Advertisement

ಅಗ್ನಿಪಥ: ವಾಯುಪಡೆಗೆ ಸೇರಲು ಬರೋಬ್ಬರಿ 7.50 ಲಕ್ಷ ಅರ್ಜಿ

10:46 PM Jul 06, 2022 | Team Udayavani |

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ “ಅಗ್ನಿಪಥ’ ಯೋಜನೆಯನ್ವಯ ಭಾರತೀಯ ವಾಯುಪಡೆಗೆ ಸೇರಲು ಬರೋಬ್ಬರಿ 7.50 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ರಕ್ಷಣಾ ಇಲಾಖೆ ವಕ್ತಾರರೇ ಬುಧವಾರ ಈ ಮಾಹಿತಿ ನೀಡಿದ್ದಾರೆ.

Advertisement

ವಾಯುಪಡೆ ಉದ್ಯೋಗಕ್ಕೆ ಇಷ್ಟೊಂದು ಸಂಖ್ಯೆಯ ಯುವಕರು ನೋಂದಣಿ ಮಾಡಿಕೊಂಡಿರುವುದು ಇದೇ ಮೊದಲು. ಮಂಗಳವಾರ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, 7,49,899 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಕ್ತಾರ ಭರತ್‌ ಭೂಷಣ್‌ ಬಾಬು ಟ್ವೀಟ್‌ ಮಾಡಿದ್ದಾರೆ.

ಅಗ್ನಿಪಥ ಯೋಜನೆಯನ್ವಯ ಆನ್‌ಲೈನ್‌ ನೋಂದಣಿಗೆ ಜೂ.24ರಿಂದ ಅವಕಾಶ ನೀಡಲಾಗಿತ್ತು. ಮಂಗಳವಾರ ಕೊನೇ ದಿನವಾಗಿದ್ದು, ವಾಯುಪಡೆಯ 3 ಸಾವಿರ ಹುದ್ದೆಗಳಿಗೆ ಏಳೂವರೆ ಲಕ್ಷ ಮಂದಿ ನೋಂದಣಿ ಮಾಡಿಕೊಂಡಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next