Advertisement

ಭಾರತ-ಆಸೀಸ್‌ ನಡುವೆ 3ನೇ ಟಿ20;ಗೆದ್ದ ತಂಡಕ್ಕೆ ಸರಣಿ

12:09 PM Oct 13, 2017 | |

ಹೈದರಾಬಾದ್‌: ಭಾರತ- ಆಸ್ಟ್ರೇಲಿಯ ನಡುವಿನ ಟಿ20 ಸಮರ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ಸರಣಿ ಇತ್ಯರ್ಥಕ್ಕಾಗಿ ಶುಕ್ರವಾರ ರಾತ್ರಿ ಹೈದರಾಬಾದ್‌ನಲ್ಲಿ ತೀವ್ರ ಹೋರಾಟ ನಡೆಯುವ ಸಾಧ್ಯತೆ ಇದ್ದು, ಇಲ್ಲಿನ “ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ’ನಲ್ಲಿ 3ನೇ ಹಾಗೂ ಅಂತಿಮ ಹಣಾಹಣಿ ನಡೆಯಲಿದೆ. 

Advertisement

ಏಕದಿನದಲ್ಲಿ ಮೊದಲ 3 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡು ಮೆರೆದ ಟೀಮ್‌ ಇಂಡಿಯಾಕ್ಕೆ ಟಿ20ಯಲ್ಲಿ ಈ ಅದೃಷ್ಟ ಕೈಹಿಡಿಯಲಿಲ್ಲ. ಗುವಾಹಟಿಯ ಸೋಲು ಕೊಹ್ಲಿ ಪಡೆಯ ಯೋಜನೆಗೆ ಧಕ್ಕೆ ತಂದಿದೆ. ಭಾರತವನ್ನು 118ಕ್ಕೆ ಉರುಳಿಸಿದ ಆಸೀಸ್‌, 8 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿ ಸರಣಿಯನ್ನು ಸಮಬಲಕ್ಕೆ ತಂದಿತು. ಹೀಗಾಗಿ ನವಾಬರ ನಾಡಿನ ಕದನ ತೀವ್ರ ಕುತೂಹಲ ಮೂಡಿಸಿದೆ.

ಹೈದರಾಬಾದ್‌ ಐಪಿಎಲ್‌ನ ಪ್ರಮುಖ
ಕೇಂದ್ರ. ಸನ್‌ರೈಸರ್ ಹೈದರಾ ಬಾದ್‌ನ ಹೋಮ್‌ ಗ್ರೌಂಡ್‌. ಆಸ್ಟ್ರೇಲಿಯದ ಉಸ್ತುವಾರಿ ನಾಯಕ ಡೇವಿಡ್‌ ವಾರ್ನರ್‌ ಸನ್‌ರೈಸರ್ ತಂಡದ ಕಪ್ತಾನನೂ ಆಗಿರುವುದನ್ನು ಮರೆಯು ವಂತಿಲ್ಲ. ಹೀಗಾಗಿ ಅವರಿಗೆ ಇದು ಎರಡನೇ ತವರು. ಆದ್ದರಿಂದ ಅದೃಷ್ಟ ಕೈಹಿಡಿದೀತೆಂಬ ನಂಬಿಕೆ ಹೊಂದಿದ್ದಾರೆ. ಒಟ್ಟಾರೆ ಹೇಳುವುದಾದರೆ, ಇದೊಂದು 50-50 ಸಾಧ್ಯತೆಯ ಮುಖಾಮುಖೀ.

ಹರಿಯುವುದೇ ರನ್‌ ಹೊಳೆ?
ಗುವಾಹಟಿಯಲ್ಲಿ ಭಾರತಕ್ಕೆ ಮೊದಲ ಕಂಟಕವಾಗಿ ಪರಿಣಮಿಸಿದ್ದು ಟಾಸ್‌ ಸೋಲು. ಇದರಿಂದಾಗಿ ಮೊದಲು ಬ್ಯಾಟಿಂಗ್‌ ನಡೆಸುವ ಸಂಕಟಕ್ಕೆ ಸಿಲು ಕಿತು. ಹೇಳಿ-ಕೇಳಿ ಇದು ಹೊಸ ಅಂಗಳ. ತೇವ ಹಾಗೂ ಮಂಜಿನ ಪ್ರಭಾವದಿಂದ ಫ‌ಸ್ಟ್‌ ಬ್ಯಾಟಿಂಗ್‌-ಸೆಕೆಂಡ್‌ ಬೌಲಿಂಗ್‌ ಕಷ್ಟ ಎಂಬುದು ಸ್ಪಷ್ಟವಾಯಿತು. 

ಹೈದರಾಬಾದ್‌ನಲ್ಲೂ ಟಾಸ್‌ ಗೆಲುವು ನಿರ್ಣಾಯಕವೆನಿಸಿದರೂ ಇದೊಂದು ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌ ಆಗಿದೆ. ರನ್‌ ಹರಿವು ಜಾಸ್ತಿಯಿದ್ದು, ದೊಡ್ಡ ಮೊತ್ತದ ಮೇಲಾಟವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಅಕಸ್ಮಾತ್‌ ಮತ್ತೆ ಭಾರತಕ್ಕೆ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಸಿಕ್ಕಿದರೂ ಅಗ್ರ ಕ್ರಮಾಂಕದ ಆಟಗಾರರು ತೀವ್ರ ಎಚ್ಚರಿಕೆಯ ಪ್ರದ ರ್ಶನ ನೀಡಬೇಕಾದುದು ಅಗತ್ಯ. ಬೆಹೆÅಂಡಾಫ್ìಗೆ ಬೆದರದೆ ಸಾಗಿದರೆ ಸವಾಲಿನ ಮೊತ್ತ ಪೇರಿಸಿ ಕಾಂಗರೂಗಳ ಮೇಲೆ ಒತ್ತಡ ಹೇರಬಹುದು.

Advertisement

ಗುವಾಹಟಿಯಲ್ಲಿ ಭಾರತಕ್ಕೆ ಗುದ್ದು ಕೊಟ್ಟವರು ಎಡಗೈ ವೇಗಿ ಜಾಸನ್‌ ಬೆಹ್ರೆಂಡಾರ್ಫ್ ಹಾಗೂ 3ನೇ ವಿಕೆಟಿಗೆ ಜತೆಗೂಡಿದ  ಹೆನ್ರಿಕ್ಸ್‌- ಟ್ರ್ಯಾವಿಸ್‌ ಹೆಡ್‌. ಬೆಹ್ರೆಂಡಾರ್ಫ್ ಆರಂಭ ದಲ್ಲಿ ಪಿಚ್ಚಿನ ತೇವಾಂಶದ ಲಾಭವನ್ನು ಪೂರ್ತಿಯಾಗಿ ಎತ್ತಿದರು. ಭಾರತದ ಸ್ಪಿನ್‌ದ್ವಯರಾದ ಚಾಹಲ್‌-ಕುಲದೀಪ್‌ ಅವರಿಗೆ ರಾತ್ರಿಯ ಮಂಜಿನಿಂದ ಚೆಂಡಿನ ಮೇಲೆ ಹಿಡಿತವೇ ಸಿಗಲಿಲ್ಲ. ಹೈದರಾಬಾದ್‌ನಲ್ಲಿ ಕುಲದೀಪ್‌ ಬದಲು ಅಕ್ಷರ್‌ ಪಟೇಲ್‌ ಕಣಕ್ಕಿಳಿಸುವ ಸಾಧ್ಯತೆ ಗೋಚರಿಸುತ್ತಿದೆ.

ನೆಹ್ರಾ, ರಾಹುಲ್‌ಗೆ ಅವಕಾಶ?
ಭಾರತದ ವೇಗದ ಬೌಲಿಂಗ್‌ ವಿಭಾಗ ದಲ್ಲಿ ಬದಲಾವಣೆಯಾಗುವ ಸಂಭವ ಕಡಿಮೆ. ಗುವಾಹಟಿಯಲ್ಲಿ ಭುವನೇಶ್ವರ್‌-ಬುಮ್ರಾ ಉತ್ತಮ ಹಿಡಿತ ಸಾಧಿಸಿದ್ದರು. ಆದರೆ ತಮ್ಮ ನಿವೃತ್ತಿಯನ್ನು ಈಗಾಗಲೇ ಅಧಿಕೃತಗೊಳಿಸಿರುವ ಹಿರಿಯ ಎಡಗೈ ವೇಗಿ ಆಶಿಷ್‌ ನೆಹ್ರಾಗೆ ಒಂದು ಅವಕಾಶ ಕಲ್ಪಿಸುವುದು ನ್ಯಾಯೋಚಿತ. ಆಗ ಅವರನ್ನು ತಂಡಕ್ಕೆ ಸೇರಿಸಿಕೊಂಡದ್ದೂ ಸಾರ್ಥಕವಾಗುತ್ತದೆ. ನೆಹ್ರಾಗಾಗಿ ಯಾರನ್ನೇ ಕೈಬಿಟ್ಟರೂ ಬೇಸರ ಆಗಲಿಕ್ಕಿಲ್ಲ.

ಉಳಿದಂತೆ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಕೆ.ಎಲ್‌. ರಾಹುಲ್‌ ಇನ್ನೂಅವಕಾಶ ಪಡೆದಿಲ್ಲ. ಏಕದಿನ ಸರಣಿ ಯಲ್ಲೂ ರಾಹುಲ್‌ ಅವರನ್ನು ಕಡೆಗಣಿಸ ಲಾಗಿತ್ತು. ಟಿ-20 ಯಲ್ಲಾದರೂ ಅವರಿಗೆ ಅವಕಾಶ ಲಭಿಸೀತೆಂಬ ನಿರೀಕ್ಷೆ ಇಲ್ಲಿಯ ತನಕ ಸಾಕಾರಗೊಂಡಿಲ್ಲ. ಹೈದರಾಬಾದ್‌ನಲ್ಲಿ ರಾಹುಲ್‌ ಅವಕಾಶ ವೊಂದನ್ನು ಎದುರು ನೋಡುತ್ತಿದ್ದಾರೆ.

ಹೊಸ ಹುರುಪಿನಲ್ಲಿ ಆಸೀಸ್‌
ಗುವಾಹಟಿಯಲ್ಲಿ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯದ ಮುಂದೆ ಏಕದಿನ ಸರಣಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ತೆರೆದಿದೆ. ಮೊದಲೇ ಉಲ್ಲೇಖೀಸಿದಂತೆ, ತನ್ನ ಪಾಲಿನ ಮತ್ತೂಂದು ತವರಾಗಿರುವ ಹೈದರಾ ಬಾದ್‌ನಲ್ಲಿ ವಾರ್ನರ್‌ ಹೆಚ್ಚು ಸ್ಫೂರ್ತಿ ಯುತವಾಗಿ ತಂಡವನ್ನು ಮುನ್ನಡೆಸು ವುದು ಖಚಿತ. ಇದೇ ಮಾತನ್ನು ಅವರು ಬ್ಯಾಟಿಂಗಿಗೂ ಅನ್ವ ಯಿಸಿಕೊಳ್ಳಬೇಕಿದೆ. 

ಫಿಂಚ್‌, ಹೆಡ್‌, ಹೆನ್ರಿಕ್ಸ್‌ ಉತ್ತಮ ಫಾರ್ಮ್ನಲ್ಲಿದ್ದಾರೆ. ರನ್‌ ಬರಗಾಲದಲ್ಲಿದ್ದರೂ ಮ್ಯಾಕ್ಸ್‌ವೆಲ್‌ ಇನ್ನೂ ಒಂದು ಅವಕಾಶ ಪಡೆಯಬಹುದು. ಬೌಲಿಂಗ್‌ ವಿಭಾಗದಲ್ಲಿ ಬೆಹ್ರೆಂಡಾರ್ಫ್ ಹೊಸ ಅಸ್ತ್ರವಾಗಿದ್ದಾರೆ. ಕೋಲ್ಟರ್‌ ನೈಲ್‌,  ಟೈ, ಝಂಪ, ಸ್ಟೊಯಿನಿಸ್‌ ಮತ್ತೂಮ್ಮೆ ಉತ್ತಮ ದಾಳಿ ಸಂಘಟಿಸುವ ಉಮೇದಿನಲ್ಲಿದ್ದಾರೆ.

ಹೈದರಾಬಾದ್‌ನಲ್ಲಿ   ಮೊದಲ ಟಿ-20
ಹೈದರಾಬಾದ್‌ನ “ರಾಜೀವ್‌ ಗಾಂಧಿ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ ಐಪಿಎಲ್‌ನ ಖಾಯಂ ತಾಣ. ಸನ್‌ರೈಸರ್ ಹೈದರಾಬಾದ್‌ನ ಕೇಂದ್ರ. ಆದರೂ ಇಲ್ಲಿ ಈವರೆಗೆ ಟಿ-20 ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಶುಕ್ರವಾರದ್ದೇ ಮೊದಲ ಟಿ20 ಮುಖಾಮುಖೀ. ಇದರೊಂದಿಗೆ ಭಾರತದಲ್ಲಿ ನಾಲ್ಕೇ ದಿನಗಳ ಅಂತರದಲ್ಲಿ 2 ನೂತನ ಟಿ20 ಅಂತಾರಾಷ್ಟ್ರೀಯ ತಾಣಗಳು ಉದಯಿಸಿದಂತಾಯಿತು. ಮೊದಲನೆಯದು ಗುವಾಹಟಿಯ “ಬರ್ಸಾಪಾರ ಸ್ಟೇಡಿಯಂ’.

ಹೈದರಾಬಾದ್‌ನಲ್ಲಿ ಭಾರತ ಈವರೆಗೆ 4 ಟೆಸ್ಟ್‌ ಹಾಗೂ 5 ಏಕದಿನ ಪಂದ್ಯಗಳನ್ನಾಡಿದೆ. ಟೆಸ್ಟ್‌ನಲ್ಲಿ 3 ಜಯ ಸಾಧಿಸಿದ್ದು, ಒಂದು ಗೆಲುವು ಆಸ್ಟ್ರೇಲಿಯ ವಿರುದ್ಧವೇ ಬಂದಿದೆ (2013, ಅಂತರ-135 ರನ್‌). ಆದರೆ ಏಕದಿನ ದಾಖಲೆ ಹೇಳಿಕೊಳ್ಳುವಂತಿಲ್ಲ. 5 ಪಂದ್ಯಗಳಲ್ಲಿ ಎರಡನ್ನಷ್ಟೇ ಗೆದ್ದಿದೆ. ಮೂರರಲ್ಲಿ ಸೋತಿದೆ. ಈ ಮೂರರಲ್ಲಿ 2 ಸೋಲುಣಿಸಿದ್ದು ಬೇರೆ ಯಾರೂ ಅಲ್ಲ, ಆಸ್ಟ್ರೇಲಿಯ! 2007ರಲ್ಲಿ 47 ರನ್‌, 2009ರಲ್ಲಿ 3 ರನ್‌ ಸೋಲು ಎದುರಾಗಿತ್ತು. 

ಸಂಭಾವ್ಯ ತಂಡಗಳು
ಭಾರತ

 ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಮಹೇಂದ್ರ ಸಿಂಗ್‌ ಧೋನಿ, ಭುವನೇಶ್ವರ್‌ ಕುಮಾರ್‌/ಆಶಿಷ್‌ ನೆಹ್ರಾ, ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌/ಅಕ್ಷರ್‌ ಪಟೇಲ್‌. 

ಆಸ್ಟ್ರೇಲಿಯ
 ಡೇವಿಡ್‌ ವಾರ್ನರ್‌ (ನಾಯಕ), ಆರನ್‌ ಫಿಂಚ್‌, ಮೊಸಸ್‌ ಹೆನ್ರಿಕ್ಸ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಟಿಮ್‌ ಪೇನ್‌, ನಥನ್‌ ಕೋಲ್ಟರ್‌ ನೈಲ್‌, ಆ್ಯಂಡ್ರೂ ಟೈ, ಆ್ಯಡಂ ಝಂಪ, ಜಾಸನ್‌ ಬೆಹ್ರೆಂಡಾರ್ಫ್.

ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next