Advertisement

ಲಿಯೋನ್‌ ದಾಳಿಗೆ ಹುಲಿಗಳು ಕಂಗಾಲು: 189ಕ್ಕೆ ಆಲೌಟ್‌!

03:34 PM Mar 04, 2017 | |

ಬೆಂಗಳೂರು:  ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ  ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಕೊಹ್ಲಿ ಪಡೆ 2 ನೇ ಪಂದ್ಯದಲ್ಲೂ ಅದೇ ಕಳಪೆ ಆಟವನ್ನು ಪ್ರದರ್ಶಿಸಿದೆ. 

Advertisement

ಆಸೀಸ್‌ನ ಆಫ್  ಸ್ಪಿನ್ನರ್‌ ನಥನ್‌ ಲಿಯೋನ್‌ ದಾಳಿಗೆ ಸಿಲುಕಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ಶನಿವಾರದ ಮೊದಲ ದಿನದ ಆಟದಲ್ಲೇ ಸಂಪೂರ್ಣ ನಿರಾಸೆ ಅನುಭವಿಸಿತು. 71.2 ಓವರ್‌ಗಳಲ್ಲಿ ಕೇವಲ 189 ಕ್ಕೆ ಆಲೌಟಾಗುವ ಮೂಲಕ ಮತ್ತೆ ಕಳಪೆ ಆಟವನ್ನು ಪ್ರದರ್ಶಿಸಿತು. 

ರಾಹುಲ್‌ ಏಕಾಂಗಿ ಹೋರಾಟ 

ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್‌.ರಾಹುಲ್‌ ಏಕಾಂಗಿ ಹೋರಾಟ ನಡೆಸಿ ಕೊನೆಯವರೆಗೂ ಉಳಿದು 90 ರನ್‌ ಗಳಿಸಿದ್ದ ವೇಳೆ ಔಟಾದರು. ಭಾರತದ ಪರ ಅಭಿನವ್‌ ಮುಕುಂದ್‌ 0, ಪೂಜಾರ 17, ನಾಯಕ ಕೊಹ್ಲಿ 12 ರನ್‌ಗೆ ಔಟಾಗುವ ಮೂಲಕ ನಿರಾಶರಾದರು. ರೆಹಾನೆ 17 ರನ್‌ಗೆ ಪೆವಿಲಿಯನ್‌ಗೆ ವಾಪಾಸಾದರೆ, ಕನ್ನಡಿಗ ಕರುಣ್‌ ನಾಯರ್‌ 26 ರನ್‌ ಕೊಡುಗೆ ಸಲ್ಲಿಸಿದರು. ಅಶ್ವಿ‌ನ್‌ 7, ಸಾಹಾ 1, ಜಡೇಜಾ 3 ರನ್‌ಗಳಿಗೆ ಔಟಾದರು. ಕೊನೆಯಲ್ಲಿ ಬಂದ ಇಶಾಂತ್‌ ಶರ್ಮಾ 0,  ಉಮೇಶ್‌ ಯಾದವ್‌ ಔಟಾಗದೆ ಶೂನ್ಯದಲ್ಲಿ ಉಳಿದರು. 

ಲಿಯೋನ್‌ ಬಿಗು ದಾಳಿ 
ಜೀವನ ಶ್ರೇಷ್ಠ ನಿರ್ವಹಣೆ ತೋರಿದ ಸ್ಪಿನ್ನರ್‌ ಲಿಯನ್‌ ಬಿಗು ದಾಳಿ ನಡೆಸಿ 8 ವಿಕೆಟ್‌ ಕಬಳಿಸಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿ ಕಾಡಿದರು. ಸ್ಟಾರ್ಕ್‌ , ಕಿಫೆ ತಲಾ 1 ವಿಕೆಟ್‌ ಪಡೆದರು. 

Advertisement

ಆಸೀಸ್‌ ದಿನದಾಟದ ಅಂತ್ಯಕ್ಕೆ 16 ಓವರ್‌ಗಳ ಆಟದಲ್ಲಿ ವಿಕೆಟ್‌ ನಷ್ಟವಿಲ್ಲದೆ 40 ರನ್‌ಗಳಿಸಿದೆ. ವಾರ್ನರ್‌ 2‌3 ಮತ್ತು ರೇನ್‌ಶೋ 15 ರನ್‌ಗಳಿಸಿ ಆಟವಾಡುತ್ತಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next