Advertisement

ಇಂಗ್ಲೆಂಡ್‌ ಆಕ್ರಮಣದ ನಡುವೆ ಪೂಜಾರ ಶತಕದಾಟ

06:00 AM Sep 01, 2018 | |

ಸೌತಾಂಪ್ಟನ್‌: “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಅವರ ಜವಾಬ್ದಾರಿಯುತ ಶತಕದಾಟದ ನೆರವಿನಿಂದ ಸೌತಾಂಪ್ಟನ್‌ ಟೆಸ್ಟ್‌ ಪಂದ್ಯದ 2ನೇ ದಿನ ಭಾರತ ಬ್ಯಾಟಿಂಗ್‌ ಕುಸಿತದ ನಡುವೆಯೂ ಒಂದಿಷ್ಟು ಗೌರವ ಸಂಪಾದಿಸಿದೆ. ಇಂಗ್ಲೆಂಡಿನ 246ಕ್ಕೆ ಉತ್ತರವಾಗಿ ಭಾರತ 9 ವಿಕೆಟಿಗೆ 251 ರನ್‌ ಗಳಿಸಿ ಆಟ ಮುಂದುವರಿಸುತ್ತಿದೆ. ಇದರಲ್ಲಿ ಪೂಜಾರ ಪಾಲು ಅಜೇಯ 113 ರನ್‌. 61ನೇ ಟೆಸ್ಟ್‌ನಲ್ಲಿ ಪೂಜಾರ ದಾಖಲಸಿದ 15ನೇ ಶತಕ ಇದಾಗಿದೆ. 229 ಎಸೆತ ಎದುರಿಸಿ 13 ಬೌಂಡರಿ ಬಾರಿಸಿದರು. ಒಂದು ಹಂತದಲ್ಲಿ ಭಾರತ 3ಕ್ಕೆ 161 ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ಬಳಿಕ ಮೊಯಿನ್‌ ಅಲಿ ದಾಳಿಗೆ ತತ್ತರಿಸಿತು. ಅಲಿ 5 ವಿಕೆಟ್‌ ಉರುಳಿಸಿದರು. 

Advertisement

ಕೊಹ್ಲಿ 6 ಸಾವಿರ ರನ್‌ ಪೂರ್ತಿ
ವಿರಾಟ್‌ ಕೊಹ್ಲಿ  ಟೆಸ್ಟ್‌ನಲ್ಲಿ 6,000 ರನ್‌ ಪೂರ್ತಿ ಗೊಳಿಸಿದರು. ಇದಕ್ಕಾಗಿ 119 ಇನ್ನಿಂಗ್ಸ್‌ ತೆಗೆದು ಕೊಂಡರು.  ಇದು ಟೆಸ್ಟ್‌ ಇತಿಹಾಸದ 9ನೇ ಅತೀ ವೇಗದ ಸಾಧನೆೆ. 68 ಇನ್ನಿಂಗ್ಸ್‌ಗಳಲ್ಲಿ 6 ಸಾವಿರ ರನ್‌ ರಾಶಿ ಹಾಕಿದ  ಬ್ರಾಡ್‌ಮನ್‌ ಅವರದು ವಿಶ್ವದಾಖಲೆ ಯಾಗಿದೆ. ಭಾರತದ ಸಾಧಕರಲ್ಲಿ ಕೊಹ್ಲಿಗೆ ದ್ವಿತೀಯ ಸ್ಥಾನ.  ಸುನೀಲ್‌ ಗಾವಸ್ಕರ್‌  ಮೊದಲಿಗ (117).

ಸ್ಕೋರ್‌ಪಟ್ಟಿ
 ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌

ಅಲಸ್ಟೇರ್‌ ಕುಕ್‌    ಸಿ ಕೊಹ್ಲಿ ಬಿ ಪಾಂಡ್ಯ    17
ಕೀಟನ್‌ ಜೆನ್ನಿಂಗ್ಸ್‌    ಎಲ್‌ಬಿಡಬ್ಲ್ಯು ಬುಮ್ರಾ    0
ಜೋ ರೂಟ್‌    ಎಲ್‌ಬಿಡಬ್ಲ್ಯು ಇಶಾಂತ್‌    4
ಜಾನಿ ಬೇರ್‌ಸ್ಟೊ    ಸಿ ಪಂತ್‌ ಬಿ ಬುಮ್ರಾ    6
ಬೆನ್‌ ಸ್ಟೋಕ್ಸ್‌    ಎಲ್‌ಬಿಡಬ್ಲ್ಯು ಶಮಿ    23
ಜಾಸ್‌ ಬಟ್ಲರ್‌    ಸಿ ಕೊಹ್ಲಿ ಬಿ ಶಮಿ    21
ಮೊಯಿನ್‌ ಅಲಿ    ಸಿ ಬುಮ್ರಾ ಬಿ ಅಶ್ವಿ‌ನ್‌    40
ಸ್ಯಾಮ್‌ ಕರನ್‌    ಬಿ ಅಶ್ವಿ‌ನ್‌    78
ಆದಿಲ್‌ ರಶೀದ್‌    ಎಲ್‌ಬಿಡಬ್ಲ್ಯು ಇಶಾಂತ್‌    6
ಸ್ಟುವರ್ಟ್‌ ಬ್ರಾಡ್‌    ಎಲ್‌ಬಿಡಬ್ಲ್ಯು ಬುಮ್ರಾ    17
ಜೇಮ್ಸ್‌ ಆ್ಯಂಡರ್ಸನ್‌    ಔಟಾಗದೆ    0

ಇತರ        34
ಒಟ್ಟು  (ಆಲೌಟ್‌)        246
ವಿಕೆಟ್‌ ಪತನ: 1-1, 2-15, 3-28, 4-36, 5-69, 6-86, 7-167, 8-177, 9-240.

ಬೌಲಿಂಗ್‌:
ಜಸ್‌ಪ್ರೀತ್‌ ಬುಮ್ರಾ        20-5-46-3
ಇಶಾಂತ್‌ ಶರ್ಮ        16-6-26-2
ಹಾರ್ದಿಕ್‌ ಪಾಂಡ್ಯ        8-0-51-1
ಮೊಹಮ್ಮದ್‌ ಶಮಿ        18-2-51-2
ಆರ್‌. ಅಶ್ವಿ‌ನ್‌        14.4-3-40-2

Advertisement

             ಭಾರತ ಪ್ರಥಮ ಇನ್ನಿಂಗ್ಸ್‌
ಶಿಖರ್‌ ಧವನ್‌    ಸಿ ಬಟ್ಲರ್‌ ಬಿ ಬ್ರಾಡ್‌    23
ಕೆ.ಎಲ್‌. ರಾಹುಲ್‌    ಎಲ್‌ಬಿಡಬ್ಲ್ಯು ಬ್ರಾಡ್‌    19
ಚೇತೇಶ್ವರ್‌ ಪೂಜಾರ    ಬ್ಯಾಟಿಂಗ್‌    113
ವಿರಾಟ್‌ ಕೊಹ್ಲಿ    ಸಿ ಕುಕ್‌ ಬಿ ಕರನ್‌    46
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ಸ್ಟೋಕ್ಸ್‌    11
ರಿಷಬ್‌ ಪಂತ್‌    ಎಲ್‌ಬಿಡಬ್ಲ್ಯು ಅಲಿ    0
ಹಾರ್ದಿಕ್‌ ಪಾಂಡ್ಯ    ಸಿ ರೂಟ್‌ ಬಿ ಅಲಿ    4
ಆರ್‌. ಅಶ್ವಿ‌ನ್‌    ಬಿ ಅಲಿ    1
ಮೊಹಮ್ಮದ್‌ ಶಮಿ    ಬಿ ಅಲಿ    0
ಇಶಾಂತ್‌ ಶರ್ಮ    ಸಿ ಕುಕ್‌ ಬಿ ಅಲಿ    14
ಜಸ್‌ಪ್ರೀತ್‌ ಬುಮ್ರಾ    ಬ್ಯಾಟಿಂಗ್‌    5

ಇತರ        13
ಒಟ್ಟು  (9 ವಿಕೆಟಿಗೆ)        251

ವಿಕೆಟ್‌ ಪತನ: 1-37, 2-50, 3-142, 4-161, 5-181, 6-189, 7-195, 8-195, 9-227.

ಬೌಲಿಂಗ್‌:
ಜೇಮ್ಸ್‌ ಆ್ಯಂಡರ್ಸನ್‌    18-2-50-0
ಸ್ಟುವರ್ಟ್‌ ಬ್ರಾಡ್‌        15-5-50-2
ಸ್ಯಾಮ್‌ ಕರನ್‌        14-3-39-1
ಆದಿಲ್‌ ರಶೀದ್‌        6-0-14-0
ಮೊಯಿನ್‌ ಅಲಿ        16-1-63-5
ಬೆನ್‌ಸ್ಟೋಕ್ಸ್‌        7-1-23-1

Advertisement

Udayavani is now on Telegram. Click here to join our channel and stay updated with the latest news.

Next