Advertisement
ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯ 50 ಓವರ್ ಗಳನ್ನೂ ಆಡಿ 276 ಕ್ಕೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಭಾರತ 48.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 281ರನ್ ಗಳಿಸಿ ಅಮೋಘ ಜಯ ಸಾಧಿಸಿತು.
Related Articles
Advertisement
277 ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ರುತುರಾಜ್ ಗಾಯಕ್ವಾಡ್ ಅತ್ಯಮೋಘ ಆರಂಭ ಒದಗಿಸಿಕೊಟ್ಟರು. 21.4 ಓವರ್ ಗಳಲ್ಲಿ 142 ರನ್ ಗಳ ಜತೆಯಾಟವಾಡಿದರು. 71 ರನ್ ಗಳಿಸಿದ್ದ(77ಎಸೆತ, 10ಬೌಂಡರಿ) ಗಾಯಕ್ವಾಡ್ ಅವರನ್ನು ಝಂಪಾ ಎಲ್ಬಿಡಬ್ಲ್ಯೂ ಮೂಲಕ ಔಟ್ ಮಾಡಿದರು.3 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ರನ್ ಔಟ್ ಆಗಿ ಭಾರಿ ನಿರಾಸೆ ಅನುಭವಿಸಿದರು. 74 ರನ್ ಗಳಿಸಿದ್ದ ಗಿಲ್ ಅವರನ್ನು ಝಂಪಾ ಬೌಲ್ಡ್ ಮಾಡಿದರು. ಉತ್ತಮ ಇನ್ನಿಂಗ್ಸ್ ಆಡಿದ ಗಿಲ್ 63 ಎಸೆತಗಳಲ್ಲಿ 74 ರನ್ ಗಳಿಸಿದರು. 6 ಬೌಂಡರಿ ಮತ್ತು 2 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಇಶಾನ್ ಕಿಶನ್ 18 ರನ್ ಗಳಿಸಿ ಔಟಾದರು.ಸೂರ್ಯಕುಮಾರ್ ಯಾದವ್ 50 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ ಔಟಾಗದೆ 58 ರನ್ ಗಳಿಸಿದರು.