Advertisement

“ಭಾರತ 1971ರಲ್ಲೇ ನಂ.1 ಟೆಸ್ಟ್‌ ತಂಡ’

10:32 PM Aug 20, 2020 | mahesh |

ಕೋಲ್ಕತಾ: ಭಾರತ 1971ರಲ್ಲೇ ಟೆಸ್ಟ್‌ ಕ್ರಿಕೆಟಿನ ನಂಬರ್‌ ವನ್‌ ತಂಡವಾಗಿತ್ತು ಎಂಬುದಾಗಿ ಮಾಜಿ ವಿಕೆಟ್‌ ಕೀಪರ್‌ ದೀಪ್‌ ದಾಸ್‌ಗುಪ್ತ ಹೇಳಿದ್ದಾರೆ. ಅಂದು ಅಜಿತ್‌ ವಾಡೇಕರ್‌ ಸಾರಥ್ಯದ ಭಾರತ ತಂಡ ವಿಂಡೀಸ್‌ ಮತ್ತು ಇಂಗ್ಲೆಂಡನ್ನು ಅವರದೇ ಅಂಗಳದಲ್ಲಿ ಮಣಿಸುವ ಮೂಲಕ ಅನಧಿಕೃತವಾಗಿ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿತ್ತು ಎಂದು ಅವರು ಸಮರ್ಥಿಸಿದರು.

Advertisement

“ಭಾರತ ತಂಡದ ನಾಯಕರ ವಿಚಾರ ಬಂದಾಗ ಸಾಮಾನ್ಯವಾಗಿ ನಾವು ಅಜಿತ್‌ ವಾಡೇಕರ್‌ ಬಗ್ಗೆ ಮಾತಾಡುವುದಿಲ್ಲ, 1971ರ ಟೆಸ್ಟ್‌ ಪರಾಕ್ರಮವನ್ನು ನೆನಪಿಸಿಕೊಳ್ಳುವುದಿಲ್ಲ. ಆ ವರ್ಷ ವಾಡೇಕರ್‌ ನಾಯಕತ್ವದ ಭಾರತ ತವರಿನಾಚೆ ವಿಶ್ವದ ಎರಡು ಬಲಿಷ್ಠ ತಂಡಗಳಿಗೆ ಸರಣಿ ಸೋಲುಣಿಸಿತ್ತು. ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ವಿರುದ್ಧ ಐತಿಹಾಸಿಕ ಜಯ ಸಾಧಿಸಿತ್ತು. ಹೀಗಾಗಿ ಭಾರತ ಅಂದೇ ಅನಧಿಕೃತವಾಗಿ ಟೆಸ್ಟ್‌ ಕ್ರಿಕೆಟಿನ ನಂಬರ್‌ ವನ್‌ ಗೌರವ ಸಂಪಾದಿಸಿತ್ತು’ ಎಂಬುದಾಗಿ ದಾಸ್‌ಗುಪ್ತ “ಆಫ್ ದ ಫೀಲ್ಡ್‌’ ಕಾರ್ಯಕ್ರಮದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next