Advertisement

ವೇಗಿಗಳ ಮೆರೆದಾಟ: ಭಾರತಕ್ಕೆ ಮುನ್ನಡೆ

10:56 PM Dec 28, 2021 | Team Udayavani |

ಸೆಂಚುರಿಯನ್‌: ಸೆಂಚುರಿಯನ್‌ನ “ಸೂಪರ್‌ ನ್ಪೋರ್ಟ್‌ ಪಾರ್ಕ್‌’ ವೇಗದ ಬೌಲರ್‌ಗಳ ಸ್ವರ್ಗವಾಗಿ ಮಾರ್ಪಟ್ಟಿದೆ. ಭಾರತಕ್ಕೆ ಇದರ ಬಹುಪಾಲು ಲಾಭ ಸಿಕ್ಕಿದ್ದು, 130 ರನ್ನುಗಳ ಮಹತ್ವದ ಮೊದಲ ಇನ್ನಿಂಗ್ಸ್‌ ಲೀಡ್‌ ಗಳಿಸಿದೆ. 3ನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಸರದಿಯಲ್ಲಿ ಒಂದು ವಿಕೆಟಿಗೆ 16 ರನ್‌ ಗಳಿಸಿರುವ ಟೀಮ್‌ ಇಂಡಿಯಾ ತನ್ನ ಒಟ್ಟು ಮುನ್ನಡೆಯನ್ನು 146ಕ್ಕೆ ಏರಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.

Advertisement

ಮಳೆ ಬ್ರೇಕ್‌ ಬಳಿಕ..
ಒಂದು ದಿನದ ಮಳೆ ಬ್ರೇಕ್‌ ಬಳಿಕ ಮಂಗಳವಾರ ಮುಂದುವರಿಯಲ್ಪಟ್ಟ ಆಟದಲ್ಲಿ ವೇಗದ ಬೌಲರ್‌ಗಳೇ ಮೇಲುಗೈ ಸಾಧಿಸಿದರು. ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಮಳೆಯಿಂದಾಗಿ ಪಿಚ್‌ ಸಂಪೂರ್ಣವಾಗಿ ಬದಲಾಗಿತ್ತು. 3ನೇ ದಿನದ ಎಲ್ಲ 18 ವಿಕೆಟ್‌ಗಳು ವೇಗಿಗಳ ಪಾಲಾದವು.

3 ವಿಕೆಟಿಗೆ 272 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ಲುಂಗಿ ಎನ್‌ಗಿಡಿ ಮತ್ತು ಕಾಗಿಸೊ ರಬಾಡ ಬೌಲಿಂಗ್‌ ಆಕ್ರಮಣಕ್ಕೆ ಸಿಲುಕಿ ಲಂಚ್‌ ಒಳಗಾಗಿ 327ಕ್ಕೆ ಸರ್ವಪತನ ಕಂಡಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 197ಕ್ಕೆ ಆಲೌಟ್‌ ಆಯಿತು.

ಕೇವಲ 55 ರನ್‌ ಅಂತರದಲ್ಲಿ ಟೀಮ್‌ ಇಂಡಿಯಾದ 7 ವಿಕೆಟ್‌ ಉದುರಿ ಹೋದವು. ಲುಂಗಿ ಎನ್‌ಗಿಡಿ 71ಕ್ಕೆ 6 ವಿಕೆಟ್‌ ಕೆಡವಿ ಕೊಹ್ಲಿ ಪಡೆಗೆ ತಿರುಗೇಟು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ರಬಾಡ 3 ವಿಕೆಟ್‌ ಕಿತ್ತರು. ಇದು ಎನ್‌ಗಿಡಿ ಅವರ ಎರಡನೇ ಅತ್ಯತ್ತಮ ಬೌಲಿಂಗ್‌. ಸ್ವಾರಸ್ಯವೆಂದರೆ, 2017-18ರ ಭಾರತ ದೆದುರಿನ ಸೆಂಚುರಿಯನ್‌ ಟೆಸ್ಟ್‌ ಪಂದ್ಯದಲ್ಲೇ ಅವರು 39ಕ್ಕೆ 6 ವಿಕೆಟ್‌ ಉರುಳಿಸಿ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಗೈದಿದ್ದರು.

ಸಾಧ್ಯವಾಗದ ದೊಡ್ಡ ಮೊತ್ತ
ನಾಟೌಟ್‌ ಬ್ಯಾಟ್ಸ್‌ಮನ್‌ಗಳಾದ ಶತಕವೀರ ಕೆ.ಎಲ್‌. ರಾಹುಲ್‌ ಮತ್ತು ಅಜಿಂಕ್ಯ ರಹಾನೆ ವಿಕೆಟ್‌ ಬೇಗನೇ ಉದುರುವುದರೊಂದಿಗೆ ಭಾರತದ ದೊಡ್ಡ ಮೊತ್ತದ ಯೋಜನೆ ವಿಫಲಗೊಂಡಿತು. ಪಂತ್‌, ಅಶ್ವಿ‌ನ್‌, ಠಾಕೂರ್‌ ಕೂಡ ಬ್ಯಾಟಿಂಗಿನಲ್ಲಿ ವಿಫಲರಾದರು. ಭಾರತದ ಮೊತ್ತದಲ್ಲಿ ಸುಮಾರು 75ರಷ್ಟು ರನ್‌ ಕೊರತೆ ಕಾಡಿತು.
122 ರನ್‌ ಮಾಡಿದ್ದ ರಾಹುಲ್‌ ಈ ಮೊತ್ತಕ್ಕೆ ಸೇರಿಸಿದ್ದು ಕೇವಲ ಒಂದು ರನ್‌. ರಬಾಡ ಈ ಬಿಗ್‌ ವಿಕೆಟ್‌ ಕಿತ್ತರು. 260 ಎಸೆತ ಎದುರಿಸಿದ ರಾಹುಲ್‌ 16 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ರಹಾನೆ 40ರಿಂದ 48ಕ್ಕೆ ತಲುಪಿ ಎನ್‌ಗಿಡಿ ಮೋಡಿಗೆ ಸಿಲುಕಿದರು. 102 ಎಸೆತ ಎದುರಿಸಿದ ರಹಾನೆ 9 ಬೌಂಡರಿ ಬಾರಿಸಿದ್ದರು. ಪಂತ್‌ ಮತ್ತು ಶಮಿ ತಲಾ 8, ಅಶ್ವಿ‌ನ್‌ ಮತ್ತು ಠಾಕೂರ್‌ ತಲಾ 4 ರನ್‌ ಮಾಡಿ ಬೇಗನೇ ಪೆವಿಲಿಯನ್‌ ಸೇರಿಕೊಂಡರು. ಬುಮ್ರಾ 14 ರನ್‌ ಮಾಡಿದರು. ಪಂದ್ಯದ ದ್ವಿತೀಯ ಅವಧಿ ಭಾರತದ ಬೌಲರ್‌ಗಳದ್ದಾಯಿತು. ಭಾರತದಂತೆ ಆತಿಥೇಯರಿಗೂ ಬ್ಯಾಟಿಂಗ್‌ ಸವಾಲಾಗಿ ಪರಿಣಮಿಸಿತು. ಭಾರತದ ನಾಲ್ಕೂ ವೇಗಿಗಳು ಹರಿಣಗಳ ಮೇಲೆ ತಿರುಗಿ ಬಿದ್ದರು. ಪರಿಣಾಮ, ಟೀ ವಿರಾಮದ ವೇಳೆ 109 ರನ್ನಿಗೆ ದ. ಆಫ್ರಿಕಾದ ಅರ್ಧದಷ್ಟು ಮಂದಿ ಆಟ ಮುಗಿಸಿ ಪೆವಿಲಿಯನ್‌ ಸೇರಬೇಕಾಯಿತು.

Advertisement

ರಿಷಭ್‌ ಪಂತ್‌ “ನೂರು’
ಬವುಮ ಅವರ ಕ್ಯಾಚ್‌ ಪಡೆಯುವ ಮೂಲಕ ರಿಷಭ್‌ ಪಂತ್‌ ವಿಕೆಟ್‌ ಹಿಂದುಗಡೆ 100 ವಿಕೆಟ್‌ ಪತನಕ್ಕೆ ಕಾರಣರಾದ ಸಾಧನೆಗೈದರು. ಪಂತ್‌ ಅತೀ ಕಡಿಮೆ 26 ಟೆಸ್ಟ್‌ಗಳಲ್ಲಿ ಈ ಮೈಲುಗಲ್ಲು ನೆಟ್ಟರು. ಈ ಸಂದರ್ಭದಲ್ಲಿ ಧೋನಿ ಅವರ ದಾಖಲೆ ಪತನಗೊಂಡಿತು (36 ಟೆಸ್ಟ್‌).

ಶಮಿ 200 ವಿಕೆಟ್‌
5 ವಿಕೆಟ್‌ ಕಿತ್ತು ಭಾರತದ ಯಶಸ್ವಿ ಬೌಲರ್‌ ಆಗಿ ಮೂಡಿಬಂದ ಮೊಹಮ್ಮದ್‌ ಶಮಿ, ಇನ್ನೊಂದು ಸಾಧನೆ ಯಿಂದಲೂ ಗಮನ ಸೆಳೆದರು. ರಬಾಡ ಅವರನ್ನು ಔಟ್‌ ಮಾಡಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಉರುಳಿಸಿದ ಹಿರಿಮೆಗೆ ಪಾತ್ರರಾದರು. ಇದು ಶಮಿ ಅವರ 55ನೇ ಟೆಸ್ಟ್‌. ಕಪಿಲ್‌ ಅತೀ ಕಡಿಮೆ 50 ಟೆಸ್ಟ್‌ ಗಳಲ್ಲಿ 200 ವಿಕೆಟ್‌ ಬೇಟೆಯಾಡಿದ ಭಾರತದ ವೇಗದ ಬೌಲರ್‌. ಆದರೆ ಶಮಿ 200 ವಿಕೆಟ್‌ಗಳಿಗಾಗಿ ಅತೀ ಕಡಿಮೆ 9,896 ಎಸೆತಗಳನ್ನಿಕ್ಕಿದ ಭಾರತದ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಹಿಂದಿನ ದಾಖಲೆ ಆರ್‌. ಅಶ್ವಿ‌ನ್‌ ಹೆಸರಲ್ಲಿತ್ತು (10,248 ಎಸೆತ).

ಶಮಿ ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ 6ನೇ ನಿದರ್ಶನ.

ಇದನ್ನೂ ಓದಿ:ತಮ್ಮ ಸಂಬಳಕ್ಕೇ ತಡೆ ಒಡ್ಡಿಕೊಂಡ ಜಿಲ್ಲಾಧಿಕಾರಿ!

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌
ಭಾರತ ದ್ವಿತೀಯ ಇನ್ನಿಂಗ್ಸ್‌ 16/1

ಕೆ.ಎಲ್‌. ರಾಹುಲ್‌ ಸಿ ಡಿ ಕಾಕ್‌ ಬಿ ರಬಾಡ 123
ಅಗರ್ವಾಲ್‌ ಎಲ್‌ಬಿಡಬ್ಲ್ಯು ಎನ್‌ಗಿಡಿ 60
ಚೇತೇಶ್ವರ್‌ ಪೂಜಾರ ಸಿ ಪೀಟರ್‌ಸನ್‌ ಬಿ ಎನ್‌ಗಿಡಿ 0
ವಿರಾಟ್‌ ಕೊಹ್ಲಿ ಸಿ ಮುಲ್ಡರ್‌ ಬಿ ಎನ್‌ಗಿಡಿ 35
ಅಜಿಂಕ್ಯ ರಹಾನೆ ಸಿ ಡಿ ಕಾಕ್‌ ಬಿ ಎನ್‌ಗಿಡಿ 48
ಪಂತ್‌ ಸಿ ಡುಸೆನ್‌ ಬಿ ಎನ್‌ಗಿಡಿ 8
ಅಶ್ವಿ‌ನ್‌ ಸಿ ಮಹರಾಜ್‌ ಬಿ ರಬಾಡ 4
ಠಾಕೂರ್‌ ಸಿ ಡಿ ಕಾಕ್‌ ಬಿ ಎನ್‌ಗಿಡಿ 4
ಶಮಿ ಸಿ ಡಿ ಕಾಕ್‌ ಬಿ ಎನ್‌ಗಿಡಿ 8
ಬುಮ್ರಾ ಸಿ ಮುಲ್ಡರ್‌ ಬಿ ಜೆನ್ಸೆನ್‌ 14
ಸಿರಾಜ್‌ ಔಟಾಗದೆ 4
ಇತರ 19
ಒಟ್ಟು (ಆಲೌಟ್‌) 327
ವಿಕೆಟ್‌ ಪತನ:1-117, 2-117, 3-199, 4-278, 5-291, 6-296, 7-296, 8-304, 9-308.
ಬೌಲಿಂಗ್‌; ಕಾಗಿಸೊ ರಬಾಡ 26-5-72-3
ಲುಂಗಿ ಎನ್‌ಗಿಡಿ 24-5-71-6
ಮಾರ್ಕೊ ಜೆನ್ಸೆನ್‌ 18.3-4-69-1
ವಿಯಾನ್‌ ಮುಲ್ಡರ್‌ 19-4-49-0
ಕೇಶವ್‌ ಮಹಾರಾಜ್‌ 18-2-58-0

ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌

ಡೀನ್‌ ಎಲ್ಗರ್‌ ಸಿ ಪಂತ್‌ ಬಿ ಬುಮ್ರಾ 1
ಮಾರ್ಕ್‌ರಮ್‌ ಬಿ ಶಮಿ 13
ಪೀಟರ್‌ಸನ್‌ ಬಿ ಶಮಿ 15
ಡುಸೆನ್‌ ಸಿ ರಹಾನೆ ಬಿ ಸಿರಾಜ್‌ 3
ಟೆಂಬ ಬವುಮ ಸಿ ಪಂತ್‌ ಬಿ ಶಮಿ 52
ಡಿ ಕಾಕ್‌ ಬಿ ಠಾಕೂರ್‌ 34
ವಿಯಾನ್‌ ಮುಲ್ಡರ್‌ ಸಿ ಪಂತ್‌ ಬಿ ಶಮಿ 12
ಮಾರ್ಕೊ ಜೆನ್ಸೆನ್‌ ಎಲ್‌ಬಿಡಬ್ಲ್ಯು ಬಿ ಠಾಕೂರ್‌ 19
ಕಗಿಸೊ ರಬಾಡ ಸಿ ಪಂತ್‌ ಬಿ ಶಮಿ 25
ಕೇಶವ್‌ ಮಹಾರಾಜ್‌ ಸಿ ರಹಾನೆ ಬಿ ಬುಮ್ರಾ 12
ಲುಂಗಿ ಎನ್‌ಗಿಡಿ ಔಟಾಗದೆ 0
ಇತರ 11
ಒಟ್ಟು (ಆಲೌಟ್‌) 197
ವಿಕೆಟ್‌ ಪತನ:1-2, 2-25, 3-30, 4-32, 5-104, 6-133, 7-144, 8-181, 9-193.
ಬೌಲಿಂಗ್‌; ಜಸ್‌ಪ್ರೀತ್‌ ಬುಮ್ರಾ 7.2-2-16-2
ಮೊಹಮ್ಮದ್‌ ಸಿರಾಜ್‌ 15.1-3-45-1
ಮೊಹಮ್ಮದ್‌ ಶಮಿ 16-5-44-5
ಶಾರ್ದೂಲ್ ಠಾಕೂರ್‌ 11-1-51-2
ಆರ್‌. ಅಶ್ವಿ‌ನ್‌ 13-2-37-0

 

Advertisement

Udayavani is now on Telegram. Click here to join our channel and stay updated with the latest news.

Next