Advertisement
ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಪಡೆ ಭರ್ಜರಿ ಫಾರ್ಮ್ನಲ್ಲಿದೆ. ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ನಡೆದ ಮೊದಲ ಮೂರು ಪಂದ್ಯಗಳಲ್ಲಿಯೂ ಅಧಿಕಾರಯುತ ಗೆಲುವು ಒಲಿಸಿಕೊಂಡ ಭಾರತ ತವರಿನಲ್ಲಿ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದೆ. ತಂಡದ ಬ್ಯಾಟಿಂಗ್, ಬೌಲಿಂಗ್ ಶಕ್ತಿಗೆ ಆಸ್ಟ್ರೇಲಿಯ ತಲೆಬಾಗಿದೆ.
Related Articles
Advertisement
ಬ್ಯಾಟಿಂಗ್ ಭಾರತದ ಶಕ್ತಿಯಾಗಿದ್ದರೂ ಬೌಲಿಂಗ್ನಲ್ಲಿಯೂ ಭಾರತ ಪರಿಣಾಮಕಾರಿ ದಾಳಿ ಸಂಘಟಿಸುತ್ತಿದೆ. ಇಂದೋರ್ನಲ್ಲಿ ಇನ್ನಿಂಗ್ಸ್ನ ಅಂತಿಮ 10 ಓವರ್ಗಳಲ್ಲಿ ಭಾರತದ ಬಿಗು ದಾಳಿಯಿಂದಾಗಿ ಆಸ್ಟ್ರೇಲಿಯದ ರನ್ವೇಗಕ್ಕೆ ಕಡಿವಾಣ ಬಿತ್ತು. ಇಲ್ಲದಿದ್ದರೆ ಭಾರತದ ಮೊತ್ತ 320ರ ಗಡಿ ದಾಟುವ ಸಾಧ್ಯತೆಯಿತ್ತು.
ಸೀಮ್ ಬೌಲರ್ಗಳಾದ ಭುವನೇಶ್ವರ್ ಮತ್ತು ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ಆಟಗಾರರಿಗೆ ಸಿಂಹಸ್ವಪ್ನರಾಗುತ್ತಿದ್ದಾರೆ. ಡೆತ್ ಓವರ್ಗಳಲ್ಲಿಯೂ ಇವರಿಬ್ಬರು ಆಸ್ಟ್ರೇಲಿಯದ ರನ್ವೇಗಕ್ಕೆ ಕಡಿವಾಣ ಹಾಕಲು ಸಮರ್ಥರಾಗಿದ್ದಾರೆ. ಪ್ರಚಂಡ ನಿರ್ವಹಣೆಯ ಮೂಲಕ ಯುವ ಸ್ಪಿನ್ದ್ವಯರಾದ ಯುಜ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಗಮನ ಸೆಳೆದಿದ್ದಾರೆ. ಹಾಗಾಗಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರ ಅನುಪಸ್ಥಿತಿ ಎದ್ದು ಕಾಣುತ್ತಿಲ್ಲ.
ಕೋಲ್ಕತಾ ಪಿಚ್ನಲ್ಲಿ ಕುಲದೀಪ್ ಭರ್ಜರಿ ನಿರ್ವಹಣೆ ನೀಡಿದರಲ್ಲದೇ ಹ್ಯಾಟ್ರಿಕ್ ಸಾಧಿಸಿ ಕಪಿಲ್ ದೇವ್ ಮತ್ತು ಚೇತನ್ ಶರ್ಮ ಅವರ ಸಾಲಿಗೆ ಸೇರ್ಪಡೆಯಾಗಿದ್ದರು.
ತಂಡ ಸಂಕಷ್ಟಕ್ಕೆ ಸಿಲುಕಿದಾಗ ಆಟಗಾರರು ರಕ್ಷಣೆಯ ಭಾರ ಹೊತ್ತಿರುವುದು ಒಳ್ಳೆಯ ಅಂಶವಾಗಿದೆ. ಮೊದಲ ಪಂದ್ಯದಲ್ಲಿ ಅಗ್ರ ಕ್ರಮಾಂಕ ಕುಸಿದ ಬಳಿಕ ಮಧ್ಯಮ ಮತ್ತು ಕೆಳಗಿನ ಕ್ರಮಾಂಕದ ಆಟಗಾರರು ಉತ್ತಮ ನಿರ್ವಹಣೆ ನೀಡಿ ಒಳ್ಳೆಯ ಮೊತ್ತ ಪೇರಿಸಲು ನೆರವಾಗಿದ್ದರು. ಎಲ್ಲ ಆಟಗಾರರು ಒಂದಲ್ಲ ಒಂದು ಪಂದ್ಯದಲ್ಲಿ ಅಮೋಘವಾಗಿ ಆಡಿ ಗಮನ ಸೆಳೆದಿದ್ದಾರೆ.
ಒತ್ತಡದಲ್ಲಿ ಆಸ್ಟ್ರೇಲಿಯಸತತ ಮೂರು ಪಂದ್ಯಗಳಲ್ಲಿ ಸೋತಿರುವ ಆಸ್ಟ್ರೇಲಿಯ ಗೆಲುವು ದಾಖಲಿಸುವ ಒತ್ತಡದಲ್ಲಿದೆ. ಸರಣಿ ಕಳೆದುಕೊಂಡ ಆಸ್ಟ್ರೇಲಿಯ ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆದ್ದು ಸಮಾಧಾನಪಡಲು ಮತ್ತು ವೈಟ್ವಾಶ್ ಸೋಲು ತಪ್ಪಿಸಲು ಶತಪ್ರಯತ್ನ ನಡೆಸಬಹುದು. ಸದ್ಯದ ಸ್ಥಿತಿಯಲ್ಲಿ ಇದು ಬಹಳ ಕಷ್ಟವೆನಿಸಿದರೂ ಮುಂಬರುವ ಆ್ಯಶಸ್ ಸರಣಿ ಇರುವ ಕಾರಣ ಗೆಲುವು ಅನಿವಾರ್ಯವಾಗಿದೆ. ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಆಸ್ಟ್ರೇಲಿಯದ ನಿರೀಕ್ಷೆಯಾಗಿದೆ. ತವರಿನ ಹೊರಗಡೆ ಸತತ 11 ಪಂದ್ಯಗಳಲ್ಲಿ ಸೋತಿರುವುದು (ಎರಡು ಮಳೆಯಿಂದ ರದ್ದಾಗಿದೆ) ತಂಡಕ್ಕೆ ಹೊಡೆತವಾಗಿದೆ. ಇದರಲ್ಲಿ ಎಂಟು ಸೋಲುಗಳು ದಕ್ಷಿಣ ಆಫ್ರಿಕಾ ಮತ್ತು ಭಾರತ ವಿರುದ್ಧವೇ ಆಗಿರುವುದು ಆಸ್ಟ್ರೇಲಿಯಕ್ಕೆ ನುಂಗಲಾರದ ಕಷ್ಟವಾಗಿದೆ. ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್ವೆಲ್ ಅವರ ವೈಫಲ್ಯದಿಂದ ಆಸ್ಟ್ರೇಲಿಯ ಕಳವಳಪಡುವಂತಾಗಿದೆ. ಇದರ ಜತೆ ಆರನ್ ಫಿಂಚ್ ಶತಕ ದಾಖಲಿಸಿದ್ದರೂ ಪ್ರವಾಸಿ ತಂಡ ಒಮ್ಮೆಯೂ 300ರ ಗಡಿ ದಾಟಿಲ್ಲ. ಇಂದೋರ್ನಲ್ಲಿ ತಂಡ 40 ಓವರ್ಗಳಲ್ಲಿ 2 ವಿಕೆಟಿಗೆ 232 ರನ್ ಪೇರಿಸಿದ್ದರೂ ಆಸ್ಟ್ರೇಲಿಯ 293 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅಂತಿಮ 10 ಓವರ್ಗಳಲ್ಲಿ ತಂಡ 4 ವಿಕೆಟಿಗೆ 59 ರನ್ ಪೇರಿಸಿತ್ತು. ನಾಯಕ ಸ್ಟೀವನ್ ಸ್ಮಿತ್ ಮತ್ತು ಆರಂಭಿಕ ಡೇವಿಡ್ ವಾರ್ನರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಆಸ್ಟ್ರೇಲಿಯ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಬ್ಯಾಟಿಂಗ್ ಜತೆ ಬೌಲರ್ಗಳೂ ಪರಿಣಾಮಕಾರಿಯಾಗಿ ದಾಳಿ ಸಂಘಟಿಸಬೇಕಾಗಿದೆ. ನಥನ್ ಕೋಲ್ಟರ್ ನೈಲ್ ಅವರನ್ನು ಹೊರತುಪಡಿಸಿ ಉಳಿದವರ್ಯಾರೂ ಗಮನಾರ್ಹ ನಿರ್ವಹಣೆ ನೀಡಿಲ್ಲ. ಗಾಯಗೊಂಡ ಆ್ಯಸ್ಟನ್ ಅಗರ್ ತವರಿಗೆ ತೆರಳಿದ್ದಾರೆ. ಅವರ ಬದಲಿಗೆ ಜೇಮ್ಸ್ ಫಾಕ್ನರ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಉಭಯ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜ, ಕೆಎಲ್ ರಾಹುಲ್. ಆಸ್ಟ್ರೇಲಿಯ: ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಹಿಲ್ಟನ್ ಕಾರ್ಟ್ರೈಟ್, ಟ್ರ್ಯಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯಿನಿಸ್, ಮ್ಯಾಥ್ಯೂ ವೇಡ್, ಆ್ಯಸ್ಟನ್ ಅಗರ್, ಕೇನ್ ರಿಚಡ್ಸìನ್, ಪ್ಯಾಟ್ ಕಮಿನ್ಸ್, ನಥನ್ ಕೋಲ್ಟರ್ ನೈಲ್, ಆರನ್ ಫಿಂಚ್, ಪೀಟರ್ ಹ್ಯಾಂಡ್ಸ್ಕಾಂಬ್, ಜೇಮ್ಸ್ ಫಾಕ್ನರ್, ಆ್ಯಡಂ ಝಂಪ. ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ನ್ಪೋರ್ಟ್ಸ್ , ಡಿಡಿ ಸತತ 10ನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಇಷ್ಟರವರೆಗೆ ಸತತ 10 ಏಕದಿನ ಪಂದ್ಯಗಳಲ್ಲಿ ಗೆಲುವು ಒಲಿಸಿಕೊಂಡದ್ದಿಲ್ಲ. ಇದೀಗ ಸತತ 10 ಗೆಲುವಿನ ದಾಖಲೆ ಮಾಡುವ ಅವಕಾಶ ಭಾರತಕ್ಕೆ ಲಭಿಸಿದೆ. ಎರಡು ಬಾರಿ ಸತತ 9 ಪಂದ್ಯಗಳಲ್ಲಿ ಗೆದ್ದಿರುವ ಭಾರತಕ್ಕೆ ಬೆಂಗಳೂರಿನನಲ್ಲಿ 10ನೇ ಗೆಲುವು ಆಚರಿಸು ಹುಮ್ಮಸ್ಸಿನಲ್ಲಿದೆ. ಜುಲೈಯಲ್ಲಿ ಆಂಟಿಗಾದಲ್ಲಿ ವೆಸ್ಟ್ಇಂಡೀಸ್ ತಂಡಕ್ಕೆ 11 ರನ್ನುಗಳಿಂದ ಶರಣಾದ ಬಳಿಕ ಭಾರತ ಇಷ್ಟರವರೆಗೆ 9 ಏಕದಿನ ಪಂದ್ಯಗಳನ್ನಾಡಿದ್ದು ಎಲ್ಲ ಪಂದ್ಯಗಳಲ್ಲಿಯೂ ಜಯಭೇರಿ ಬಾರಿಸಿದೆ. ಇದೇ ಮೊದಲ ಬಾರಿ ಸತತ 10 ಗೆಲುವಿನ ಸಂಭ್ರಮ ಆಚರಿಸಲು ಭಾರತ ಎದುರು ನೋಡುತ್ತಿದೆ. ಬೆಂಗಳೂರಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯ ಈ ಹಿಂದೆ 6 ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ಗೆದ್ದಿರುವ ಭಾರತ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಈ ಸರಣಿಯ ಆರಂಭಿಕ ಮೂರು ಪಂದ್ಯಗಳನ್ನು ಅಧಿಕಾರಯುತವಾಗಿ ಗೆದ್ದಿರುವುದರಿಂದ ಭಾರತ ಭಾರೀ ಆತ್ಮವಿಶ್ವಾಸದಲ್ಲಿದೆ. ಈ ಹಿಂದೆ ನ್ಯೂಜಿಲ್ಯಾಂಡ್ ಒಮ್ಮೆ ಸತತ 10 ಗೆಲುವಿನ ಸಂಭ್ರಮ ಆಚರಿಸಿದ್ದರೆ ದಕ್ಷಿಣ ಆಫ್ರಿಕಾ 5 ಮತ್ತು ಆಸ್ಟ್ರೇಲಿಯ ಆರು ಬಾರಿ ಈ ಸಾಧನೆ ಮಾಡಿದೆ. ಇಂಗ್ಲೆಂಡ್, ಪಾಕಿಸ್ಥಾನ, ವೆಸ್ಟ್ಇಂಡೀಸ್ ಮತ್ತು ಶ್ರೀಲಂಕಾ ತಲಾ ಎರಡು ಬಾರಿ ಸತತ 10 ಗೆಲುವಿನ ದಾಖಲೆ ಮಾಡಿದೆ. ಇದೇ ವೇಳೆ ಆಸ್ಟ್ರೇಲಿಯ ಕಳೆದ ಜನವರಿಯಲ್ಲಿ ಅಡಿಲೇಡ್ನಲ್ಲಿ ಪಾಕಿಸ್ಥಾನವನ್ನು ಸೋಲಿಸಿದ ಬಳಿಕ ಇಷ್ಟರವರೆಗೆ ಒಂದೇ ಒಂದು ಏಕದಿನ ಪಂದ್ಯ ಗೆದ್ದಿಲ್ಲ. ತವರಿನ ಹೊರಗಡೆ ಆಸ್ಟ್ರೇಲಿಯ ಸತತ 11 ಪಂದ್ಯಗಳಲ್ಲಿ ಸೋತಿದೆ. ಹಾಗಾಗಿ ಭಾರತ ವಿರುದ್ಧ ಆಸ್ಟ್ರೇಲಿಯ ಗೆಲ್ಲಲು ಕಠಿನ ಪ್ರಯತ್ನ ನಡೆಸಬೇಕಾಗಿದೆ. ಒಂದು ವೇಳೆ ಸರಣಿಯ ಇನ್ನುಳಿದ ಎರಡು ಪಂದ್ಯ ಸೋತರೆ ಆಸ್ಟ್ರೇಲಿಯ ಏಕದಿನ ರ್ಯಾಂಕಿಂಗ್ನಲ್ಲಿ ಕುಸಿತ ಕಾಣುವ ಸಾಧ್ಯತೆಯಿದೆ. ಅಂಕಿ ಅಂಶ
ಎಂ. ಚಿನ್ನಸ್ವಾಮಿ ಕ್ರೀಡಾಂಗಣ ವಿರಾಟ್ ಕೊಹ್ಲಿ ಪಾಲಿಗೆ ತವರಿನಲ್ಲಿ ಅತ್ಯಂತ ಕೆಟ್ಟ ತಾಣವಾಗಿದೆ. ಇಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ ಕೇವಲ 10.50. ಅವರು ಅನುಕ್ರಮವಾಗಿ 0, 8. 34 ಮತ್ತು ಶೂನ್ಯ ರನ್ ಗಳಿಸಿದ್ದರು. ನಾಲ್ಕನೇ ಪಂದ್ಯ ಡೇವಿಡ್ ವಾರ್ನರ್ ಪಾಲಿಗೆ 100ನೇ ಪಂದ್ಯವಾಗಿದೆ. 2009ರಲ್ಲಿ 50 ಓವರ್ಗಳ ಏಕದಿನ ಮಾದರಿಯ ಕ್ರಿಕೆಟಿಗೆ ಅವರು ಪಾದಾರ್ಪಣೆಗೈದಿದ್ದರು. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ
ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ 4ನೇ ಏಕದಿನ ಪಂದ್ಯಕ್ಕೆ ಹವಾಮಾನ ಇಲಾಖೆ ವರದಿಯಂತೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಬುಧವಾರ ತಂಡದ ಅಭ್ಯಾಸಕ್ಕೂ ಮಳೆಯಿಂದ ಅಡ್ಡಿಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಗುರುವಾರ ಮಧ್ಯಾಹ್ನ ತುಂತುರು ಮಳೆ, ರಾತ್ರಿ ವೇಳೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಪಂದ್ಯ ವೀಕ್ಷಣೆಗೆ ಟಿಕೆಟ್ಗಳು ಈಗಾಗಲೇ ಮಾರಾಟವಾಗಿದ್ದು, ಅಭಿಮಾನಿಗಳು ಭಾರೀ ಕುತೂಹಲದಿಂದ ಇದ್ದಾರೆ. ಆದರೆ ಮಳೆಯಿಂದ ಅಭಿಮಾನಿಗಳು ನಿರಾಶೆಗೊಳ್ಳುವ ಸಾಧ್ಯತೆ ಇದೆ.