಷಿಂಗ್ಟನ್:ಕೋವಿಡ್ ಸೋಂಕಿತರು ಎದುರಿಸುವ ಶ್ವಾಸಕೋಶ ಸಂಬಂಧಿ ಹಾಗೂ ಬಹು ಅಂಗಾಗ ವೈಫಲ್ಯದಂತಹ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ಮೂಲದ ಅಮೆರಿಕ ವೈದ್ಯರು ಔಷಧಿ ಸಂಶೋಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಅಮೆರಿಕದಲ್ಲಿರುವ ಸೆಂಟ್ ಜೂಡ್ ಮಕ್ಕಳ ಸಂಶೋಧನಾ  ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ತಿರುಮಲಾ ದೇವಿ ಕನ್ನೆಗಂಟಿ ಅವರೇ ಈ ಸಂಶೋಧನೆ ನಡೆಸಿದವರು.

ಕೋವಿಡ್ ಸೋಂಕಿಗೆ ತುತ್ತಾದ ವ್ಯಕ್ತಿಯ ಜೀವ ಕಣಗಳು ಯಾವ ರೀತಿ ಸಾವನ್ನಪ್ಪುತ್ತವೆ ಎಂಬುದರ ಕುರಿತಾಗಿ ಸಂಶೋಧನೆ ನಡೆಸಿದ  ಇವರು, ಆ ಮೂಲಕ ಸೋಂಕಿತರಲ್ಲಿ ಕಂಡುಬರುವ ಶ್ವಾಸಕೋಶದ ಸಮಸ್ಯೆ ಮತ್ತು ಬಹು ಅಂಗಾಗ ವೈಪಲ್ಯವನ್ನು ತಡೆಗಟ್ಟುವ  ಔಷಧಿಯನ್ನು ಪತ್ತೆಹಚ್ಚಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಪರಿಣಾಮಕಾರಿಯಾದ ಚಿಕಿತ್ಸೆಯನ್ನು ನೀಡುವ ಮುನ್ನ ಸಮಸ್ಯೆಯ ರೀತಿಯನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಪ್ರಮುಖವಾದ  ಅಂಶವಾಗಿದೆ ಎಂದು ಸೆಂಟ್ ಜೂಡ್ ರೋಗ ನಿರೋಧಕ ಶಾಸ್ತ್ರ ವಿಭಾಗದ ಉಪಾಧ್ಯಕ್ಷೆ  ಡಾ ಕನ್ನೆಗಂಟಿ ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡ ಪರ ಹೋರಾಟಗಾರರು ಡೋಂಗಿಗಳು ಎಂದ ಯತ್ನಾಳ ಹೇಳಿಕೆ ಖಂಡಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

Advertisement

ಡಾ ಕನ್ನೆಗಂಟಿ ಮೂಲತಃ ತೆಲಂಗಾಣದವರು. ಇವರು ತಮ್ಮ ಪದವಿ ವ್ಯಾಸಂಗವನ್ನು ವಾರಂಗಲ್ ನ ಕಾಕತಿಯಾ ವಿಶ್ವವಿದ್ಯಾನಿಲಯದಲ್ಲಿ ಪುರ್ಣಗೊಳಿಸಿದರು. ನಂತರ ರಸಾಯನ ಶಾಸ್ತ್ರ, ಪ್ರಾಣಿ ಶಾಸ್ತ್ರ,ಹಾಗೂ ಸಸ್ಯ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ  ಇವರು 2007 ರಿಂದ  ಅಮೆರಿಕದ ಸೆಂಟ್ ಜೂಡ್ ಮಕ್ಕಳ ಸಂಶೋಧನಾ   ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸಂಶೋಧನೆಯ ಅಧ್ಯಯನವು ಕೋವಿಡ್ ಒಳಗೊಂಡಂತೆ  ‘ಸೆಪ್ಸಿಸ್’ನಂತಹ ಇತರ ಮಾರಣಾಂತಿಕ ಸಮಸ್ಯೆಗಳ ವಿರುದ್ಧ ಹೋರಾಡಲು  ಸಹಾಯ ಮಾಡಲಿದೆ ಎಂದು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next