Advertisement

ODI World Cup: ಟೀಂ ಇಂಡಿಯಾ ಪರ ಗಿಲ್- ರೋಹಿತ್ ಇನ್ನಿಂಗ್ ಆರಂಭಿಸುವುದು ಅನುಮಾನ

07:02 PM Jun 28, 2023 | Team Udayavani |

ಮುಂಬೈ: ಈ ವರ್ಷದ ಅಕ್ಟೋಬರ್ -ನವೆಂಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ತಯಾರಿಗಳು ಅಧಿಕೃತವಾಗಿ ಆರಂಭವಾಗಿದೆ. ಕೂಟದ ವೇಳಾಪಟ್ಟಿಯು ಮಂಗಳವಾರ ಬಿಡುಗಡೆಯಾಗಿದೆ. 2013ರ ಬಳಿಕ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಈ ಬಾರಿ ಚಾಂಪಿಯನ್ ಆಗುವ ಫೇವರೆಟ್ ಆಗಿ ಸಿದ್ದತೆ ನಡೆಸುತ್ತಿದೆ.

Advertisement

ಟೀಂ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರು ಟೀಂ ಇಂಡಿಯಾದ ಬಗ್ಗೆ ಮಾತನಾಡಿದ್ದಾರೆ. ಈ ವಿಶ್ವಕಪ್ ನಲ್ಲಿ ಭಾರತ ತಂಡವು ಆರಂಭಿಕರಾಗಿ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆಡುವುದು ಅನುಮಾನ ಎಂದಿದ್ದಾರೆ.

ಕೆಎಲ್ ರಾಹುಲ್ ಗಾಯಗೊಂಡಿರುವ ಕಾರಣ, ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಏಕದಿನದಲ್ಲಿ ಭಾರತದ ಆರಂಭಿಕ ಜೋಡಿಯಾಗಿದ್ದಾರೆ. ಆದರೆ, ಅವರಲ್ಲಿ ಯಾರೂ ಎಡಗೈ ಆಟಗಾರರಲ್ಲದ ಕಾರಣ ಈ ಜೋಡಿಯು ವಿಶ್ವಕಪ್‌ನಲ್ಲಿ ಮುಂದುವರಿಯುವುದಿಲ್ಲ ಎಂದು ಶಾಸ್ತ್ರಿ ಭಾವಿಸಿದ್ದಾರೆ.

ಇದನ್ನೂ ಓದಿ:Samsung Galaxy A34 5G: ಹೇಗಿದೆ ಈ ಸ್ಮಾರ್ಟ್ ಫೋನ್? ಇಲ್ಲಿದೆ ಪೂರ್ಣ ಮಾಹಿತಿ

“ಇದೊಂದು ಸವಾಲಾಗಿರುತ್ತದೆ. ನೀವು ಕೂಟವನ್ನು ಹತ್ತಿರದಿಂದ ನೋಡಬೇಕು. ಫಾರ್ಮ್ ಮುಖ್ಯವಾಗುತ್ತದೆ. ಆದರೆ ನೀವು ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಎಡಗೈ ಆಟಗಾರನು ಅಗ್ರ ಕ್ರಮಾಂಕದಲ್ಲಿ ವ್ಯತ್ಯಾಸ ತರುತ್ತಾನೆ. ಆರಂಭಿಕನಾಗಿಯೇ ಇರಬೇಕೆಂಬ ಅಗತ್ಯವಿಲ್ಲ, ಮೊದಲ ಮೂರು ಅಥವಾ ನಾಲ್ಕರಲ್ಲಾದರೂ ಎಡಗೈ ಆಟಗಾರ ಬೇಕು. ನಾನು, ಮೊದಲ ಆರು ಬ್ಯಾಟರ್ ಗಳಲ್ಲಿ ಇಬ್ಬರು ಎಡಗೈ ಆಟಗಾರರನ್ನು ನೋಡಲು ಬಯಸುತ್ತೇನೆ” ಎಂದು ಶಾಸ್ತ್ರಿ ದಿ ವೀಕ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

Advertisement

ಗೌತಮ್ ಗಂಭೀರ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ (ಎಲ್ಲರೂ ಎಡಗೈ ಆಟಗಾರರು) 2011 ರ ವಿಶ್ವಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೈಲೈಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next