Advertisement

ಲಘು ವಿಮಾನ ಪತನ: ಐ.ಎ.ಎಫ್. ಪೈಲಟ್ ಸಾವು ; ಇಬ್ಬರಿಗೆ ಗಾಯ

10:03 AM Feb 25, 2020 | Hari Prasad |

ನವದೆಹಲಿ: ಪಂಜಾಬ್ ನ ಪಟಿಯಾಲ ಸೇನಾ ಕಂಟೋನ್ಮೆಂಟ್ ಪ್ರದೇಶದಲ್ಲಿ ಇಂದು ಲಘು ವಿಮಾನವೊಂದು ಪತನಗೊಂಡು ಅದನ್ನು ಚಲಾಯಿಸುತ್ತಿದ್ದ ಪೈಲಟ್ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಎನ್.ಸಿ.ಸಿ. ಕೆಡೆಟ್ ಗಳು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಸೋಮವಾರ ಬೆಳಿಗ್ಗೆ 11.30ರ ಸುಮಾರಿಗೆ ಪಟಿಯಾಲ ಏವಿಯೇಷನ್ ಕ್ಲಬ್ ವಿಮಾನ ನಿಲ್ದಾಣದಿಂದ ಗಗನಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಈ ತರಬೇತು ವಿಮಾನ ನೆಲಕ್ಕಪ್ಪಳಿಸಿತು. ಮತ್ತು ಇದನ್ನು ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ಜಿ.ಎಸ್. ಚೀಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆ ತನಿಖೆಗೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next