Advertisement
ಇದು ಟಿ20 ವಿಶ್ವಕಪ್ ಬಳಿಕ ಭಾರತ ಆಡುತ್ತಿರುವ ಮೊದಲ ಟಿ20 ಸರಣಿ. ಭಾರತ ಅಲ್ಲಿ ಕೇವಲ ಪಾಕಿಸ್ಥಾನವನ್ನು ಮಣಿಸಲು ಯಶಸ್ವಿಯಾಗಿತ್ತು. ಆದರೆ 2019ರಿಂದ ಮೊದಲ್ಗೊಂಡು ವೆಸ್ಟ್ ಇಂಡೀಸ್ ವಿರುದ್ಧ ಸತತ 8 ಟಿ20 ಪಂದ್ಯಗಳನ್ನು ಗೆದ್ದ ಹಿರಿಮೆ ಭಾರತದ್ದು. ಅಲ್ಲದೇ ಇದು ತವರಿನ ಸರಣಿಯಾದ್ದರಿಂದ ಭಾರತದ ಮೇಲೆ ನಿರೀಕ್ಷೆ ಇಡಬಹುದಾಗಿದೆ.
ಡ್ಯಾಶಿಂಗ್ ಓಪನರ್ ಶಫಾಲಿ ವರ್ಮ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಇತ್ತೀಚೆಗೆ ಫಾರ್ಮ್ ಕೈಕೊಟ್ಟರೂ ಅವರ 2024ರ ತವರಿನ ಟಿ20 ಸಾಧನೆ ಅಮೋಘವಾಗಿಯೇ ಇದೆ. 20 ಪಂದ್ಯಗಳಿಂದ 531 ರನ್ ಪೇರಿಸಿದ್ದಾರೆ. ಸ್ಟ್ರೈಕ್‌ರೇಟ್ 126.73. ಶಫಾಲಿ ಗೈರಲ್ಲಿ ರಿಚಾ ಘೋಷ್‌ಗೆ ಭಡ್ತಿ ನೀಡಲಾಗಿದೆ. ಇದರಿಂದ ಮಧ್ಯಮ-ಕೆಳ ಕ್ರಮಾಂಕದ ಬ್ಯಾಟಿಂಗ್‌ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಜತೆಗೆ ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್, ಯಾಸ್ತಿಕಾ ಭಾಟಿಯಾ, ಪ್ರಿಯಾ ಪೂನಿಯಾ ಕೂಡ ತಂಡದಲ್ಲಿಲ್ಲ. ಅಪಾಯಕಾರಿ ವಿಂಡೀಸ್
ಭಾರತದಂತೆ ವೆಸ್ಟ್ ಇಂಡೀಸ್ ಕೂಡ ದೊಡ್ಡ ಸರಣಿಯಲ್ಲಿ ವೈಫಲ್ಯ ಕಾಣುತ್ತಲೇ ಇರುವ ತಂಡ. ಆದರೆ ಈ ವರ್ಷ ಆಡಿದ 13 ಟಿ20 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದೆ. ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ಆಘಾತವಿಕ್ಕುವ ಮೂಲಕ ವಿಂಡೀಸ್ ಸುದ್ದಿಯಾಗಿತ್ತು.
Related Articles
ಪ್ರಸಾರ: ಸ್ಪೋರ್ಟ್ಸ್ 18
Advertisement