ರಾಜ್ಕೋಟ್: ಭಾರತ-ಶ್ರೀಲಂಕಾ ನಡುವಿನ ಟಿ20 ಸರಣಿ ನಿರ್ಣಾಯಕ ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಭರ್ಜರಿ ಶತಕ ಸಿಡಿಸಿದ್ದಾರೆ.
ಭಾರತ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 228 ರನ್ ಗಳಿಸಿ ಲಂಕನ್ನರಿಗೆ ಗೆಲ್ಲಲು ಭರ್ಜರಿ ಮೊತ್ತವನ್ನು ಎದುರಿಟ್ಟಿದೆ.
ಲಂಕಾ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದ ಯಾದವ್ 45 ಎಸೆತಗಳಲ್ಲಿ.6 ಬೌಂಡರಿ ಮತ್ತು 8 ಸಿಕ್ಸರ್ ಗಳ ನೆರವಿನಿಂದ 100 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 51 ಎಸೆತಗಳಲ್ಲಿ 112 ರನ್ ಗಳಿಸಿ ಅಜೇಯರಾಗಿ ಉಳಿದರು.
ಟಾಸ್ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 3 ರನ್ ಆಗುವಷ್ಟರಲ್ಲೇ ಇಶನ್ ಕಿಶನ್ ಅವರ ವಿಕೆಟ್ ಕಳೆದುಕೊಂಡಿತು. ಭರ್ಜರಿ ಆಟವಾಡಿದ ಶುಭಮನ್ ಗಿಲ್46 , ರಾಹುಲ್ ತ್ರಿಪಾಠಿ 35 ರನ್ ಕೊಡುಗೆ ಸಲ್ಲಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 4 ರನ್ ಗಳಿಗೆ ಔಟಾದರು. ಅಕ್ಷರ್ ಪಟೇಲ್ ಔಟಾಗದೆ 21 ರನ್ ಕೊಡುಗೆ ಸಲ್ಲಿಸಿದರು.
ಸರಣಿ 1-1 ಸಮಬಲದಲ್ಲಿದೆ.