Advertisement
-ಇದು ಆರೆಸ್ಸೆಸ್ ಸಹ ಸರಕಾರ್ಯ ವಾಹ ದತ್ತಾತ್ರೇಯ ಹೊಸಬಾಳೆಯವರ ಅಭಿಪ್ರಾಯ. ಸಮರ್ಥ ಭಾರತ ಸಂಘ ಟನೆ ಹಮ್ಮಿಕೊಂಡಿರುವ ಫೇಸ್‌ಬುಕ್ ಲೈವ್ ಉಪನ್ಯಾಸ ಸರಣಿಯಲ್ಲಿ ರವಿವಾರ ಅವರು ಆತ್ಮ ನಿರ್ಭರ ಭಾರತ – ಸಮರ್ಥ ಭಾರತ ಕುರಿಕು ಮಾತನಾಡಿದ್ದಾರೆ.
Related Articles
ಯಾವುದೇ ರಾಷ್ಟ್ರವು ಇನ್ನೊಂದು ರಾಷ್ಟ್ರದ ಆಕ್ರಮಣಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಕ್ಷಣೆ ಮತ್ತು ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಇಂಧನ, ಆಹಾರ ಭದ್ರತೆ ಮತ್ತು ವಿಜ್ಞಾನ,ಅನ್ವಯಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಅತೀ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ವ್ಯವಸ್ಥೆ, ಸಂಸ್ಥೆಗಳು ಬದಲಾಗಬೇಕು ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಅನೇಕ ವ್ಯವಸ್ಥೆ ಮತ್ತು ಸಂಸ್ಥೆಗಳು ಬ್ರಿಟಿಷ್ ವಸಾಹತಿನಂತಿವೆ. ಇದರಿಂದ ಮುಕ್ತಿ ಹೊಂದಬೇಕು. ಶಿಕ್ಷಣ, ನ್ಯಾಯಾಂಗ, ಆಡಳಿತ ವ್ಯವಸ್ಥೆ ಮತ್ತು ಚುನಾವಣ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಇವೆಲ್ಲವೂ ಭಾರತೀಯ ಜನಮನಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು ಎಂದಿದ್ದಾರೆ ಹೊಸಬಾಳೆ. ಸಂಶೋಧನೆ ಅಗತ್ಯ
ಪುರಾತನ ಗ್ರಂಥಗಳನ್ನು ಪುನರ್ ಅಭಿವ್ಯಕ್ತಿಗೊಳಿಸುವ ಸಂಶೋಧನೆಗಳು ನಡೆಯಬೇಕು. ನಮ್ಮಲ್ಲಿರುವ ಜ್ಞಾನ ರಾಶಿಯನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ನೀಡಬೇಕು ಎಂದು ಹೇಳಿದ್ದಾರೆ. ಏಕತೆ ಅಗತ್ಯ
ಐಎಎಸ್-ಐಪಿಎಸ್ ನಡುವಿನ ಗುದ್ದಾಟ, ವೈದ್ಯ ಪದ್ಧತಿಯ ನಡುವಿನ ಗುದ್ದಾಟ ನಿಲ್ಲಬೇಕು. ವಿವೇಕಾನಂದರು ಹೇಳಿದಂತೆ ಒಳ್ಳೆಯ ಸಂಗತಿ ಎಲ್ಲಿಂದ ಬಂದರೂ ಸ್ವೀಕರಿಸುವಂತಿರಬೇಕು. ಎಲ್ಲೂ ಒಡಕು ಇರಬಾರದು; ಏಕತೆ ಅಗತ್ಯ ಎಂದು ಹೇಳಿದ್ದಾರೆ. ಭಾರತವೇ ಮಾದರಿ
ಸಂಕಷ್ಟ ಸಂದರ್ಭಗಳಲ್ಲಿ ಜಪಾನ್, ಇಸ್ರೇಲ್ ನಿದರ್ಶನಗಳನ್ನು ನೀಡುವ ವಾಡಿಕೆಯಿದೆ. ಆದರೆ ಈಗ ಭಾರತವನ್ನೇ ಉದಾಹರಣೆ ನೀಡಬಹುದು. ಕೊರೊನಾ ನಿರ್ವಹಣೆಯಲ್ಲಿ ದೇಶವು ಸಂಘಟಿತ ವಾಗಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ. ಜನ ಮತ್ತು ಸರಕಾರ ಒಂದಾಗಿ ಈ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೇವೆ. ಇನ್ನು ಮುಂದೆಯೂ ಇಡೀ ಸಮಾಜಹೀಗೆ ಎದ್ದುನಿಲ್ಲಬೇಕು ಎಂದಿದ್ದಾರೆ ಹೊಸಬಾಳೆ. 1947ರಲ್ಲಿ ದೇಶ ವಿಭಜನೆಯಾದ ಅನಂತರ ಅದೆಷ್ಟೋ ಬಾರಿ ಭಾರತವು ಏಕತೆ, ಒಗ್ಗಟ್ಟುಗಳಿಗೆ ಆಘಾತವಾಗುವ ಸಂದರ್ಭ ಎದುರಿಸಿದೆ. ದೇಶದ ಜನರ ಆಂತರಿಕ ಒಗ್ಗಟ್ಟು, ನಮ್ಮ ಪೂರ್ವಜರ ಋಣ, ಸಮರ್ಥ ನಾಯಕತ್ವದಿಂದ ಭಾರತ ಇಂದಿಗೂ ಏಕವಾಗಿ ಉಳಿದಿದೆ. ಇದು ಮುಂದೆಯೂ ಗಟ್ಟಿಯಾಗಿ ಇರಲಿದೆ.
-ದತ್ತಾತ್ರೇಯ ಹೊಸಬಾಳೆ,
ಆರೆಸ್ಸೆಸ್ ಸಹ ಸರಕಾರ್ಯವಾಹ