Advertisement

ಐದು ವರ್ಷದಲ್ಲಿ ಭಾರತ ವಾಯುಪಡೆಯ 26 ವಿಮಾನಗಳು ಪತನ

11:00 AM Aug 26, 2019 | keerthan |

ಹೊಸದಿಲ್ಲಿ: ಕಳೆದ ಐದು ವರ್ಷದಲ್ಲಿ ಭಾರತೀಯ ವಾಯುಪಡೆಯ 26 ವಿಮಾನಗಳು ಅಪಘಾತದಿಂದಾಗಿ ಪತನವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

Advertisement

ಸಂಸತ್‌ ಗೆ  ಅಂಕಿ ಅಂಶಗಳನ್ನು ನೀಡಿರುವ ರಕ್ಷಣಾ ಇಲಾಖೆ, ಕಳೆದ ಐದು ವರ್ಷದಲ್ಲಿ 26 ಫೈಟರ್‌ ಜೆಟ್‌ ಗಳು ಪತನವಾಗಿದೆ. ಇದರೊಂದಿಗೆ 12 ಪೈಲಟ್‌ ಗಳು ಮತ್ತು ಏಳು ಜನ ಸಿಬ್ಬಂದಿ ಮೃತರಾಗಿದ್ದಾರೆ ಎಂದು ವರದಿ ನೀಡಿದೆ.

ವಿಪರ್ಯಾಸವೇನೆಂದರೆ, 2019ರ ವರ್ಷದ ಮೊದಲ ಆರು ತಿಂಗಳಲ್ಲೇ ಭಾರತೀಯ ವಾಯು ಪಡೆ ಆರು ವಿಮಾನಗಳನ್ನು ಕಳೆದುಕೊಂಡಿದೆ. ಜನವರಿಯಲ್ಲಿ ಜಾಗ್ವಾರ್‌ ವಿಮಾನವನ್ನು ಕಳೆದುಕೊಂಡರೆ, ಎಂಕೆ 132 ಮತ್ತು ಮಿಗ್‌ 27ಯುಪಿಜಿ ವಿಮಾನಗಳನ್ನು ಫೆಬ್ರವರಿ ತಿಂಗಳಲ್ಲಿ ಕಳೆದುಕೊಂಡಿದೆ. ಮಿಗ್‌ 21 ಬೈಸನ್‌ ಮತ್ತು ಮಿಗ್‌ 27 ಯುಪಿಜಿ ವಿಮಾನಗಳು ಮಾರ್ಚ್‌ ತಿಂಗಳಲ್ಲಿ, ಎ.ಎನ್‌ 32 ವಿಮಾನ ಜೂನ್‌ ತಿಂಗಳಲ್ಲಿ ಪತನವಾಗಿದೆ ಎಂದು ರಕ್ಷಣಾ ಇಲಾಖೆ ವರದಿ ನೀಡಿದೆ.

ಆಗಸ್ಟ್‌ ತಿಂಗಳಲ್ಲಿ ಅಸ್ಸಾಂ ನ ತರಭೇತಿ ಶಿಬಿರದಲ್ಲಿ ಸುಖೋಯ್‌ 30 ವಿಮಾನ ಪತನವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next