Advertisement
1. ಮಿಥಾಲಿ ರಾಜ್ಭಾರತೀಯರಿಗೆ ಚಿರಪರಿಚಿತ ಹೆಸರಿದು. ಭಾರತೀಯ ಮಹಿಳಾ ಟೆಸ್ಟ್ ಮತ್ತು ಏಕದಿನ ತಂಡಗಳ ನಾಯಕಿ ಈ ಮಿಥಾಲಿ ರಾಜ್. 35 ರ ಹರೆಯದ ಮಿಥಾಲಿ ಮಹಿಳಾ ತಂಡದ ತೆಂಡೂಲ್ಕರ್ ಎಂದೇ ಖ್ಯಾತಿಯಾದವರು. 1999ರಲ್ಲಿ ತನ್ನ 16ನೇ ವಯಸ್ಸಿನಲ್ಲಿ ಐರ್ಲೆಂಡ್ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಿಥಾಲಿ ಮೊದಲ ಪಂದ್ಯದಲ್ಲೇ ಭರ್ಜರಿ ಅಜೇಯ 114 ರನ್ ಗಳಿಸಿ ಕ್ರಿಕೆಟ್ ವಲಯದಲ್ಲಿ ತಮ್ಮ ಛಾಪು ಮೂಡಿಸಿದ್ದರು. ತನ್ನ19 ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಈಕೆ ಭಾರತದ ಪರ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರು.
194 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ಮಿಥಾಲಿ ರಾಜ್ 50.18ರ ಸರಾಸರಿಯಲ್ಲಿ 6373 ರನ್ ಗಳಿಸಿದ್ದಾರೆ. 74 ಟಿ-ಟ್ವೆಂಟಿ ಪಂದ್ಯಗಳಲ್ಲಿ 2015 ರನ್ ಗಳಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಆರು ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಮಿಥಾಲಿ. ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಮಿಥಾಲಿ ಜಾಗತಿಕ ಮಹಿಳಾ ಕ್ರಿಕೆಟ್ ನ ಅತ್ಯುನ್ನತ ಆಟಗಾರ್ತಿ ಮತ್ತು ಆಟದ ಶ್ರೇಷ್ಠ ರಾಯಭಾರಿ ಎನ್ನಬಹುದು.
ಜೂಲನ್ ನಿಶಿತ್ ಗೋಸ್ವಾಮಿ 1982ರ ನವೆಂಬರ್ 25ರಂದು ಪಶ್ಚಿಮ ಬಂಗಾಲದಲ್ಲಿ ಜನಿಸಿದರು. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಜೂಲನ್ ತಮ್ಮ ವೇಗದ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ನಿಂದ ವಿಶ್ವದ ಗಮನ ಸೆಳೆದವರು. 2002ರಲ್ಲಿ ತನ್ನ 19ರ ಹರೆಯದಲ್ಲಿ ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. 2007ರ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಗೆಲುವಿನಲ್ಲಿ ಜೂಲನ್ ಪಾತ್ರ ಮಹತ್ವದ್ದಾಗಿತ್ತು. ಸುಮಾರು 25 ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡವನ್ನು ಜೂಲನ್ ಮುನ್ನಡೆಸಿದ್ದರು.
ಜೂಲನ್ ಗೋಸ್ವಾಮಿ ಅಂತರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಮೊದಲು 200 ವಿಕೆಟ್ ಗುರಿ ತಲುಪಿದ ಮೊದಲಿಗರು. ಮತ್ತು ಅತೀ ಹೆಚ್ಚು ವಿಕೆಟ್ ಪಡೆದವರು ( 207ವಿಕೆಟ್ ).166 ಏಕದಿನ ಪಂದ್ಯಗಳನ್ನಾಡಿರುವ ಜೂಲನ್ 995 ರನ್ ಕೂಡಾ ಗಳಿಸಿದ್ದಾರೆ. 10 ಟೆಸ್ಟ್ ಪಂದ್ಯಗಳಿಂದ 40 ವಿಕೆಟ್ ಕಬಳಿಸಿರುವ ಜೂಲನ್ ಮೂರು ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 60 ಟಿ-ಟ್ವೆಂಟಿ ಪಂದ್ಯಗಳಿಂದ 56 ವಿಕೆಟ್ ಪಡೆದಿರುವ ಜೂಲನ್ 2018ರ ಆಗಸ್ಟ್ ನಲ್ಲಿ ಟಿ-ಟ್ವೆಂಟಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಐಸಿಸಿ ವರ್ಷದ ಕ್ರಿಕೆಟರ್, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಜೂಲನ್ ಗೋಸ್ವಾಮಿ ಮುಡಿಗೇರಿವೆ. ಈ ವೇಗದ ಮಹಿಳಾ ಬೌಲರ್ ವಿಶ್ವ ಕಂಡ ಶ್ರೇಷ್ಠ ಆಟಗಾರ್ತಿಯರಲ್ಲೊಬ್ಬರು.
Related Articles
ಮಿಥಾಲಿ ರಾಜ್, ಜೂಲನ್ ಗೋಸ್ವಾಮಿಗಿಂತ ಮೊದಲು ಭಾರತೀಯ ಮಹಿಳಾ ತಂಡದಲ್ಲಿ ತಾರೆಯಾಗಿ ಬೆಳೆದವರು ಅಂಜುಮ್ ಚೋಪ್ರಾ. ದೆಹಲಿ ಮೂಲದ ಆಟಗಾರ್ತಿ 1995ರಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ಆಗ ಅಂಜುಮ್ ವಯಸ್ಸು ಕೇವಲ17. ತನ್ನ ಕ್ರಿಕೆಟ್ ಜೀವನದ ಎರಡನೇ ಸರಣಿಯಲ್ಲಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
2000 ವಿಶ್ವಕಪ್ ಕೂಟದಲ್ಲಿ ತಂಡದ ನಾಯಕತ್ವ ವಹಿಸಿದ ಅಂಜುಮ್ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿ ಜೊತೆಗೆ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ತಂಡ ಸೆಮಿ ಫೈನಲ್ ನಲ್ಲಿ ಸೋಲುಂಡರೂ ಕೂಡಾ ಅಂಜುಮ್ ವಿಶ್ವ ಕ್ರಿಕೆಟ್ ನಲ್ಲಿ ಮನೆಮಾತಾದರು. 127 ಏಕದಿನ ಪಂದ್ಯಗಳಿಂದ 2,856 ರನ್ ಗಳಿಸಿರುವ ಅಂಜುಮ್ ಚೋಪ್ರಾ 9 ವಿಕೆಟ್ ಕೂಡಾ ಪಡೆದಿದ್ದರು.
Advertisement
ಭಾರತದ ಮೊದಲ ವಿದೇಶಿ ನೆಲದ ಟೆಸ್ಟ್ ಜಯದಲ್ಲಿ ಅಂಜುಮ್ ಪಾತ್ರ ಮಹತ್ತರವಾದದ್ದು. 2005ರ ವಿಶ್ವಕಪ್, 2009ರ ವಿಶ್ವಕಪ್ ಗಳಲ್ಲಿ ಭಾರತದ ಪರ ಮಿಂಚಿದ್ದ ಅಂಜುಮ್ ಚೋಪ್ರಾ ಒಟ್ಟು ಆರು ವಿಶ್ವಕಪ್ ಆಡಿದ್ದರು. ಭಾರತದ ಪರ 100 ಏಕದಿನ ಪಂದ್ಯ ಆಡಿದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಅಂಜುಮ್ ಚೋಪ್ರಾರದ್ದು. 2012ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟಿಗೂ ವಿದಾಯ ಹೇಳಿದ ಅಂಜುಮ್ ಸದ್ಯ ವೀಕ್ಷಕ ವಿವರಣೆಕಾರರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಮೂರು ಬಾರಿ ಐಸಿಸಿ ವರ್ಷದ ಕ್ರಿಕೆಟರ್ ಪ್ರಶಸ್ತಿ ಪಡೆದ ಸಾಧನೆ ಅಂಜುಮ್ ಚೋಪ್ರಾರದ್ದು.
4. ಡಯಾನ ಎಡುಲ್ಜಿಈ ಹೆಸರು ಅನೇಕ ಭಾರತೀಯರಿಗೆ ಗೊತ್ತಿರಲಿಕ್ಕಿಲ್ಲ. ಮುಂಬೈ ಮೂಲದ ಈ ಆಟಗಾರ್ತಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ದು 1976ರಲ್ಲಿ . ಎಡಗೈ ಸ್ಪಿನ್ನರ್ ಆಗಿದ್ದ ಡಯಾನ 20 ಟೆಸ್ಟ್ ಪಂದ್ಯಗಳಿಂದ 63 ವಿಕೆಟ್ ಪಡೆದಿದ್ದಾರೆ. 34 ಏಕದಿನ ಪಂದ್ಯಗಳನ್ನಾಡಿ 46 ವಿಕೆಟ್ ಇವರ ಹೆಸರಲ್ಲಿದೆ.
1978 ರಲ್ಲಿ ಭಾರತೀಯ ತಂಡದ ನಾಯಕತ್ವ ಕೂಡಾ ವಹಿಸಿದ್ದರು. ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಎಸೆತಗಾರಿಕೆ ನಡೆಸಿದ ಭಾರತೀಯ ದಾಖಲೆ ಇನ್ನೂ ಡಯಾನ ಹೆಸರಲ್ಲಿದೆ. ( 5098). ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರಿಕೆಟ್ ಆಟಗಾರ್ತಿ ಡಯಾನ. ಪದ್ಮಶ್ರೀ ಪ್ರಶಸ್ತಿ ಕೂಡಾ ಇವರ ಸಾಧನೆಗೆ ಸಂದಿದೆ. ಕೀರ್ತನ್ ಶೆಟ್ಟಿ ಬೋಳ