Advertisement

ಉಗ್ರವಾದವನ್ನು ಭಾರತ ಎಂದೆಂದಿಗೂ ಸಹಿಸುವುದಿಲ್ಲ : ಎಂ.ಎಂ. ನರವಾನೆ

10:02 AM Jan 17, 2020 | sudhir |

– ಉಗ್ರವಾದಕ್ಕೆ ಕುಮ್ಮಕ್ಕು ಕೊಡುವವರನ್ನು ಬಗ್ಗು ಬಡಿಯುವ ಆಯ್ಕೆಗಳಿವೆ
– ಅಗತ್ಯ ಬಂದರೆ ಯಾವುದೇ ಹಿಂಜರಿಕೆಯಿಲ್ಲದೆ ಆಯ್ಕೆಗಳನ್ನು ಬಳಸುತ್ತೇವೆ
– ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಐತಿಹಾಸಿಕ: ನರವಾನೆ

Advertisement

ನವದೆಹಲಿ: “”ಉಗ್ರವಾದವನ್ನು ಭಾರತ ಎಂದೆಂದಿಗೂ ಸಹಿಸುವುದಿಲ್ಲ. ನಮ್ಮ ನೆಲದಲ್ಲಿ ಉಗ್ರವಾದವನ್ನು ಬೆಳೆಸಲು ಇಚ್ಛಿಸುವವರನ್ನು ಮಟ್ಟ ಹಾಕಲು ನಮ್ಮ ಮುಂದೆ ಅನೇಕ ಆಯ್ಕೆಗಳಿವೆ. ಸಂದರ್ಭ ಬಂದಾಗ, ಅವನ್ನು ಯಾವುದೇ ಮುಲಾಜಿಲ್ಲದೆ ನಾವು ಖಂಡಿತವಾಗಿ ಬಳಸುತ್ತೇವೆ”.

ಇದು ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜ. ಎಂ.ಎಂ. ನರವಾನೆ ನೀಡಿರುವ ಖಡಕ್‌ ಎಚ್ಚರಿಕೆ.

ನವದೆಹಲಿಯ ಜ.ಕೆ.ಎಂ.ಕಾರ್ಯಪ್ಪ ಪರೇಡ್‌ ಮೈದಾನದಲ್ಲಿ ಬುಧವಾರ ನಡೆದ 72ನೇ ಸೇನಾ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಹೆಸರನ್ನೆತ್ತದೆ ವಾಗ್ಧಾಳಿ ನಡೆಸಿದರು.

ತಮ್ಮ ಮಾತುಗಳ ನಡುವೆ, ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. “”ಸಂವಿಧಾನದ 370ನೇ ಕಲಂ ರದ್ದು ಮಾಡಿದ್ದು ಒಂದು ಐತಿಹಾಸಿಕ ನಿರ್ಧಾರ. ಅದರಿಂದಾಗಿ, ಕಣಿವೆ ರಾಜ್ಯವು ಭಾರತದ ಇತರ ರಾಜ್ಯಗಳ ಜತೆಗೆ ಮುಖ್ಯವಾಹಿನಿಗೆ ಸೇರ್ಪಡೆಗೊಂಡಿತು. ಸರ್ಕಾರದ ಐತಿಹಾಸಿಕ ನಿರ್ಧಾರದಿಂದಾಗಿ, ಕಣಿವೆ ರಾಜ್ಯದಲ್ಲಿ ಅತಂತ್ರ ಸ್ಥಿತಿಯನ್ನು ಸೃಷ್ಟಿಸುವ ಹುನ್ನಾರ ನಡೆಸಿದ್ದ ನಮ್ಮ ದೇಶದ ಪಶ್ಚಿಮ ಭಾಗದ ನೆರೆ ರಾಷ್ಟ್ರ ಹಾಗೂ ಅದರ ಮಿತ್ರ ರಾಷ್ಟ್ರಗಳ ಕಾರ್ಯತಂತ್ರವನ್ನು ವಿಫ‌ಲಗೊಳಿಸಲಾಗಿದೆ” ಎಂದು ಅವರು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಸೇನೆಯ ಪಥ ಸಂಚಲನದಲ್ಲಿ ಧನುಷ್‌ ಹಾಗೂ ಕೆ-ವಜ್ರ ಫಿರಂಗಿಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಯಿತು.

ಕರ್ನಾಟಕದ ಹೆಮ್ಮೆಯ ಸೇನಾಧಿಕಾರಿ ಜನರಲ್‌.ಕೆ.ಎಂ. ಕಾರ್ಯಪ್ಪ ಅವರು 1949ರಲ್ಲಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ಜ. 15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ.

ಮಹಿಳಾ ಕ್ಯಾಪ್ಟನ್‌ ನೇತೃತ್ವ
ಸೇನಾ ದಿನಾಚರಣೆ ಪ್ರಯುಕ್ತ ದೆಹಲಿ ಕಂಟೋನ್ಮೆಂಟ್‌ನ ಕಾರಿಯಪ್ಪ ಮೈದಾನದಲ್ಲಿ ನಡೆದ ಸೇನಾ ಪಥಸಂಚಲನದಲ್ಲಿ ಭಾಗವಹಿಸಿದ್ದ ಪುರುಷ ಸೇನಾ ಸಿಬ್ಬಂದಿಯ ಪಡೆಯನ್ನು ಮಹಿಳಾ ಸೇನಾ ತುಕಡಿಯ ಕ್ಯಾಪ್ಟನ್‌ ತಾನಿಯಾ ಶೆರ್ಗಿಲ್‌ ಮುನ್ನಡೆಸಿದ್ದು ವಿಶೇಷವಾಗಿತ್ತು. ಭಾರತೀಯ ಸೇನಾ ಪಥ ಸಂಚಲನದ ಇತಿಹಾಸದಲ್ಲಿ ಹೀಗಾಗಿರುವುದು ಇದೇ ಮೊದಲು.

ಯೋಧರ ಸೇವೆಗೆ ಮೆಚ್ಚುಗೆ
ತೀವ್ರ ಹಿಮಪಾತಕ್ಕೆ ತುತ್ತಾಗಿದ್ದ ಬಾರಾಮುಲ್ಲಾ ಜಿಲ್ಲೆಯ ತಂಗ್‌ಮಾರ್ಗ್‌ ಪ್ರಾಂತ್ಯದ ದಾದ್‌ì ಪೋರಾ ಎಂಬ ಹಳ್ಳಿಯಿಂದ ಪ್ರಸವ ವೇದನೆಗೆ ತುತ್ತಾಗಿದ್ದ ಶಮೀಮಾ ಎಂಬ ಮಹಿಳೆಯೊಬ್ಬರನ್ನು , ಆ ಪ್ರಾಂತ್ಯದಲ್ಲಿ ಸೊಂಟದವರೆಗಿನ ಹಿಮ ಬಿದ್ದಿದ್ದ ಪರಿಸ್ಥಿತಿಯಲ್ಲಿಯೂ ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡು ಬಂದು ಬಾರಾಮುಲ್ಲಾ ಆಸ್ಪತ್ರೆಗೆ ದಾಖಲಿಸಿ ತಾಯಿ, ಮಗುವಿನ ಜೀವ ಉಳಿಸಿರುವ ಭಾರತೀಯ ಸೇನೆಯ ಖೈರಿಯತ್‌ (ಕುಶಲೋಪರಿ) ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೋದಿ ಶ್ಲಾಘನೆ: ಮಹಿಳೆಯನ್ನು ಯೋಧರು ಆಸ್ಪತ್ರೆಗೆ ಸಾಗಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪ್ರಧಾನಿ ನರೇಂದ್ರಮ ಮೋದಿ ಕೂಡ ಆ ತುಣುಕನ್ನು ಟ್ವೀಟ್‌ ಮಾಡಿ ಯೋಧರ ಸೇವೆಯನ್ನು ಶ್ಲಾ ಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next