Advertisement

ರೋಚಕ ಪಂದ್ಯದಲ್ಲಿ ಒಂದು ರನ್ ನಿಂದ ಸೋತ ಟೀಂ ಇಂಡಿಯಾ ಮಹಿಳೆಯರು

12:42 PM Nov 03, 2019 | keerthan |

ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀ ಇಂಡಿಯಾ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಒಂದು ರನ್ ಅಂತರದಿಂದ ಮುಗ್ಗರಿಸಿದೆ.

Advertisement

ನಾರ್ತ್ ಸೌಂಡ್ ನ ವಿವಿಯನ್ ರಿಚರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿದ ವಿಂಡೀಸ್ ಮಹಿಳೆಯರು ಏಳು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದರು. ನತಾಶ ಮೆಕ್ ಲೀನ್ 51 ರನ್ ಬಾರಿಸಿದರೆ, ನಾಯಕಿ ಸ್ಟೆಫಾನಿ ಟೇಲರ್ 94 ರನ್ ಬಾರಿಸಿದರು.

ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆತಿತ್ತು. ಪ್ರಿಯಾ ಪೂನಿಯಾ 75 ರನ್ ಸಿಡಿಸಿದರೆ, ಜೆಮಿಮಾ ರೋಡ್ರೀಗಸ್ 41 ರನ್ ಬಾರಿಸಿದರು. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರರ ಕುಸಿತ ತಂಡಕ್ಕೆ ಮುಳುವಾಯಿತು. ಅಂತಿಮ  ಎಸೆತದಲ್ಲಿ ಜಯಗಳಿಸಿಲು ಎರಡು ರನ್ ತೆಗೆಯುವ ಸವಾಲು ಪಡೆದ ಪೂನಮ್ ಯಾದವ್ ವಿಕಟ್ ಕೈಚೆಲ್ಲಿ ಮ್ಯಾಚ್ ಕೈಚೆಲ್ಲಿದರು. ಇದರೊಂದಿಗೆ ಒಂದು ರನ್ ಅಂತರದಿಂದ ಸೋತ ಮಿಥಾಲಿ ಪಡೆ ಸರಣಿಯಲ್ಲಿ0-1 ಅಂತರದ ಹಿನ್ನಡೆ ಅನುಭವಿಸಿತು.

Advertisement

Udayavani is now on Telegram. Click here to join our channel and stay updated with the latest news.

Next