Advertisement

ವಿಂಡೀಸನ್ನು ಹೊರದಬ್ಬಿದ ಟೀಮ್‌ ಇಂಡಿಯಾ

11:38 AM Jun 29, 2019 | Sriram |

ಮ್ಯಾಂಚೆಸ್ಟರ್‌: ಭಾರತದ ಏಟಿಗೆ ತತ್ತರಿಸಿದ ವೆಸ್ಟ್‌ ಇಂಡೀಸ್‌ ಸುಲಭದಲ್ಲಿ ಶರಣಾಗಿ ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಬಿದ್ದಿದೆ. ಇನ್ನೊಂದೆಡೆ ಅಜೇಯ ಅಭಿಯಾನ ನಡೆಸಿದ ವಿರಾಟ್‌ ಕೊಹ್ಲಿ ಪಡೆ ಸೆಮಿಫೈನಲ್‌ ಬಾಗಿಲಿಗೆ ಬಂದು ನಿಂತಿದೆ.

Advertisement

ಗುರುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಭಾರತ 125 ರನ್ನುಗಳ ಬೃಹತ್‌ ಅಂತರದಿಂದ ವಿಂಡೀಸನ್ನು ಮಗು ಚಿತು. ಇದರೊಂದಿಗೆ 5ನೇ ಜಯ ಸಾಧಿಸಿದ ಟೀಮ್‌ ಇಂಡಿಯಾ 11 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೇರಿ ನಾಕೌಟ್‌ ಟಿಕೆಟ್‌ ಕಾಯ್ದಿರಿಸಿತು. ಇನ್ನೂ 3 ಪಂದ್ಯ ಆಡ ಬೇಕಿರುವ ಭಾರತ, ಒಂದರಲ್ಲಿ ಜಯಸಾಧಿಸಿದರೆ ಈ ಪ್ರವೇಶವನ್ನು ಅಧಿಕೃತ ಗೊಳಿಸಲಿದೆ. ರವಿವಾರ ಭಾರತ-ಇಂಗ್ಲೆಂಡ್‌ ಬರ್ಮಿಂಗ್‌ಹ್ಯಾಮ್‌ನಲ್ಲಿ ಎದುರಾಗಲಿವೆ.

ಹೋರಾಡದೆ ಸೋತ ಹೋಲ್ಡರ್‌ ಪಡೆ
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಕೆರಿಬಿಯನ್ನರ ಪರಿಣಾಮಕಾರಿ ಬೌಲಿಂಗಿಗೆ ಮರ್ಯಾದೆ ಕೊಟ್ಟು ಆಡಿತು. ದಾಖಲಿಸಿದ ಸ್ಕೋರ್‌ 7 ವಿಕೆಟಿಗೆ 268 ರನ್‌. ದೈತ್ಯ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದ ವಿಂಡೀಸಿಗೆ ಇದನ್ನು ಬೆನ್ನಟ್ಟುವುದು ಅಸಾಧ್ಯವೇನೂನ ಆಗಿರಲಿಲ್ಲ. ಆದರೆ ಅದು ಸೊಲ್ಲೆತ್ತದೆ ಶರಣಾಯಿತು; 34.2 ಓವರ್‌ಗಳಲ್ಲಿ 143 ರನ್ನಿಗೆ ಕುಸಿಯಿತು. ಹೋಲ್ಡರ್‌ ಪಡೆ 7 ಪಂದ್ಯಗಳಲ್ಲಿ ಅನುಭವಿಸಿದ 5ನೇ ಸೋಲು ಇದಾಗಿದೆ.

ವೆಸ್ಟ್‌ ಇಂಡೀಸ್‌ ಸರದಿಯಲ್ಲಿ 31 ರನ್‌ ಮಾಡಿದ ಸುನೀಲ್‌ ಆ್ಯಂಬ್ರಿಸ್‌ ಅವರದೇ ಗರಿಷ್ಠ ಗಳಿಕೆ. ಶಮಿ ಮತ್ತೂಮ್ಮೆ ಘಾತಕ ಬೌಲಿಂಗ್‌ ನಡೆಸಿ 16 ರನ್ನಿಗೆ 4 ವಿಕೆಟ್‌ ಉಡಾಯಿಸಿದರು. ಬುಮ್ರಾ ಮತ್ತು ಚಹಲ್‌ ತಲಾ 2 ವಿಕೆಟ್‌ ಹಾರಿಸಿದರು. ಪಾಂಡ್ಯ, ಕುಲದೀಪ್‌ ಅವರಿಗೆ ಒಂದೊಂದು ವಿಕೆಟ್‌ ಸಿಕ್ಕಿತು.

163 ಡಾಟ್‌ ಬಾಲ್ಸ್‌!
ಅಫ್ಘಾನಿಸ್ಥಾನ ವಿರುದ್ಧ ಪರದಾಡುತ್ತಲೇ ಬ್ಯಾಟಿಂಗ್‌ ನಡೆಸಿದ್ದ ಭಾರತ, ಕೆರಿಬಿಯನ್ನರ ವಿರುದ್ಧವೂ ಭಾರೀ ಜೋಶ್‌ ತೋರಲಿಲ್ಲ. ಅಲ್ಲಿಗಿಂತ ಜಾಸ್ತಿ ರನ್‌ ಗಳಿಸಿದರೂ ಡಾಟ್‌ ಬಾಲ್‌ಗ‌ಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳ ಕಂಡುಬಂತು. ಅಫ್ಘಾನ್‌ ವಿರುದ್ಧ 152 ಡಾಟ್‌ ಬಾಲ್‌ಗ‌ಳಾದರೆ ಇಲ್ಲಿ ಇದರ ಸಂಖ್ಯೆ 163ಕ್ಕೆ ಏರಿತ್ತು. ಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯವೂ ಮುಂದುವರಿಯಿತು.

Advertisement

ಮಿಡ್ಲ್ ಆರ್ಡರ್‌ ವೈಫ‌ಲ್ಯ
ಮಿಡ್ಲ್ ಆರ್ಡರ್‌ ಆಟಗಾರರಾದ ವಿಜಯ್‌ ಶಂಕರ್‌ ಮತ್ತು ಕೇದಾರ್‌ ಜಾಧವ್‌ ಭಾರೀ ವೈಫ‌ಲ್ಯ ಅನುಭವಿಸಿದ್ದು ಭಾರತದ ಪಾಲಿಗೆ ಚಿಂತೆಯ ಸಂಗತಿಯಾಗಿದೆ. ಶಂಕರ್‌ 19 ಎಸೆತಗಳಿಂದ 14 ರನ್‌ ಮಾಡಿದರೆ (3 ಬೌಂಡರಿ), ಜಾಧವ್‌ 10 ಎಸೆತ ಎದುರಿಸಿ 7 ರನ್ನಿಗೆ ಆಟ ಮುಗಿಸಿದರು. ಇವರಿಬ್ಬರೂ ಕೆಮರ್‌ ರೋಚ್‌ ಬಲೆಗೆ ಬಿದ್ದರು.
ಉತ್ತಮ ಲಯದಲ್ಲಿದ್ದ ರೋಹಿತ್‌ ಶರ್ಮ ವಿವಾದಾತ್ಮಕ ತೀರ್ಪೊಂದಕ್ಕೆ ವಿಕೆಟ್‌ ಒಪ್ಪಿಸಬೇಕಾ ಯಿತು. ರೋಹಿತ್‌ ಗಳಿಕೆ 23 ಎಸೆತಗಳಿಂದ 18 ರನ್‌ (1 ಬೌಂಡರಿ, 1 ಸಿಕ್ಸರ್‌). ಕೀಪರ್‌ ಹೋಪ್‌ ಈ ಕ್ಯಾಚ್‌ ಪಡೆದರು. ಆದರೆ ಚೆಂಡು ಬ್ಯಾಟಿಗೆ ತಾಗಿತ್ತೋ ಅಥವಾ ಪ್ಯಾಡಿಗೋ ಎಂಬುದು ಗೊಂದಲವಾಗಿಯೇ ಉಳಿಯಿತು.

21ನೇ ಓವರ್‌ ತನಕ ಕ್ರೀಸ್‌ನಲ್ಲಿ ಉಳಿದ ರಾಹುಲ್‌ 64 ಎಸೆತಗಳಿಂದ 48 ರನ್‌ ಬಾರಿಸಿದರು. ಇದರಲ್ಲಿ 6 ಬೌಂಡರಿ ಸೇರಿತ್ತು. ಅರ್ಧ ಶತಕದ ನಿರೀಕ್ಷೆಯಲ್ಲಿದ್ದ ಅವರಿಗೆ ನಾಯಕ ಹೋಲ್ಡರ್‌ ಅಡ್ಡಗಾಲಿಕ್ಕಿದರು. ರಾಹುಲ್‌-ಕೊಹ್ಲಿ 2ನೇ ವಿಕೆಟಿಗೆ 69 ರನ್‌ ಒಟ್ಟುಗೂಡಿಸಿ ತಂಡವನ್ನು ಆಧರಿಸಿದರು.

ಕೊಹ್ಲಿ ಸತತ 4 ಫಿಫ್ಟಿ
ರೋಹಿತ್‌ ನಿರ್ಗಮನದ ಬಳಿಕ ಬ್ಯಾಟಿಂಗ್‌ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ ಈ ಕೂಟದಲ್ಲಿ ಸತತ 4ನೇ ಅರ್ಧ ಶತಕ ಬಾರಿಸಿ ಮಿಂಚಿದರು. ಆದರೆ ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಯಾರಿಂದಲೂ ಬೆಂಬಲ ಸಿಗಲಿಲ್ಲ. ಶಂಕರ್‌, ಜಾಧವ್‌ ಬೆನ್ನು ಬೆನ್ನಿಗೆ ಔಟಾದುದನ್ನು ಅವರು ಇನ್ನೊಂದು ತುದಿಯಲ್ಲಿ ನಿರಾಶರಾಗಿ ನಿಂತು ಕಾಣಬೇಕಾಯಿತು.
ಅಫ್ಘಾನ್‌ ವಿರುದ್ಧ ಆಮೆಗತಿಯ ಬ್ಯಾಟಿಂಗ್‌ ನಡೆಸಿ ತೀವ್ರ ಟೀಕೆ ಎದುರಿಸಿದ್ದ ಧೋನಿ ಇಲ್ಲಿ ಕೊನೆಯ ಹಂತದಲ್ಲಿ ಬಿರುಸಿನ ಆಟಕ್ಕಿಳಿದರು. ಒಶೇನ್‌ ಥಾಮಸ್‌ ಎಸೆದ ಕೊನೆಯ ಓವರಿನಲ್ಲಿ ಧೋನಿ 2 ಸಿಕ್ಸರ್‌, ಒಂದು ಬೌಂಡರಿ ಬಾರಿಸಿದರು. ಧೋನಿ ಕೊಡುಗೆ 61 ಎಸೆತಗಳಿಂದ ಅಜೇಯ 56 ರನ್‌ (3 ಬೌಂಡರಿ, 2 ಸಿಕ್ಸರ್‌). ಹಾರ್ದಿಕ್‌ ಪಾಂಡ್ಯ ಎಂದಿನ ಬಿರುಸಿನ ಆಟದ ಮೂಲಕ 46 ರನ್‌ ಬಾರಿಸಿದರು (5 ಬೌಂಡರಿ).

ವಿಂಡೀಸ್‌ ದಾಳಿಯಲ್ಲಿ ವೇಗಿಗಳದೇ ಮೇಲುಗೈ ಆಗಿತ್ತು. ರೋಚ್‌ 3, ಕಾಟ್ರೆಲ್‌ ಮತ್ತು ಹೋಲ್ಡರ್‌ ತಲಾ 2 ವಿಕೆಟ್‌ ಉರುಳಿಸಿದರು.

ಸ್ಕೋರ್‌ ಪಟ್ಟಿ
ಭಾರತ
ಕೆ.ಎಲ್‌. ರಾಹುಲ್‌ ಬಿ ಹೋಲ್ಡರ್‌ 48
ರೋಹಿತ್‌ ಶರ್ಮ ಸಿ ಶೈಹೋಪ್‌ ಬಿ ರೋಚ್‌ 18
ವಿರಾಟ್‌ ಕೊಹ್ಲಿ ಸಿ ಬ್ರಾವೊ ಬಿ ಹೋಲ್ಡರ್‌ 72
ವಿಜಯ್‌ ಶಂಕರ್‌ ಸಿ ಶೈಹೋಪ್‌ ಬಿ ರೋಚ್‌ 14
ಕೇದರ್‌ ಜಾಧವ್‌ ಸಿ ಶೈಹೋಪ್‌ ಬಿ ರೋಚ್‌ 7
ಎಂ.ಎಸ್‌. ಧೋನಿ ಔಟಾಗದೆ 56
ಹಾರ್ದಿಕ್‌ ಪಾಂಡ್ಯ ಸಿ ಅಲೆನ್‌ ಬಿ ಕಾಟ್ರೆಲ್‌ 46
ಮೊಹಮ್ಮದ್‌ ಶಮಿ ಸಿ ಶೈಹೋಪ್‌ ಕಾಟ್ರೆಲ್‌ 0
ಕುಲದೀಪ್‌ ಯಾದವ್‌ ಔಟಾಗದೆ 0
ಇತರ 7
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 268
ವಿಕೆಟ್‌ ಪತನ: 1-29, 2-98, 3-126, 4-140, 5-180, 6-250, 7-252.
ಬೌಲಿಂಗ್‌:
ಶೆಲ್ಡನ್‌ ಕಾಟ್ರೆಲ್‌ 10-0-50-2
ಕೆಮರ್‌ ರೋಚ್‌ 10-0-36-3
ಒಶೇನ್‌ ಥಾಮಸ್‌ 7-0-63-0
ಫ್ಯಾಬಿಯನ್‌ ಅಲೆನ್‌ 10-0-52-0
ಜಾಸನ್‌ ಹೋಲ್ಡರ್‌ 10-2-33-2
ಕಾರ್ಲೋಸ್‌ ಬ್ರಾತ್‌ವೇಟ್‌ 3-0-33-0
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ಜಾಧವ್‌ ಬಿ ಶಮಿ 6
ಸುನಿಲ್‌ ಆ್ಯಂಬ್ರಿಸ್‌ ಎಲ್‌ಬಿಡಬ್ಲ್ಯು ಬಿ ಪಾಂಡ್ಯ 31
ಶೈಹೋಪ್‌ ಬಿ ಶಮಿ 5
ನಿಕೋಲಸ್‌ ಪೂರನ್‌ ಸಿ ಶಮಿ ಬಿ ಕುಲದೀಪ್‌ 28
ಶಿಮ್ರನ್‌ ಹೆಟ್‌ಮೈರ್‌ ಸಿ ರಾಹುಲ್‌ ಬಿ ಶಮಿ 18
ಜಾಸನ್‌ ಹೋಲ್ಡರ್‌ ಸಿ ಕೇದಾರ್‌ ಬಿ ಚಹಲ್‌ 6
ಬ್ರಾತ್‌ವೇಟ್‌ ಸಿ ಧೋನಿ ಬಿ ಬುಮ್ರಾ 1
ಫ್ಯಾಬಿಯನ್‌ ಅಲನ್‌ ಎಲ್‌ಬಿಡಬ್ಲ್ಯುಬುಮ್ರಾ 0
ಕೆಮರ್‌ ರೋಚ್‌ ಔಟಾಗದೆ 14
ಶೆಲ್ಡನ್‌ ಕಾಟ್ರೆಲ್‌ ಎಲ್‌ಬಿಡಬ್ಲ್ಯು ಬಿ ಚಹಲ್‌ 10
ಒಶೇನ್‌ ಥಾಮಸ್‌ ಸಿ ರೋಹಿತ್‌ ಬಿ ಶಮಿ 6
ಇತರ 18
ಒಟ್ಟು (34.2 ಓವರ್‌ಗಳಲ್ಲಿ ಆಲೌಟ್‌) 143
ವಿಕಿಟ್‌ ಪತನ:1-10, 2-16, 3-71, 4-80, 5-98, 6-107, 7-107, 8-112, 9-124.
ಬೌಲಿಂಗ್‌:
ಮೊಹಮ್ಮದ್‌ ಶಮಿ 6.2-0-16-4
ಜಸ್‌ಪ್ರೀತ್‌ ಬುಮ್ರಾ 6-1-9-2
ಹಾರ್ದಿಕ್‌ ಪಾಂಡ್ಯ 5-0-28-1
ಕುಲದೀಪ್‌ ಯಾದವ್‌ 9-1-35-1
ಕೇದಾರ್‌ ಜಾಧವ್‌ 1-0-4-0
ಯಜುವೇಂದ್ರ ಚಹಲ್‌ 7-0-39-2
ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

Advertisement

Udayavani is now on Telegram. Click here to join our channel and stay updated with the latest news.

Next