Advertisement

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ.. ಹಾಕಿ ಕಿರೀಟ ಉಳಿಸಿಕೊಂಡ ಭಾರತ

11:04 PM Nov 20, 2024 | Team Udayavani |

ರಾಜ್‌ಗಿರ್‌ (ಬಿಹಾರ): ಕೂಟದುದ್ದಕ್ಕೂ ಅಜೇಯ ಸಾಧನೆಯನ್ನು ಕಾಯ್ದುಕೊಂಡು ಬಂದ ಭಾರತದ ವನಿತೆಯರು ಏಷ್ಯನ್‌ ಹಾಕಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯ ಕಿರೀಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರದ ಫೈನಲ್‌ನಲ್ಲಿ ಸಲೀಮಾ ಟೇಟೆ ನಾಯಕತ್ವದ ಭಾರತ ಏಕೈಕ ಗೋಲಿನಿಂದ ಚೀನವನ್ನು ಮಣಿಸಿ ಮೆರೆದಾಡಿತು.

Advertisement

ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್‌ನಲ್ಲಿ ಯುವ ಸ್ಟ್ರೈಕರ್‌ ದೀಪಿಕಾ 31ನೇ ನಿಮಿಷದಲ್ಲಿ ಅತ್ಯಾಕರ್ಷಕ ರಿವರ್ಸ್‌ ಹಿಟ್‌ ಶಾಟ್‌ ಮೂಲಕ ಪಂದ್ಯದ ಏಕೈಕ ಗೋಲಿಗೆ ಸಾಕ್ಷಿಯಾದರು. ಈ ಪಂದ್ಯಾವಳಿಯಲ್ಲಿ ಅತ್ಯಧಿಕ 11 ಗೋಲು ಬಾರಿಸುವ ಮೂಲಕ ಭಾರತದ ಗೆಲುವಿನ ರೂವಾರಿ ಎನಿಸಿದರು.

ಈ ಮುನ್ನಡೆಯನ್ನು ಕೊನೆಯ ವರೆಗೂ ಕಾಯ್ದುಕೊಂಡು ಬಂದ ಭಾರತ, 3ನೇ ಸಲ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು. ದಕ್ಷಿಣ ಕೊರಿಯಾದ ದಾಖಲೆಯನ್ನು ಸರಿದೂಗಿಸಿತು. ಇದಕ್ಕೂ ಮುನ್ನ 2016 ಹಾಗೂ 2023ರಲ್ಲಿ ಭಾರತ ಚಾಂಪಿಯನ್‌ ಆಗಿತ್ತು.

ಚೀನ ವಿರುದ್ಧ 2 ಜಯ
ಚೀನ ಕಳೆದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಹೆಗ್ಗಳಿಕೆ ಹೊಂದಿತ್ತು. ಲೀಗ್‌ನಲ್ಲೂ ಚೀನ ಮೇಲೆ ಸವಾರಿ ಮಾಡಿದ ಭಾರತ ಭಾರತ 3-0 ಅಂತರದ ಜಯ ಸಾಧಿಸಿತ್ತು. ಲೀಗ್‌ ಹಂತದ ಎಲ್ಲ 5 ಪಂದ್ಯಗಳನ್ನು ಗೆದ್ದ ಭಾರತ, ಸೆಮಿಫೈನಲ್‌ನಲ್ಲಿ ಜಪಾನ್‌ಗೆ ಆಘಾತವಿಕ್ಕಿತ್ತು.
ಈ ಪ್ರಶಸ್ತಿಯೊಂದಿಗೆ ಪ್ಯಾರಿಸ್‌ ಅರ್ಹತೆ ಸಂಪಾದಿಸುವಲ್ಲಿ ವಿಫ‌ಲವಾದ ಭಾರತಕ್ಕೆ ದೊಡ್ಡದೊಂದು ಸಮಾಧಾನ ಸಿಕ್ಕಿದೆ. ಹಾಗೆಯೇ ನೂತನ ಕೋಚ್‌ ಹರೇಂದ್ರ ಸಿಂಗ್‌ ಅವರ ಪ್ರಯತ್ನಕ್ಕೆ ಫ‌ಲವೂ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next