Advertisement

ಬಾಂಗ್ಲಾ ವಿರುದ್ಧ ಟಿ20: ಕೊಹ್ಲಿಗೆ ವಿಶ್ರಾಂತಿ

09:48 AM Oct 25, 2019 | Sriram |

ಮುಂಬೈ: ನ.3ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಕ್ರಿಕೆಟ್‌ ಸರಣಿಗಾಗಿ, ಭಾರತ ತಂಡ ಪ್ರಕಟಿಸಲಾಗಿದೆ. 3 ಪಂದ್ಯಗಳ ಟಿ20 ಸರಣಿಗೆ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಶರ್ಮ ನಾಯತ್ವ ವಹಿಸಲಿದ್ದಾರೆ. ಇನ್ನು ಟಿ20 ತಂಡದಲ್ಲಿ ಕಂಡುಬಂದಿರುವ ಮಹತ್ವದ ಬದಲಾವಣೆಯೆಂದರೆ, ಆಲ್‌ರೌಂಡರ್‌ ಶಿವಂ ದುಬೆಗೆ ಸ್ಥಾನ ಸಿಕ್ಕಿದ್ದು. ವೇಗದ ಬೌಲಿಂಗ್‌ ಜೊತೆಗೆ, ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡುವ ಸಾಮರ್ಥ್ಯವಿರುವುದರಿಂದ ಮುಂಬೈ ಆಟಗಾರನಿಗೆ ಸ್ಥಾನ ಸಿಕ್ಕಿದೆ.

Advertisement

ದುಬೆಗೆ ಸ್ಥಾನ ಸಿಗಲು ಇನ್ನೊಂದು ಮಹತ್ವದ ಕಾರಣ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಶಸ್ತ್ರಚಿಕಿತ್ಸೆಗೊಳಗಾಗಿರುವುದು. ವಿಜಯ್‌ ಶಂಕರ್‌ಗೆ ಸ್ಥಾನ ನೀಡಲು ಆಯ್ಕೆಗಾರರು ಮನಸ್ಸು ಮಾಡಲಿಲ್ಲ, ಅದರ ಬದಲು ಹೊಸ ಮುಖ ದುಬೆಯನ್ನು ಪ್ರಯತ್ನಿಸಿ ನೋಡಲು ತೀರ್ಮಾನಿಸಿದಂತಿದೆ. ಜಸ್ತ್ರಚಿಕಿತ್ಸೆಗೊಳಗಾಗಿರುವ ಇನ್ನೊಬ್ಬ ಆಟಗಾರ, ವೇಗಿ ಜಸಿøàತ್‌ ಬುಮ್ರಾ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಗಾಯಗೊಂಡಿರುವ ಇನ್ನೊಬ್ಬ ವೇಗಿ ಭುವನೇಶ್ವರ್‌ ಕುಮಾರ್‌ಗೂ ಸ್ಥಾನ ಸಿಕ್ಕಿಲ್ಲ.

ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಮಹತ್ವದ ಹೆಸರೆಂದರೆ ವೇಗಿ ನವದೀಪ್‌ ಸೈನಿ. ವಿಂಡೀಸ್‌ ಪ್ರವಾಸದಲ್ಲಿ ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನೇ ನೀಡಿದ್ದ ಅವರು ಈಗ ಫಿಟೆ°ಸ್‌ ಹೊಂದಿಲ್ಲ ಎಂಬ ಕಾರಣಕ್ಕೆ ತಂಡದಿಂದ ಕೈಬಿಡಲಾಗಿದೆ. ಅವರ ಜಾಗದಲ್ಲಿ ಶಾದೂìಲ್‌ ಠಾಕೂರ್‌ರನ್ನು ಸೇರಿಸಿಕೊಳ್ಳಲಾಗಿದೆ.

ಸಂಜುಗೆ ಸ್ಥಾನ: 2015ರಲ್ಲಿ ಜಿಂಬಾಬ್ವೆ ವಿರುದ್ಧ ಒಂದೇ ಒಂದು ಟಿ20 ಪಂದ್ಯ ಆಡಿದ್ದ ಸಂಜು ಸ್ಯಾಮ್ಸನ್‌, ಮತ್ತೆ ಭಾರತ ತಂಡ ಪ್ರದರ್ಶಿಸಿದ್ದಾರೆ. ವಿಜಯ್‌ ಹಜಾರೆ ಕೂಟದಲ್ಲಿ ದ್ವಿಶತಕ ಸಹಿತ 410 ರನ್‌ ಪೇರಿಸಿರುವುದು ಅವರ ಆಯ್ಕೆಗೆ ಕಾರಣ. ಅತ್ಯುತ್ತಮ ವಿಕೆಟ್‌ ಕೀಪರ್‌ ಆಗಿರುವ ಅವರು ರಿಷಭ್‌ ಪಂತ್‌ಗೆ ಸವಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದೇ ವೇಳೆ ರಿಷಭ್‌ ಪಂತ್‌ಗೂ ಮತ್ತೂಂದು ಅವಕಾಶ ನೀಡಲಾಗಿದೆ.

ರಾಹುಲ್‌, ಮನೀಷ್‌ಗೆ ಸ್ಥಾನ: ಇತ್ತೀಚೆಗೆ ಕಳಪೆ ಲಯದಿಂದ ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಕೆ.ಎಲ್‌.ರಾಹುಲ್‌, ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುತ್ತಾರಾ ಎಂಬ ಅನುಮಾನವಿತ್ತು. ಅದೀಗ ನಿವಾರಣೆಯಾಗಿದ ರಾಹುಲ್‌ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಮನೀಷ್‌ ಪಾಂಡೆ ಕೂಡ ಆಯ್ಕೆಯಾಗಿದ್ದಾರೆ. ಬೇಸರದ ಸಂಗತಿಯೆಂದರೆ ತಮಗೆ ಅವಕಾಶ ಸಿಕ್ಕಿದಾಗೆಲ್ಲ ಅತ್ಯುತ್ತಮವಾಗಿ ಆಡಿ ಭರವಸೆ ಮೂಡಿಸಿರುವ ಮನೀಷ್‌ ಪಾಂಡೆಗೆ, ಇತ್ತೀಚೆಗೆ 11ರ ಬಳಗದಲ್ಲಿ ಆಡಲು ಅವಕಾಶವೇ ಸಿಗುತ್ತಿಲ್ಲ. ಸಿಕ್ಕರೂ ಅವರು 5-6 ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವಾಗ ಬಹುತೇಕ ಪಂದ್ಯ ಮುಗಿದುಹೋಗಿರುತ್ತದೆ. ಆದ್ದರಿಂದ ತಂಡದಲ್ಲಿ ತಮ್ಮ ಸ್ಥಾನ ಸ್ಥಿರ ಮಾಡಿಕೊಳ್ಳಲು ಇನ್ನೂ ಪರದಾಡುತ್ತಿದ್ದಾರೆ. ಇನ್ನು ರಾಹುಲ್‌ ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಮುಂದೆ ವಿಂಡೀಸ್‌ನಲ್ಲಿ ಏಕದಿನ ಪಂದ್ಯದಲ್ಲಿ ಅವಕಾಶವನ್ನೇ ಪಡೆಯಲಿಲ್ಲ!

Advertisement

ಟೆಸ್ಟ್‌ ತಂಡದಲ್ಲಿ ಬದಲಿಲ್ಲ
ಇನ್ನು ಭಾರತ ಟೆಸ್ಟ್‌ ತಂಡದಲ್ಲಿ ಮಹತ್ವದ ಬದಲಾವಣೆಗಳಿಲ್ಲ. ಗಾಯಗೊಂಡಿದ್ದ ಕುಲದೀಪ್‌ ಯಾದವ್‌ ಜಾಗದಲ್ಲಿ ಸ್ಥಾನ ಪಡೆದಿದ್ದ ಶಹಬಾಜ್‌ ನದೀಂ ತಂಡದಿಂದ ಹೊರಬಿದ್ದಿದ್ದಾರೆ. ಕುಲದೀಪ್‌ ಹಿಂತಿರುಗಿದ್ದಾರೆ. ಕೊಹ್ಲಿ ತಾವೇ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಯಾವುದೇ ಬದಲಾವಣೆಗಳಿಲ್ಲದ ತಂಡ ಕಣಕ್ಕಿಳಿಯಲಿದೆ. 2 ಪಂದ್ಯಗಳ ಟೆಸ್ಟ್‌ ಸರಣಿ ನ.14ರಿಂದ ಆರಂಭವಾಗಲಿದೆ.

ಟಿ20 ತಂಡ
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಸಂಜು ಸ್ಯಾಮ್ಸನ್‌, ಶ್ರೇಯಸ್‌ ಐಯ್ಯರ್‌, ಮನೀಷ್‌ ಪಾಂಡೆ, ರಿಷಭ್‌ ಪಂತ್‌, ವಾಷಿಂಗ್ಟನ್‌ ಸುಂದರ್‌, ಕೃಣಾಲ್‌ ಪಾಂಡ್ಯ, ಯಜುವೇಂದ್ರ ಚಹಲ್‌, ರಾಹುಲ್‌ ಚಹರ್‌, ದೀಪಕ್‌ ಚಹರ್‌, ಖಲೀಲ್‌ ಅಹ್ಮದ್‌, ಶಿವಂ ದುಬೆ, ಶಾರ್ದೂಲ್ ಠಾಕೂರ್.

ಟೆಸ್ಟ್‌ ತಂಡ
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಇಶಾಂತ್‌ ಶರ್ಮ, ಶುಬನ್‌ ಗಿಲ್‌, ರಿಷಭ್‌ ಪಂತ್‌.

Advertisement

Udayavani is now on Telegram. Click here to join our channel and stay updated with the latest news.

Next