Advertisement

ಇಂಡಿಯಾ-ಅಫ್ಘಾನ್‌ ಟೆಸ್ಟ್‌;ಧವನ್‌,ವಿಜಯ್‌ ಶತಕಗಳಿಸಿ ಔಟ್‌ 

04:25 PM Jun 14, 2018 | |

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಅಫ್ಘಾನಿಸ್ಥಾನದ ಎದುರು ಗುರುವಾರದಿಂದ ನಡೆಯುತ್ತಿರುವ  ಏಕೈಕ ಟೆಸ್ಟ್‌  ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರರಿಬ್ಬರು ಭರ್ಜರಿ ಶತಕ ಗಳಿಸಿ ನಿರ್ಗಮಿಸಿದ್ದಾರೆ. 

Advertisement

ಟಾಸ್‌ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತಕ್ಕೆ ಆರಂಭಿಕರಾದ ಮುರಳಿ ವಿಜಯ್‌ ಮತ್ತು ಶಿಖರ್‌ ಧವನ್‌ ಅವರು ಭರ್ಜರಿ ಆರಂಭ ಒದಗಿಸಿಕೊಟ್ಟರು. 

ಮುರಳಿ ವಿಜಯ್‌ 153 ಎಸೆತಗಳಲ್ಲಿ  105 , ಸ್ಫೋಟಕ ಆಟವಾಡಿದ ಧವನ್‌ 96 ಎಸೆತಗಳಲ್ಲಿ  107 ರನ್‌ಗಳಿಸಿ ನಿರ್ಗಮಿಸಿದರು. ರಾಹುಲ್‌ 54 ರನ್‌ಗಳಿಸಿ ಔಟಾದರು. 

ಚೇತೇಶ್ವರ ಪೂಜಾರ ಮತ್ತು ನಾಯಕ ಆಂಜಿಕ್ಯ ರೆಹಾನೆ ಅವರು ಕ್ರೀಸ್‌ನಲ್ಲಿದ್ದಾರೆ. 

ಭಾರತ 3 ವಿಕೆಟ್‌ ನಷ್ಟಕ್ಕೆ  284 ರನ್‌ಗಳಿಸಿದೆ. 

Advertisement

ಅಫ್ಘಾನ್‌ ಭಾರತದೆದುರು ಟೆಸ್ಟ್‌  ಪಾದಾರ್ಪಣ ಪಂದ್ಯ ವನ್ನಾಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next