Advertisement

ವನಿತಾ ಏಷ್ಯಾ ಕಪ್‌ ಟಿ20 ಕೂಟ: ಬಾಂಗ್ಲಾ ವಿರುದ್ಧ ಭಾರತ ಜಯಭೇರಿ

10:52 PM Oct 08, 2022 | Team Udayavani |

ಬಾಂಗ್ಲಾದೇಶ: ಶಫಾಲಿ ವರ್ಮ ಅವರ ಅಮೋಘ ನಿರ್ವಹಣೆಯಿಂದಾಗಿ ಭಾರತೀಯ ವನಿತೆಯರು ವನಿತಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಕೂಟದಲ್ಲಿ ಬಾಂಗ್ಲಾ ವನಿತೆಯರನ್ನು 59 ರನ್ನು ಗಳಿಂದ ಸೋಲಿಸಿದ್ದಾರೆ. ಈ ಗೆಲುವಿ ನಿಂದ ಭಾರತ ಈ ಕೂಟದಲ್ಲಿ ನಾಲ್ಕನೇ ಗೆಲುವು ದಾಖಲಿಸಿ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದೆ.

Advertisement

ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಹೀನಾಯ ನಿರ್ವಹಣೆ ನೀಡಿ ಆಘಾ ತಕ್ಕೆ ಒಳಗಾಗಿದ್ದ ಭಾರತೀಯ ವನಿತೆ ಯರು ಬಾಂಗ್ಲಾ ವಿರುದ್ಧ ಅಮೋಘ ವಾಗಿ ಆಡಿದರು. ಅಗ್ರ ಕ್ರಮಾಂಕದ ಆಟಗಾರ್ತಿಯರ ಭರ್ಜರಿ ಆಟ ದಿಂದಾಗಿ ಭಾರತ ತಂಡವು 5 ವಿಕೆಟಿಗೆ 159 ರನ್‌ ಗಳಿಸಿತ್ತು.

ಇದಕ್ಕುತ್ತರವಾಗಿ ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ಕುಸಿದ ಬಾಂಗ್ಲಾ ವನಿತೆಯರು 7 ವಿಕೆಟಿಗೆ ಸರಿಯಾಗಿ 100 ರನ್‌ ಗಳಿಸಲಷ್ಟೇ ಶಕ್ತರಾಗಿ ಶರಣಾದರು. ಬಾಂಗ್ಲಾದೇಶವು ಇಷ್ಟರವರೆಗೆ ಟಿ20 ಇತಿಹಾಸದಲ್ಲಿ 142ಕ್ಕಿಂತ ಹೆಚ್ಚಿನ ರನ್‌ ಮೊತ್ತವನ್ನು ಚೇಸಿಂಗ್‌ ಮಾಡಿಲ್ಲ.

ಆಡಿದ ಐದು ಪಂದ್ಯಗಳಿಂದ ನಾಲ್ಕರಲ್ಲಿ ಜಯ ಸಾಧಿಸಿ ಎಂಟಂಕ ಪಡೆದ ಭಾರತ ಏಳು ತಂಡಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರೌಂಡ್‌ ರಾಬಿನ್‌ ಹಂತದಲ್ಲಿ ಭಾರತಕ್ಕೆ ಇನ್ನೊಂದು ಪಂದ್ಯ ಉಳಿದಿದೆ.

ಆರಂಭಿಕ ಆಟಗಾರ್ತಿಯರ ಉತ್ತಮ ಆಟದಿಂದಾಗಿ ಭಾರತ ಉತ್ತಮ ಮೊತ್ತ ಗಳಿಸುವಂತಾಯಿತು. ಶಫಾಲಿ, ಸ್ಮತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗಸ್‌ ಉತ್ತಮವಾಗಿ ಆಡಿದರು. ಬ್ಯಾಟಿಂಗ್‌ನಲ್ಲಿ 44 ಎಸೆತಗಳಿಂದ 55 ರನ್‌ ಹೊಡೆದ ಶಫಾಲಿ ಮತ್ತೆ ಬಿಗು ದಾಳಿ ಸಂಘಟಿಸಿ 2 ವಿಕೆಟ್‌ ಹಾರಿಸಿದ್ದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next