Advertisement

ಕೊಹ್ಲಿ ತಂಡಕ್ಕೆ ಭಾರತೀಯ ರಾಯಭಾರಿ ಶುಭ ಹಾರೈಕೆ

10:39 PM Jun 08, 2019 | Team Udayavani |

ಲಂಡನ್‌: ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರಿಕೆಟ್‌ ತಂಡ ಬ್ರಿಟನ್‌ ರಾಯಭಾರಿಯನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಅವರು ಕೊಹ್ಲಿ ಪಡೆಗೆ ಶುಭ ಹಾರೈಸಿದರು.ಶುಕ್ರವಾರದ ಅಭ್ಯಾಸ ಮಳೆಯಿಂದ ರದ್ದಾದ ಬಳಿಕ ಟೀಮ್‌ ಇಂಡಿಯಾದ ಎಲ್ಲ ಆಟಗಾರರು, ತಂಡದ ಆಡಳಿತ ಮಂಡಳಿಯ ಸದಸ್ಯರೆಲ್ಲ ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ರುಚಿ ಘನಶ್ಯಾಮ್‌ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿತು.

Advertisement

ಉತ್ತಮ ಪ್ರದರ್ಶನ ನೀಡಿ ದೇಶವನ್ನು ಸಂಭ್ರಮಿಸುವಂತೆ ಮಾಡಿ ಎಂದು ಅವರು ಶುಭ ಕೋರಿದರು.ಈ ಭೇಟಿಯ ಅನೇಕ ಚಿತ್ರಗಳನ್ನು ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next