ನ್ಯೂಯಾರ್ಕ್ : ಪಾಕ್ ಮೂಲದ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆಯ ರಾಜಕೀಯ ಸಂಸ್ಥೆಯಾಗಿರುವ ಮಿಲ್ಲೀ ಮುಸ್ಲಿಂ ಲೀಗ್ (MML) ಸಂಸ್ಥೆಯನ್ನು ಅಮೆರಿಕ ತನ್ನ ಉಗ್ರ ಸಮೂಹಗಳ ಪಟ್ಟಿಗೆ ಸೇರಿಸಿರುವ ಅಮೆರಿಕದ ನಿರ್ಧಾರವನ್ನು ಭಾರತ ಸರಕಾರ ಸ್ವಾಗತಿಸಿದೆ.
“ಮಿಲ್ಲಿ ಮುಸ್ಲಿಂ ಲೀಗ್, ಎಲ್‌ಇಟಿಯ ಅಲಿಯಾಸ್ ಸಂಸ್ಥೆ ಯನ್ನು ಭಯೋತ್ಪಾದಕ ಸಮೂಹಗಳ ಪಟ್ಟಿಗೆ ಸೇರಿಸಿರುವ ಅಮೆರಿಕದ ಕ್ರಮವನ್ನು ಭಾರತ ಸ್ವಾಗತಿಸುತ್ತದೆ. ಅಮೆರಿಕದ ಈ ಕ್ರಮದಿಂದ ಪಾಕಿಸ್ಥಾನವು ತನ್ನಲ್ಲಿನ ಉಗ್ರ ಸಮೂಹಗಳ ವಿರುದ್ಧ ತಕ್ಕುದಾದ ಕ್ರಮಕೈಗೊಂಡಿಲ್ಲ ಎಂಬ ಭಾರತದ ನಿಲುವು ದೃಢಪಟ್ಟಂತಾಗಿದೆ’ ಎಂದು ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.
ಎಲ್‌ಇಟಿ ಉಗ್ರ ಸಂಘಟನೆಯ ರಾಜಕೀಯ ಸಂಸ್ಥೆಯಾಗಿರುವ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ಅನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ಆಡಳಿತೆ ಉಗ್ರ ಪಟ್ಟಿಗೆ ಸೇರಿಸಿದ ಕ್ರಮ ಪ್ರಕಟಗೊಂಡ ಒಡನೆಯೇ ಭಾರತ ತನ್ನ ಸ್ವಾಗತದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ.
ಅಮೆರಿಕದಿಂದ ಉಗ್ರ ಪಟ್ಟಿಗೆ ಸೇರಿಸಲ್ಪಟ್ಟಿರುವ ಎಂಎಂಎಲ್‌ನ ನಾಯಕರೆಂದರೆ ಉಪಾಧ್ಯಕ್ಷ ಮುಝಮ್ಮಿಲ್ ಇಕ್ಬಾಲ್ ಹಾಶಿಮಿ, ಜಂಟಿ ಕಾರ್ಯದರ್ಶಿ ಮುಹಮ್ಮದ್ ಹ್ಯಾರಿಸ್ ದಾರ್, ಮಾಹಿತಿ ಕಾರ್ಯದರ್ಶಿ ತಬೀಶ್ ಕಯ್ಯೂಮ್, ಹಣಕಾಸು ಕಾರ್ಯದರ್ಶಿ ಮುಹಮ್ಮದ್ ಎಹಸಾನ್ ಮತ್ತು ಫೈಸಲ್ ನದೀಮ್.
ಅಮೆರಿಕದ ಕ್ರಮದಿಂದಾಗಿ ಪಾಕ್ ಎಲ್‌ಇಟಿ ಇದರ ರಾಜಕೀಯ ಸಂಸ್ಥೆಯಾಗಿರುವ ಎಂಎಂಎಲ್ ಇದೀಗ ನಿಷೇಧಿತ ವಿದೇಶ ಉಗ್ರ ಸಂಘಟನೆ (ಎಫ್ಟಿಓ) ಮತ್ತು ವಿಶೇಷವಾಗಿ ನಿಯೋಜಿತವಾಗಿರುವ ಜಾಗತಿಕ ಉಗ್ರ ಸಂಘಟನೆ (ಎಸ್‌ಡಿಜಿಟಿ) ಎಂದು ಎರಡು ಪ್ರತ್ಯೇಕ ಕಾನೂನಿನಡಿ ಪರಿಗಣಿಸಲ್ಪಟ್ಟಿವೆ.