Advertisement

ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ

12:17 PM Mar 05, 2021 | |

ನವ ದೆಹಲಿ : ಕಾರು ಉತ್ಪಾದಕ ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ  ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Advertisement

ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಕೇಲವ ಮಾರುಕಟ್ಟೆಗೆ ತರುವುದು ಮಾತ್ರವಲ್ಲ, ಟೆಸ್ಲಾ ಕಾರುಗಳು ಭಾರತದಲ್ಲಿ ತಯಾರಾಗಬೇಕು ಎಂಬುವುದನ್ನು ಗಡ್ಕರಿ ಉಲ್ಲೇಖಿಸಿದ್ದಾರೆ. “ಭಾರತದಲ್ಲಿ ಸ್ಥಳೀಯ ಮಾರಾಟಗಾರರನ್ನು ನೇಮಿಸಿಕೊಳ್ಳುವ ಮೂಲಕ ದೇಶದಲ್ಲಿ ಸಂಪೂರ್ಣ ಉತ್ಪಾದನಾ ಘಟಕವನ್ನು ಮಾಡಬೇಕು” “ನಂತರದಲ್ಲಿ ನಾವು ಹೆಚ್ಚಿನ ರಿಯಾಯಿತಿಗಳನ್ನು ನೀಡಬಹುದು.” ಎಂದು ಗಡ್ಕರಿ ರಾಯಿಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಓದಿ : ಸಿದ್ದರಾಮಯ್ಯ ಯಾವ ಹಿನ್ನೆಲೆಯಿಂದ ಬಂದಿದ್ದಾರೆ? ಅವರ ಹಿನ್ನೆಲೆ ಏನು? ಯಡಿಯೂರಪ್ಪ

ಕಳೆದ ವರ್ಷ, ಗಡ್ಕರಿ 2021 ರ ಆರಂಭದಲ್ಲಿ ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದರು. ಆದರೆ, ನಂತರ, ಟೆಸ್ಲಾ ಮೊದಲು ಭಾರತದಲ್ಲಿ ಮಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಮತ್ತು ನಂತರದ ಹಂತದಲ್ಲಿ ಉತ್ಪಾದನೆಯ ಘಟಕದ ಬಗ್ಗೆ ಯೋಚಿಸುತ್ತದೆ  ಹೇಳಿತ್ತು.

ಇನ್ನು, ಟೆಸ್ಲಾ ಕಂಪೆನಿಯ ಸಿಇಒ ಎಲೋನ್ ಮಸ್ಕ್ ಅವರು ಟ್ವೀಟ್‌ ನಲ್ಲಿ ತಮ್ಮ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು 2021 ರಲ್ಲಿ ಪ್ರಾರಂಭಿಸಲಿದೆ ಎಂದು ಖಚಿತ ಪಡಿಸಿದ್ದರು.

Advertisement

ಜನವರಿಯಲ್ಲಿ, ಟೆಸ್ಲಾ ತನ್ನ ಭಾರತದಲ್ಲಿ ತನ್ನ ಬಾಹುವನ್ನು ವಿಸ್ತರಿಸಿಕೊಳ್ಳಲು ಮುಂದಾಯಿತು. ಬೆಂಗಳೂರಿನಲ್ಲಿ ಟೆಸ್ಲಾ ಇಂಡಿಯಾ ಮೋಟಾರ್ಸ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾವಣೆ ಮಾಡಿಕೊಂಡಿತು.

ಓದಿ : ಲಕ್ಷ ಅಕ್ಕಿ ಮುಡಿಗಳನ್ನು ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿರುವ ದೇವ ಪೂಜಾರಿ

Advertisement

Udayavani is now on Telegram. Click here to join our channel and stay updated with the latest news.

Next