Advertisement

ಶುಕ್ರಗ್ರಹದ ಬಗ್ಗೆ ಭಾರತೀಯ ರಾಯಭಾರಿಯ ಹಾಡು

05:30 PM Sep 17, 2020 | Nagendra Trasi |

ನವದೆಹಲಿ:ಬ್ರಹ್ಮಾಂಡದ ಹಲವು ಗ್ರಹಗಳು, ನಕ್ಷತ್ರಗಳ ಮೇಲೆ ಹಾಡು ಬರೆದು ವಿಖ್ಯಾತವಾಗಿರುವ ಭಾರತೀಯ ರಾಯಭಾರಿ ಯೊಬ್ಬರು ಈಗ ಶುಕ್ರಗ್ರಹದ ಮೇಲೆಯೂ ಒಂದು ಹಾಡು ಬರೆದು ಸುದ್ದಿಯಾಗಿದ್ದಾರೆ.

Advertisement

ಮಡಗಾಸ್ಕರ್‌ ಮತ್ತುಕೊಮೊರೋಸ್‌ನಲ್ಲಿ ಭಾರತದ ಪ್ರತಿನಿಧಿ ಯಾಗಿರುವ ಅಭಯ್‌ ಕುಮಾರ್‌, ಜನಪ್ರಿಯ ಕವಿಯೂ ಹೌದು. ಇತ್ತೀಚೆಗೆ ವಿಜ್ಞಾನಿಗಳು ಶುಕ್ರಗ್ರಹದ ಮೇಲಿನ ಅಪರೂ ಪದ ಅಣು ಮೋಡವೊಂದನ್ನು ಪತ್ತೆಹತ್ತಿದ್ದು, ಆ ಗ್ರಹದಲ್ಲಿ ಸೂಕ್ಷ್ಮ ಜೀವಾಣುಗಳಿರಬಹುದು ಎನ್ನುವುದನ್ನು ಇದು ಸೂಚಿಸುತ್ತದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ತಾವು ಶುಕ್ರಗ್ರಹದ ನಿಗೂಢತೆಯ ಬಗ್ಗೆ ಬರೆದ ಪದ್ಯ, ವಿಜ್ಞಾನಿಗಳ ಈ ಸಂಶೋಧನೆಗೆ ಪೂರಕವಾಗಿದೆ ಎಂದು ಸಂಭ್ರಮಿಸುತ್ತಾರೆ ಅಭಯ್‌.

ಅಭಯ್‌ ಈಗಾಗಲೇ ಭೂಮಿ ಹಾಗೂ ಚಂದ್ರನ ಬಗ್ಗೆ ಬರೆದ ಹಾಡಿಗೆ ಹೆಸರಾಂತ ಸಂಗೀತಗಾರ ಎಲ್‌. ಸುಬ್ರಮಣ್ಯಂ ರಾಗ ಸಂಯೋಜಿಸಿದ್ದರು. ಅವರು ಮಂಗಳ ಗ್ರಹದ ಕುರಿತು ಬರೆದ ಹಾಡಿಗೆ ಕೀನ್ಯಾ ಮೂಲದ ಸಂಗೀತಗಾರ ಒಂಡಿಗೋ ರಾಗ ಸಂಯೋಜನೆ ಮಾಡಿದ್ದರು.

ಸೂರ್ಯ ಹಾಗೂ ಗುರು ಗ್ರಹದ ಮೇಲೂ ಅಭಯ್‌ ಹಾಡು ರಚಿಸಿದ್ದು, ಮುಂದಿನ ದಿನಗಳಲ್ಲಿ ಸೌರಮಂಡಲದಲ್ಲಿನ ಇತರೆ ಕಾಯಗಳ ಬಗ್ಗೆಯೂ ಹಾಡು ಬರೆಯುವುದಾಗಿ ಹೇಳಿದ್ದಾರೆ.

ಐಎಸ್‌ಐ ಪರ ಬೇಹು:ಪ್ರಮುಖ ವ್ಯಕ್ತಿ ಬಂಧನ 
ವಿಶಾಖಪಟ್ಟಣದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರ ಬೇಹುಗಾರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಗಿಟೇಲಿ ಇಮ್ರಾನ್‌ (37) ಎಂಬಾತನನ್ನು ಎನ್‌ ಐಎ ಬಂಧಿಸಿದೆ. ಗುಜರಾತ್‌ನ ಗೋಧ್ರಾ ನಿವಾಸಿಯಾಗಿ ರುವ ಇಮ್ರಾನ್‌, ಭಾರತದಲ್ಲಿನ ಪ್ರಮುಖ ಸ್ಥಳಗಳ ಮೇಲಿನ ರಹಸ್ಯ ಮಾಹಿತಿ ಸಂಗ್ರಹಿಸುತ್ತಿದ್ದ. ದೇಶದ ಪ್ರಮುಖ ಕ್ಷೇತ್ರಗಳು ಮತ್ತು ಸಂಸ್ಥೆಗಳಿಂದ ಮಾಹಿತಿ ಪಡೆಯುವ ಅಂತಾರಾಷ್ಟ್ರೀಯ ಜಾಲವೊಂದರ ಭಾಗವಾಗಿ ಆತಕೆಲಸ ಮಾಡುತ್ತಿದ್ದ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂಥ ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತೀಯ ನೌಕಾಪಡೆಯ ಕೆಲವು ಅಧಿಕಾರಿಗಳನ್ನು ಬಲೆಗೆ ಹಾಕಿಕೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next