Advertisement
ರಾಜೀನಾಮೆ ಅಂಗೀಕಾರ: ಇದೇ ವೇಳೆ, ಕಥುವಾ ಪ್ರಕರಣದ ಆರೋಪಿಗಳ ಪರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಇಬ್ಬರು ಸಚಿವರ ರಾಜೀನಾಮೆಯನ್ನು ರವಿವಾರ ಸಿಎಂ ಮೆಹಬೂಬಾ ಮುಫ್ತಿ ಅಂಗೀಕರಿಸಿದ್ದಾರೆ. ಇದೇ ವೇಳೆ, ಕಥುವಾ ಪ್ರಕರಣದ ಬಗ್ಗೆ ಪೊಲೀಸರ ತನಿಖೆಯು ಕುಮ್ಮಕ್ಕಿನಿಂದ ಕೂಡಿದ್ದು ಎಂದು ಜಮ್ಮು- ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ಗುಲಾಂ ಅಹ್ಮದ್ ಮಿರ್ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಬಹಿರಂಗಗೊಂಡಿದೆ. ಈ ಬಗ್ಗೆ ಪ್ರಸ್ತಾವಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ‘ನಮ್ಮ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಕ್ಕೆ ನಾನು ಕ್ರಮ ಕೈಗೊಂಡಿದ್ದೇವೆ. ಈಗ ರಾಹುಲ್ ಗಾಂಧಿ ಅವರು ಮಿರ್ ರಾಜೀನಾಮೆ ಪಡೆಯಲಿ’ ಎಂದು ಸವಾಲು ಹಾಕಿದ್ದಾರೆ.
ಮರಣದಂಡನೆ ವಿಧಿಸುವ ವ್ಯಕ್ತಿ ಆಸ್ಥೆಯಿಂದ ಆ ಕೆಲಸ ವಹಿಸಿಕೊಂಡಿರುವುದಿಲ್ಲ. ಆದರೆ, ಪುಟಾಣಿ ಮಕ್ಕಳನ್ನು ಕೊಲ್ಲುವಂಥ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದರೆ, ನಾನೇ ಸ್ವಇಚ್ಛೆಯಿಂದ ಮುಂದೆಬರಲು ಹಿಂಜರಿಯುವುದಿಲ್ಲ. ಶಾಂತವಾಗಿರಬೇಕೆಂದು ನಾನು ಬಹಳಷ್ಟು ಯತ್ನಿಸುತ್ತೇನೆ. ಆದರೆ, ನಮ್ಮ ದೇಶದಲ್ಲಿ ಹೀಗಾಗುತ್ತಿರುವುದು ನೋಡಿದರೆ ರಕ್ತ ಕುದಿಯುತ್ತದೆ ಎಂದು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.