Advertisement

ತಂಡದಿಂದ ಬಿಡುಗಡೆಗೊಂಡ ರಿಷಭ್‌ ಪಂತ್‌, ಶುಭಮನ್‌ ಗಿಲ್‌

11:21 PM Nov 23, 2019 | mahesh |

ಕೋಲ್ಕತಾ: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ ಅವಕಾಶ ಪಡೆಯದ ರಿಷಭ್‌ ಪಂತ್‌ ಮತ್ತು ಶುಭಮನ್‌ ಗಿಲ್‌ ಅವರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ. ಇವರಿನ್ನು ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಪಂದ್ಯಾವಳಿಯಲ್ಲಿ ಆಡಲು ಲಭ್ಯರಿರುತ್ತಾರೆ ಎಂದು ಬಿಸಿಸಿಐ ತಿಳಿಸಿದೆ.

Advertisement

ಕೋಲ್ಕತಾ ಟೆಸ್ಟ್‌ನಲ್ಲಿ ಕೀಪರ್‌ ವೃದ್ಧಿಮಾನ್‌ ಸಾಹಾ ಅವರಿಗೆ ಸ್ಟಾಂಡ್‌ಬೈ ಆಗಿ ಆಂಧ್ರಪ್ರದೇಶದ ಕೆ. ಶ್ರೀಕರ್‌ ಭರತ್‌ ಅವರನ್ನು ಆರಿಸಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿರುವ ಭರತ್‌, 69 ಪಂದ್ಯಗಳಿಂದ 3,909 ರನ್‌ ಬಾರಿಸಿದ್ದಾರೆ. ಇದರಲ್ಲಿ 8 ಶತಕ, 20 ಅರ್ಧ ಶತಕ ಸೇರಿದೆ.

ರಿಷಭ್‌ ಪಂತ್‌ ಮತ್ತು ಶುಭ ಮನ್‌ ಗಿಲ್‌ ಬಾಂಗ್ಲಾ ಟೆಸ್ಟ್‌ ಸರಣಿಗಾಗಿ ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಕಾಣಿಸಿ ಕೊಂಡಿರಲಿಲ್ಲ. ಹೀಗಾಗಿ ಈಗ ಸಾಗುತ್ತಿರುವ ಕೋಲ್ಕತಾ ಪಂದ್ಯದ ವೇಳೆ ಇವರ ಆವಶ್ಯಕತೆ ಇಲ್ಲದ ಕಾರಣ ತಂಡದಿಂದ ಬಿಡುಗಡೆ ಮಾಡಲಾಯಿತು. ದಿಲ್ಲಿ ತಂಡ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಸರಣಿಯ “ಸೂಪರ್‌ ಲೀಗ್‌’ನಲ್ಲಿ ಇನ್ನೂ 2 ಪಂದ್ಯಗಳನ್ನು ಆಡಲಿದ್ದು, ಪಂತ್‌ ಆಯ್ಕೆಗೆ ಲಭ್ಯರಿರುತ್ತಾರೆ.

ಇನ್ನೊಂದೆಡೆ ಶುಭಮನ್‌ ಗಿಲ್‌ ಪಂಜಾಬ್‌ ತಂಡದ ಉಳಿದೆರಡು ಸೂಪರ್‌ ಲೀಗ್‌ ಪಂದ್ಯಗಳಲ್ಲಿ ಆಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next