Advertisement

Tesla: ಟೆಸ್ಲಾದಿಂದ ವಿದ್ಯುತ್‌ ಕಾರು ಆಮದು ಮಾಡಲಿದೆ ಭಾರತ!

09:14 PM Nov 21, 2023 | Team Udayavani |

ನವದೆಹಲಿ: ಎಲಾನ್‌ ಮಸ್ಕ್ ಮಾಲಿಕತ್ವದ ಟೆಸ್ಲಾ ಇಂಕ್‌ ಭಾರತದಲ್ಲಿ ವಿದ್ಯುತ್‌ ಚಾಲಿತ ಕಾರು ಉತ್ಪಾದನೆ ಮಾಡುವ ದಿನಾಂಕಗಳು ಹತ್ತಿರವಾಗಿವೆ. ಮೂಲಗಳ ಪ್ರಕಾರ, ಟೆಸ್ಲಾ ತನ್ನ ವಿದ್ಯುತ್‌ ಕಾರುಗಳನ್ನು ಭಾರತಕ್ಕೆ ರಫ್ತು ಮಾಡುವ ಒಪ್ಪಂದವನ್ನು ಭಾರತ ಸರ್ಕಾರದೊಂದಿಗೆ ಮಾಡಿಕೊಂಡಿದೆ.

Advertisement

ಇನ್ನು, ಎರಡು ವರ್ಷದೊಳಗೆ ಭಾರತದಲ್ಲಿ ಅದು ತನ್ನ ಕಾರು ಉತ್ಪಾದಕ ಘಟಕಗಳನ್ನು ಆರಂಭಿಸಲಿದೆ. ಜನವರಿಯಲ್ಲಿ ಗುಜರಾತ್‌ನಲ್ಲಿ ನಡೆಯುವ ವೈಬ್ರೆಂಟ್‌ ಗುಜರಾತ್‌ ಗ್ಲೋಬಲ್‌ ಸಮ್ಮಿಟ್‌ನಲ್ಲಿ ಈ ಕುರಿತು ಘೋಷಣೆಯಾಗಲಿದೆ.

ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡುಗಳನ್ನು ಟೆಸ್ಲಾ ಘಟಕ ಸ್ಥಾಪನೆಗೆ ಆದ್ಯತೆಯಾಗಿ ಪರಿಗಣಿಸಲಾಗಿದೆ. ಆ ರಾಜ್ಯಗಳಲ್ಲಿ ಈಗಾಗಲೇ ಅದಕ್ಕೆ ಬೇಕಾದ ಮೂಲಸೌಕರ್ಯಗಳಿವೆ ಎಂದು ವರದಿಗಳಾಗಿವೆ. ಆದರೆ ಇದಿನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಮಧ್ಯೆ ಈ ವರ್ಷ ಜೂನ್‌ನಲ್ಲಿ ಎಲಾನ್‌ ಮಸ್ಕ್, ಭಾರತದಲ್ಲಿ ನಾವು ದೊಡ್ಡ ಹೂಡಿಕೆ ಮಾಡಲು ಯೋಜಿಸುತ್ತಿದ್ದೇವೆ, ಮುಂದಿನ ವರ್ಷ ಭಾರತ ಭೇಟಿ ಮಾಡಲಿದ್ದೇನೆ ಎಂದಿರುವುದನ್ನು ಇಲ್ಲಿ ಗಮನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next