Advertisement
ಸೀಫರ್ಟ್ ಒಬ್ಬರೇ ಅಲ್ಲ…ಏಕದಿನ ಸರಣಿಯಲ್ಲಿ ಹೆಸರೇ ಕೇಳದ ಟಿಮ್ ಸೀಫರ್ಟ್ ಎಂಬ ಕೀಪರ್ ಕಂ ಓಪನರ್ ಟಿ20 ಕ್ರಿಕೆಟ್‌ನಲ್ಲಿ ಭಾರತದ ಮೇಲೆ ಸವಾರಿ ಮಾಡಿದ್ದು ರೋಹಿತ್ ಪಡೆಯ ಪಾಲಿಗೆ ಅನಿರೀಕ್ಷಿತ ವಿದ್ಯಮಾನವಾಗಿತ್ತು. ಸೀಫರ್ಟ್ ಕೇವಲ 43 ಎಸೆತಗಳಿಂದ 84 ರನ್ ಹೊಡೆದು ನ್ಯೂಜಿಲ್ಯಾಂಡಿನ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ನಾಳೆಯೂ ಅವರು ಸಿಡಿಯಬಹುದೆಂಬ ಭೀತಿ ಅನಗತ್ಯ. ಸೀಫರ್ಟ್ ಹೊರತುಪಡಿಸಿಯೂ ಕಿವೀಸ್ ಪಾಳೆಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಬಲ್ಲ ಇನ್ನೂ ಕೆಲವು ಆಟಗಾರರಿದ್ದಾರೆ. ಇವರ ಬಗ್ಗೆ ಭಾರತ ಎಚ್ಚರದಿಂದ ಇರುವುದು ಅಗತ್ಯ.
ಬ್ಯಾಟಿಂಗ್‌ನಲ್ಲಿ ಭಾರತದ ಅಗ್ರ ಕ್ರಮಾಂಕ ಸಿಡಿದು ನಿಲ್ಲುವುದು ಮುಖ್ಯ. ರೋಹಿತ್ ಅಥವಾ ಧವನ್, ಇಬ್ಬರಲ್ಲೊಬ್ಬರು ಕ್ರೀಸ್ ಆಕ್ರಮಿಸಿಕೊಂಡರೆ ದೊಡ್ಡ ಮೊತ್ತಕ್ಕೇನೂ ಕೊರತೆ ಕಾಡದು. ಇಲ್ಲಿಂದ ಮುಂದೆ “ವಿಕೆಟ್ ಕೀಪರ್ ಟೀಮ್’ನಂತಿರುವ ಭಾರತ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳನ್ನು ಹೊಂದಿಲ್ಲ ಎಂಬುದನ್ನು ಒಪ್ಪಲೇಬೇಕಾಗುತ್ತದೆ.
Related Articles
Advertisement
ಸಂಭಾವ್ಯ ತಂಡಗಳುಭಾರತ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್/ವಿಜಯ್ ಶಂಕರ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ/ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್/ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್. ನ್ಯೂಜಿಲ್ಯಾಂಡ್: ಟಿಮ್ ಸೀಫರ್ಟ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟಯ್ಲರ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್/ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕ್ಯುಗೆಲೀನ್, ಟಿಮ್ ಸೌಥಿ, ಐಶ್ ಸೋಧಿ, ಲಾಕಿ ಫರ್ಗ್ಯುಸನ್.
ಆರಂಭ: ಬೆಳಗ್ಗೆ 11.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್ ವನಿತೆಯರಿಗೂ ಇಂದೇ ಸವಾಲು
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 23 ರನ್‌ಗಳ ಸೋಲುಂಡ ಭಾರತದ ವನಿತಾ ತಂಡ ಸರಣಿಯ ಎರಡನೇ ಪಂದ್ಯವನ್ನು ಶುಕ್ರವಾರವೇ ಆಡಳಿಯಲಿದೆ. ಏಕದಿನ ಸರಣಿಯನ್ನಿ 2-1 ಅಂತರದಿಂದ ಗೆದ್ದ ಭಾರತ ತಂಡ ಟಿ20 ಸರಣಿಯ ಆರಂಭದಲ್ಲೇ ಗೆಲುವನ್ನು ಕೈಚೆಲ್ಲಿತ್ತು. ಸರಣಿ ಉಳಿಸಿಕೊಳ್ಳಬೇಕಾದರೆ 2ನೇ ಪಂದ್ಯದಲ್ಲಿ ಭಾರತದ ವನಿತೆಯರಿಗೆ ಗೆಲುವು ಅನಿವಾರ್ಯ. ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ವೈಫಲ್ಯ ಕಂಡಿತ್ತು. ಸ್ಮತಿ ಮಂಧನಾ ಹಾಗೂ ಜೆಮಿಮಾ ರೋಡ್ರಿಗಸ್ ಹೊರತುಪಡಿಸಿದರೆ ಉಳಿದವರು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಪದಾರ್ಪಣೆಗೈದ ಪ್ರಿಯಾ ಪೂನಿಯಾ, ದಯಾಳನ್ ಹೇಮಲತಾ ಅವರಿಂದ ತಂಡಕ್ಕೆ ಯಾವುದೇ ನೆರವು ಲಭಿಸಲಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕಿ ಆಟ ಆಡುವಲ್ಲಿ ವಿಫಲರಾಗಿದ್ದರು. ಬೌಲಿಂಗ್ ಪಡೆ ಏಕದಿನ ಸರಣಿಯ ಮ್ಯಾಜಿಕ್ ಪುನರಾವರ್ತಿಸಲಿಲ್ಲ. ಏಕದಿನ ಸರಣಿಯ 2 ಪಂದ್ಯಗಳಲ್ಲಿ ಆತಿಥೇಯರನ್ನು ಆಲೌಟ್ ಮಾಡಿದ ಭಾರತದ ಬೌಲರ್, ಟಿ20ಯಲ್ಲಿ ವಿಕೆಟ್ ಕೀಳಲು ಪರದಾಡಿ ದ್ದರು. ಹೀಗಾಗಿ ಶುಕ್ರವಾರ ಭಾರತ ಎಲ್ಲ ವಿಭಾಗಗಳಲ್ಲೂ ಸಂಘಟಿತ ಪ್ರದರ್ಶನ ನೀಡುವ ಅಗತ್ಯವಿದೆ. ಮೊದಲ ಪಂದ್ಯದಲ್ಲಿ ಅವಕಾಶ ಪಡೆಯದ ಅನುಭವಿ ಮಿಥಾಲಿ ರಾಜ್ ಇಲ್ಲಿಯೂ “ವೀಕ್ಷಕಿ’ಯಾಗಿ ಉಳಿ ಯುವ ಸಾಧ್ಯತೆಯೇ ಹೆಚ್ಚು. ಇತ್ತ ನ್ಯೂಜಿಲ್ಯಾಂಡ್ ಮೊದಲ ಪಂದ್ಯ ದಲ್ಲಿ ಸಾಂ ಕ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್ ವಿಭಾಗದಲ್ಲಿ ಸೋಫಿ ಡಿವೈನ್, ನಾಯಕಿ ಆ್ಯಮಿ ಸ್ಯಾಟರ್‌ವೈಟ್, ಬೌಲಿಂಗ್ ವಿಭಾಗದಲ್ಲಿ ಲೀ ಟಹುಹು, ಲೀ ಕ್ಯಾಸ್ಪೆರಕ್ ಅವರೆಲ್ಲ ಮಿಂಚಿನ ಆಟವಾಡಿದ್ದರು. ಆರಂಭ: ಬೆಳಗ್ಗೆ 7.30
ಪ್ರಸಾರ: ಸ್ಟಾರ್ ನ್ಪೋರ್ಟ್ಸ್