Advertisement

ಭಾರತ- ದಕ್ಷಿಣ ಆಫ್ರಿಕಾ ಟಿ 20 ಪಂದ್ಯ : ಮೈದಾನದೊಳಗೇ ಬಂದ ಹಾವು !

08:03 PM Oct 02, 2022 | Team Udayavani |

ಗುವಾಹಟಿ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಭಾನುವಾರ ನಡೆಯುತ್ತಿರುವ ಎರಡನೇ ಟಿ 20 ಪಂದ್ಯದ ವೇಳೆ ಮೈದಾನದಲ್ಲಿ ಹಾವೊಂದು ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ. ಹಾವು ಕಂಡ ತಕ್ಷಣ ಪಂದ್ಯವನ್ನು ಕೆಲ ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು.

Advertisement

ಬರ್ಸಾಪರಾ ಕ್ರೀಡಾಂಗಣದಲ್ಲಿ 3 ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ 7ನೇ ಓವರ್‌ನ ಸುಮಾರಿಗೆ ಮೈದಾನದಲ್ಲಿ ಹಾವು ಕಾಣಿಸಿಕೊಂಡಿದ್ದು, ಮೈದಾನದ ಸಹಾಯಕ ಸಿಬಂದಿ ತತ್ ಕ್ಷಣ ಮೈದಾನಕ್ಕೆ ಪ್ರವೇಶಿಸಿ ಹಾವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ಶಿಖರ್ ಧವನ್ ಗೆ ನಾಯಕತ್ವ

ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎಡಗೈ ದಕ್ಷಿಣ ಆಫ್ರಿಕಾ ಒಂದು ಬದಲಾವಣೆ ಮಾಡಿ ಸ್ಪಿನ್ನರ್ ತಬ್ರೈಜ್ ಶಮ್ಸಿ ಬದಲಿಗೆ ವೇಗಿ ಲುಂಗಿ ಎನ್‌ಗಿಡಿಯನ್ನು ಸೇರಿಸಿಕೊಂಡಿದೆ. ತಿರುವನಂತಪುರಂನಲ್ಲಿ ನಡೆದ ಸರಣಿ-ಆರಂಭಿಕ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಭಾರತವು ಅದೇ ತಂಡವನ್ನು ಕಣಕ್ಕಿಳಿಸಿತು.

ಭಾರತ 13 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next